ಸೌರಮಂಡಲ ಎಲ್ಲಿಗೆ ಕೊನೆಯಾಗುತ್ತದೆ

  • ಉತ್ತನೂರು ವೆಂಕಟೇಶ್

ನಾವಿರುವ ಭೂಗ್ರಹವು ಸೇರಿದಂತೆ, ಸೂರ್ಯ ಮತ್ತು 9 ಗ್ರಹಗಳು ಇರುವ ನಮ್ಮ ಸೌರಮಂಡಲದ ವ್ಯಾಪ್ತಿ ಎಲ್ಲಿಗೆ ಕೊನೆಯಾಗುತ್ತದೆ. ಇದರ ವಿಸ್ತಾರವೆಷ್ಟು? ಭೂ ಗ್ರಹದ ವ್ಯಾಪ್ತಿಯನ್ನು ಗುರುತಿಸಲು ಧ್ರುವ ಪ್ರದೇಶಗಳು ಎಲ್ಲೆಗಳಾಗಿರುವಂತೆ ಸೌರಮಂಡಲಕ್ಕೂ ಅಂತಹ ಎಲ್ಲೆಗಳು ಇವೆಯೇ ಎಂಬ ಕುತೂಹಲ ಸಹಜ.

  • ಸೌರಮಂಡಲದ ವ್ಯಾಪ್ತಿ ಎಲ್ಲಿಗೆ ಮುಗಿಯುತ್ತದೆ. ಇದರ ವಿಸ್ತಾರ ಎಷ್ಟು ಎಂಬ ಕುತೂಹಲ ಸಹಜ.

  • ಅದರ ಎಲ್ಲೆ ಎಲ್ಲಿಗೆ ಮುಕ್ತಾಯವಾಗುತ್ತದೆ ಎಂಬುದಕ್ಕೆ ಸರಳ ಉತ್ತರ ಸೂರ್ಯನ ಗುರುತ್ವಾಕರ್ಷಣೆ, ಎಲ್ಲಿಗೆ ಕೊನೆಗೊಳ್ಳುತ್ತದೋ ಅಲ್ಲಿಯವರೆಗೆ ಮಾತ್ರ ಸೌರ ಮಂಡಲಯ ವ್ಯಾಪ್ತಿ.

  • ಆದರೆ ಸೌರಮಂಡಲದ ವಿಸ್ತಾರದ ಬಗ್ಗೆ ಉತ್ತರ ಅಷ್ಟು ಸುಲಭವಾಗಿಲ್ಲ.

  • ಇದರ ವಿಸ್ತಾರ ಕಿ.ಮಿ. ಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಬೆಳಕಿನ ವರ್ಷಗಳಲ್ಲಿ ಅಳೆಯಲಾಗುತ್ತದೆ.

  • ಬೆಳಕು ಒಂದು ಸೆಕೆಂಡಿಗೆ 3,00,000 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಒಂದು ವರ್ಷದಲ್ಲಿ ಹಾಗೂ ಚಲಿಸುವ ದೂರ 9408000, 000,000 ಕಿ.ಮಿ. ಇದು ಒಂದು ಬೆಳಕಿನ ವರ್ಷ.

  • ಈ ಲೆಕ್ಕದಲ್ಲಿ ಸೌರಮಂಡಲದ ವಿಸ್ತಾರ 1 ಲಕ್ಷ ಬೆಳಕಿನ ವರ್ಷಗಳು

7vichara1

ಇದಕ್ಕೆ ಸರಳ ಉತ್ತರವೆಂದರೆ, ಸೂರ್ಯನ ಗುರುತ್ವಾಕರ್ಷಣೆ ಎಲ್ಲಿಗೆ ಕೊನೆಯಾಗುತ್ತದೋ ಅಲ್ಲಿಯವರೆಗೆ ಸೌರಮಂಡಲದ ವ್ಯಾಪ್ತಿ ಇರುತ್ತದೆ. ನಮ್ಮ ಸೌರಮಂಡಲವನ್ನು ಆಕಾಶಗಂಗೆ ಎಂದೂ ಕರೆಯುತ್ತೇವೆ. ಇದರ ಚಿತ್ತಾರವನ್ನು ಮೈಲಿ ಕಿಲೋ ಮೀಟರ್‌ಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಬದಲಿಗೆ ಇದರ ವಿಸ್ತಾರವನ್ನು ಬೆಳಕಿನ ವರ್ಷಗಳು (ಲೈಟ್ ಇಯರ್) ಆಗಿ ಅಳೆಯಲಾಗುತ್ತದೆ.

ಬೆಳಕು ಒಂದು ವರ್ಷದಲ್ಲಿ ಸಂಚರಿಸುವ ದೂರಕ್ಕೆ ಬೆಳಕಿನ ವರ್ಷ ಎನ್ನುತ್ತೇವೆ. ಬೆಳಕು ಒಂದು ಸೆಕೆಂಡಿಗೆ 3,00,000 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಒಂದು ವರ್ಷದಲ್ಲಿ ಅದು ಸಂಚರಿಸುವ ದೂರ 9408000, 000,000 ಕಿಲೋ ಮೀಟರ್ ಇದನ್ನೇ ಒಂದು ಬೆಳಕಿನ ವರ್ಷ ಎನ್ನುತ್ತೇವೆ. ಈ ಲೆಕ್ಕದಲ್ಲಿ ಆಕಾಶಗಂಗೆ ವಿಸ್ತಾರ 1 ಲಕ್ಷ ಬೆಳಕಿನ ವರ್ಷಗಳು.

ಸೂರ್ಯ, ಆಕಾಶಗಂಗೆಯ ಮಧ್ಯಭಾಗದಿಂದ 30 ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿದ್ದಾನೆ. ಅವನ ಸುತ್ತ 9 ಗ್ರಹಗಳು, ಅವುಗಳ ಉಪಗ್ರಹಗಳು, ಅನೇಕ ಧೂಮಕೇತುಗಳು, ಸಣ್ಣಸಣ್ಣ ಗ್ರಹಗಳು ಇವೆಲ್ಲವೂ ಸೌರಮಂಡಲಕ್ಕೆ ಸೇರುತ್ತವೆ.

ಸೌರಮಂಡಲದ ಹೊರಗಿನ ವಲಯವನ್ನು ಹೆಲಿಯೋ ಸ್ಪಿಯರ್ ಎಂದು ಕರೆಯಲಾಗುತ್ತದೆ. ಇಲ್ಲಿ ಸೂರ್ಯನ ಗುರುತ್ವಾಕರ್ಷಣೆ ಇರುವುದಿಲ್ಲ. ಸೌರ ಗಾಳಿಯೂ ಕ್ಷೀಣಗೊಂಡಿರುತ್ತದೆ. ಈ ಹೆಲಿಯೋ ಸ್ಪಿಯರ್ ವಲಯದಲ್ಲಿಯೇ ಕ್ಷುದ್ರ ಗ್ರಹಗಳ ದೊಡ್ಡ ಸಮೂಹವಿದ್ದು, ಇದನ್ನು ಕ್ಯೂಪಿಟರ್ ಬೆಲ್ಟ್ ಎಂದು ಕರೆಯಲಾಗುತ್ತದೆ.

ಸೌರಮಂಡಲದಲ್ಲಿಯ 9 ಗ್ರಹಗಳಿಗೂ ಸೂರ್ಯನೇ ಅಧಿಪತಿ. ತನ್ನಲ್ಲಿಯ ಪ್ರಬಲ ಗುರುತ್ವಾಕರ್ಷಣೆಗೆ ಸೂರ್ಯನಿಗೆ ಅಧಿಪತಿ ಸ್ಥಾನ ತಂದುಕೊಟ್ಟಿದೆ.

ಸೂರ್ಯನ ಗುರುತ್ವಾಕರ್ಷಣೆಗೆ ಒಳಗಾಗಿಯೇ ಭೂಗ್ರಹವೂ ಸೇರಿದಂತೆ, 9 ಗ್ರಹಗಳು ಸೂರ್ಯನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ನಿರಂತರವಾಗಿ ಸುತ್ತುತ್ತಿರುತ್ತವೆ.

ಸೂರ್ಯನಿಗೆ ಅಘಾದವಾದ ಗುರುತ್ವಾಕರ್ಷಣೆ ಇರಲು ತನ್ನಲ್ಲಿರುವ ಅಪಾರ ಪ್ರಮಾಣದ ದ್ರವ್ಯ ರಾಶಿಯೇ ಕಾರಣ. ಸೌರಮಂಡಲದ ಒಟ್ಟು ದ್ರವ್ಯರಾಶಿಯಲ್ಲಿ ಶೇ. 99.90 ರಷ್ಟು ದ್ರವ್ಯರಾಶಿಯನ್ನು ಸೂರ್ಯನೇ ಹೊಂದಿದ್ದಾನೆ.

ಜಲಜನಕ ಮತ್ತು ಹೀಲಿಯಂನಿಂದ ಕೂಡಿರುವ ಸೂರ್ಯನಲ್ಲಿಯ ಹೈಡ್ರೋಜನ್ ಕಣಗಳ ವಿದಳ ಪ್ರಕ್ರಿಯೆ ಅಘಾದವಾದ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ.

ಸೌರಮಂಡಲದ ಆಚೆಗೆ ಅನ್ಯಸೌರಮಂಡಲಗಳು, ನಕ್ಷತ್ರ ಮಂಡಲಗಳೂ ಇವೆ. ನಾಸಾದ ಕೆಪ್ಲರ್ ಟೆಲಿಸ್ಕೋಪ್ ಅನೇಕ ಸೌರಮಂಡಲದ ಆಚೆಗಿನ ಗ್ರಹಗಳನ್ನು ಪತ್ತೆ ಹಚ್ಚಿದೆ.

 

Leave a Comment