ಸ್ಕೂಟಿಗೆ ಟಿಪ್ಪರ್ ಡಿಕ್ಕಿ

ವಿದ್ಯಾರ್ಥಿ ಮೃತ್ಯು
ಕಿನ್ನಿಗೋಳಿ, ಸೆ.೮- ಯಮದೂತನಾಗಿ ಬಂದ ಟಿಪ್ಪರ್ ಕಾಲೇಜು ವಿದ್ಯಾರ್ಥಿಯೋರ್ವನ ಬಲಿ ತೆಗೆದುಕೊಂಡ ಘಟನೆ ನಿನ್ನೆ ಮಧ್ಯಾಹ್ನ ಕಿನ್ನಿಗೋಳಿ ಸಮೀಪದ ಪೊಂಪೈ ಕಾಲೇಜು ಸಮೀಪ ನಡೆದಿದೆ.
ಕಾರ್ನಾಡು ನಿವಾಸಿ ವರ್ಶಿತ್ (೨೧) ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ವಿದ್ಯಾರ್ಥಿ. ಇನ್ನೊಬ್ಬ ವಿದ್ಯಾರ್ಥಿ ಡೆರಿಕ್ ವಾಸ್ (೨೦) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ವರ್ಶಿತ್ ಮತ್ತು ಡೆರಿಕ್ ವಾಸ್ ಆಕ್ಟಿವಾ ಸ್ಕೂಟಿಯಲ್ಲಿ ಊಟಕ್ಕೆಂದು ಹೊರಟ ಸಂದರ್ಭದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಟಿಪ್ಪರ್ ವರ್ಶಿತ್ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವರ್ಶಿತ್ ಪೊಂಪೈ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಮ್ ವಿದ್ಯಾಥಿಯಾಗಿದ್ದು, ಡೆರಿಕ್ ವಾಸ್ ದ್ವಿತೀಯ ಬಿಬಿಎಮ್ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Comment