ಸ್ಕೂಟರ್‌ಗೆ ರಿಕ್ಷಾ ಡಿಕ್ಕಿ: ಗಾಯ

ಕಾರ್ಕಳ, ನ.೮- ಸ್ಕೂಟರ್‌ಗೆ ಆಟೋ ರಿಕ್ಷಾ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಇಲ್ಲಿನ ಕಸಬ ಗ್ರಾಮದ ಕಾರ್ಕಳ ಪೇಟೆಯಲ್ಲಿ ನಡೆದಿದೆ.

ಗಾಯಾಳು ಮಹಿಳೆಯನ್ನು ಹಾಡಿಯಂಗಡಿಯ ಅರಸುಬೈಲ್‌ನ ಸುನಿತಾ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ಮಾರುಕಟ್ಟೆಯಿಂದ ಪೇಟೆಗೆ ಬರುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದು, ಹಿಂದಿಕ್ಕಿ ಹೋಗುವಾಗ ರಿಕ್ಷಾ ಡಿಕ್ಕಿ ಹೊಡೆದಿದೆ. ಪರಿಣಾಮ ಸುನಿತಾ ಅವರು ಸ್ಕೂಟರ್ ಸಮೇತ ರಸ್ತೆ ಬಿದ್ದು, ಗಾಯಗೊಂಡಿದ್ದಾರೆ. ಆದರೆ ಆಟೋ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಪ್ರಕರಣದ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment