ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ ಎಂಬಿಎ ವಿದ್ಯಾರ್ಥಿನಿ ಸಾವು

ಬೆಂಗಳೂರು,ಸೆ.೧೧- ಸ್ಕೂಟಿಗೆ ರೋಡ್ ರೋಲರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಂಗಳೂರು- ಹೊಸೂರು ಮುಖ್ಯ ರಸ್ತೆಯ ಬೊಮ್ಮಸಂದ್ರ ಸರ್ವಿಸ್ ರೋಡ್ ಬಳಿ ಇಂದು ಬೆಳಿಗ್ಗೆ ನಡೆದಿದೆ.
ಬೊಮ್ಮಸಂದ್ರದ ಲಯ(೧೯) ಮೃತ ವಿದ್ಯಾರ್ಥಿಯಾಗಿದ್ದಾರೆ,ಹುಸ್ಕೂರು ಬಳಿಯ ಎಸ್‌ಎಫ್‌ಎಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಲಯ ಅವರು ಬೆಳಿಗ್ಗೆ ಮನೆಯಿಂದ ಸ್ಕೂಟಿಯಲ್ಲಿ ಬೊಮ್ಮಸಂದ್ರ ಸರ್ವಿಸ್ ರೋಡ್ ಮಾರ್ಗವಾಗಿ ಕಾಲೇಜಿಗೆ ತೆರಳುತ್ತಿದ್ದಾಗ ಎದುರು ಕಡೆಯಿಂದ ಬರುತ್ತಿದ್ದ ರೋಡ್ ರೋಲರ್ ಗೆ ಡಿಕ್ಕಿ ಹೊಡೆದು ಪರಿಣಾಮ ಲಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ರೋಡ್ ರೋಲರ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಉದ್ಯೋಗಿ ಸಾವು
ಬನ್ನೇರುಘಟ್ಟ ರಸ್ತೆಯ ಬಸವನಪುರ ಗೇಟ್ ಬಳಿ ಇಂದು ಬೆಳಿಗ್ಗೆ ಕೆಲಸಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಕೃಷ್ಣಯ್ಯ ಎಂಬುವರು ಟಿಪ್ಪರ್‌ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಲಗ್ಗೆರೆಯ ಕೃಷ್ಣಯ್ಯ(೪೦)ಅವರು ಬೆಳಿಗ್ಗೆ ೮.೫೦ರ ವೇಳೆ ಜಿಗಣಿಯಲ್ಲಿನ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಸವನಪುರ ಗೇಟ್ ಬಳಿ ಟಿಪ್ಪರ್‌ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದು ಹುಳಿಮಾವು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Comment