ಸ್ಕೌಟ್ಸ್-ಗೈಡ್ಸ್‌ನಿಂದ ಗೀತಗಾಯನ ಸ್ಪರ್ಧೆ

ತುಮಕೂರು, ಸೆ. ೧೪- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಹಂತದ “ಗೀತಗಾಯನ” ಸ್ಪರ್ಧೆಯನ್ನು ಇಲ್ಲಿನ ಗಾಂಧಿನಗರದ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆಯುಕ್ತರಾದ ಜಿಲ್ಲಾ ಸುಭಾಷಿಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪ ಆಯುಕ್ತರು (ಸ್ಕೌಟ್ಸ್) ಚೇತನ್ ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ. ಆ. ಶಾಹ್,  ಸಂಧ್ಯಾ ದಿನಕರನ್‌, ಹುಚ್ಚಯ್ಯ ಭಾಗವಹಿಸಿದ್ದರು.

ಜಿಲ್ಲಾ ಹಂತದ ಈ ಸ್ಪರ್ಧೆಯಲ್ಲಿ ತಿಪಟೂರಿನ ಕಲ್ಪತರು ಸೆಂಟ್ರಲ್ ಪ್ರೌಢಶಾಲೆ ಸ್ಕೌಟ್ಸ್ ವಿಭಾಗದ ಮಕ್ಕಳು ಪ್ರಥಮ ಸ್ಥಾನ, ಕಲ್ಪತರು ಸೆಂಟ್ರಲ್ ಪ್ರೌಢಶಾಲೆ ಗೈಡ್ಸ್ ವಿಭಾಗದ ಮಕ್ಕಳು ದ್ವಿತೀಯ ಸ್ಥಾನ ಹಾಗೂ ಆರ್ಯನ್ ಪ್ರೌಢಶಾಲೆಯ ಮಕ್ಕಳು ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸಿಬ್ಬಂದಿ  ಚಂದ್ರಶೇಖರ್, ಗಂಗಾಂಬಿಕಾ , ನವೀನ್ ಹಾಗೂ ಸುದೇಶ್‌ಕುಮಾರ್ ಉಪಸ್ಥಿತರಿದ್ದರು.

Leave a Comment