ಸೌತೆ, ಕುಂಬಳ ಆರೋಗ್ಯ ಬಹಳ!

ಇತ್ತೀಚಿನ ದಿನಮಾನಗಳಲ್ಲಿ ಜನರಲ್ಲಿ ವಿಶೇಷವಾಗಿ ಪಟ್ಟಣಿಗರಲ್ಲಿ ಆರೋಗ್ಯ ಸಂರಕ್ಷಣೆ ಕುರಿತು ಆಸಕ್ತಿ ಮೂಡಿರುವುದನ್ನು ಗಮನಿಸಬಹುದಾಗಿದೆ.
ನಿತ್ಯ ಒತ್ತಡದ ಬದುಕಿನಲ್ಲೇ ಮಿಂದೇಳುವ ನಗರವಾಸಿಗಳು ತಮ್ಮ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ವಹಿಸುವಲ್ಲಿ ನಿರತರಾಗಿದ್ದಾರೆ.
ಬಿಡುವಿನ ವೇಳೆಯಲ್ಲಿ ಆರೋಗ್ಯ ಸುಧಾರಣೆಗೆ ಕುರಿತ ಆಚಾರ ವಿಚಾರಗಳನ್ನು ತಿಳಿದುಕೊಳ್ಳಲು ಮತ್ತು ಪಾಲಿಸಲು ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
`ದೇಹದ ಆರೋಗ್ಯ ಕೆಟ್ಟರೆ, ಬದುಕಿದ್ದೂ ವ್ಯರ್ಥ’ ಎಂಬ ಭಾವನೆ ಜನಮಾನಸದಲ್ಲಿ ಮೂಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿ ಸುಲಭವಾಗಿ ಮನೆಗಳಲ್ಲಿ ಸುಲಭವಾಗಿ ದೊರೆಯುವಂತಹ ಮನೆಮದ್ದುಗಳಿಗೆ ಜೋತುಬೀಳುತ್ತಿರುವುದು ಸಾಮಾನ್ಯವಾಗಿದೆ.
ವಿಶೇಷವಾಗಿ ಹಣ್ಣು, ತರಕಾರಿ ಸೇವನೆ, ಪೇಯಗಳನ್ನು ತಯಾರಿಸಿಕೊಂಡು ಕುಡಿಯುವತ್ತಲೂ ಗಮನ ಹರಿಸಿದ್ದಾರೆ.
ಉದಾಹರಣೆಗೆ, ಪ್ರಕೃತಿದತ್ತವಾಗಿ ಸಿಗುವ ಹಣ್ಣು ಹಂಪಲುಗಳನ್ನು ಸಕಾಲಕ್ಕೆ ಬಳಸುವ ಕ್ರಮಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಚಿಂತನೆಗೆ ಒಳಗಾಗಿದ್ದಾರೆ.
ಯಾವುದೇ ಕಾಯಿಲೆ ಬಂದಾಗ ಆಲೋಪತಿ ಚಿಕಿತ್ಸೆಗೆ ಮುಂದಾಗುವುದು ಸರ್ವೆಸಾಮಾನ್ಯವಾದರೂ, ಅದರಿಂದ ತಾತ್ಕಾಲಿಕ ಉಪಶಮನ ದೊರೆಯಲಿದೆ. ಆದರೆ ಕಾಯಿಲೆಯ ಮೂಲ ಪತ್ತೆ ಮಾಡಿ, ಔಷಧಿ ತೆಗೆದುಕೊಳ್ಳಲು ಕೆಲವೊಮ್ಮೆ ಕಷ್ಟವಾಗುತ್ತದೆ.
ರೋಗ ಬರುವ ಮುನ್ನವೇ ಮುಂಜಾಗ್ರತೆ ವಹಿಸುವ ಕುರಿತು ವೈದ್ಯಲೋಕ ಸಾರಿಸಾರಿ ಹೇಳುತ್ತಿದೆ.
ಈ ಪೈಕಿ ಮನೆಮದ್ದುಗಳ ಪಾತ್ರ ಕುರಿತು ತಿಳಿ ಹೇಳುವ ಕೆಲಸಗಳಾಗುತ್ತಿವೆ.
ಆಲೋಪತಿ ಔಷಧಿಗಳು ಕೆಲವೊಮ್ಮೆ ಅಡ್ಡಪರಿಣಾಮ ಬೀರಲಿವೆಯಾದರೂ, ಮನೆಮದ್ದುಗಳ ಸೇವನೆ ಮಾಡಿದರೆ, ಇಂತಹ ಸಂಶಯ ಅಥವಾ ಭಯ ಎದುರಾಗುವುದಿಲ್ಲ ಎಂಬುದು ಜನರಿಗೆ ಮನವರಿಕೆಯಾಗುತ್ತಿದೆ.
ವಿಶೇಷವಾಗಿ ಸೌತೆಕಾಯಿ ಮತ್ತು ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಸುಧಾರಣೆಗೆ ಹಲವು ರೀತಿಯಲ್ಲಿ ಸಹಕಾರಿಯಾಗಲಿವೆ.
ಸೌತೆಕಾಯಿ ಮತ್ತು ಕುಂಬಳಕಾಯಿ ರಸಗಳನ್ನು ತಯಾರು ಮಾಡಿಕೊಂಡು ನಿತ್ಯ ಆಹಾರ ರೂಪದಲ್ಲಿ ಕನಿಷ್ಟ ಒಂದು ತಿಂಗಳ ಕಾಲ ಸೇವಿಸಿದರೆ, ಅದರ ಲಾಭ ಏನೆಂಬುದು ತಿಳಿಯಲಿದೆ.
ಈ ಎರಡೂ ರಸಗಳಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು, ಜೀವ ರಸಾಯನಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ರಸಗಳಲ್ಲಿ ವಿವಿಧ ಆಂಟಿ ಆಕ್ಸಿಟೆಂಡ್‌ಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಇವುಗಳನ್ನು ಸೇವನೆ ಮಾಡಿದರೆ, ದೇಹದ ತೂಕ ಇಳಿಸಲು ಸಹಕಾರಿಯಾಗಲಿವೆ.
ಈ ರಸದಲ್ಲಿ ಪ್ಯಾಂಟೋಥೆನಿಕ್ ಆಮ್ಲ ಎಂಬ ಪೌಷಕಾಂಶವಿರುವುದರಿಂದ ಹೊಟ್ಟೆಯಲ್ಲಿ ಸ್ರವಿಸಿದ ಆಮ್ಲವನ್ನು ನಿಷ್ಕ್ರಿಯಗೊಳಿಸಲಿದೆ. ಆ ಮೂಲಕ ಜೀರ್ಣಕ್ರಿಯೆ ಉತ್ತಮಗೊಳಿಸಲಿದೆ.
ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿ ಫ್ಲೇವನಾಯ್ಡುಗಳೂ ಇರುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗವನ್ನೇ ನಿಯಂತ್ರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸೌತೆಕಾಯಿ ಮತ್ತು ಸಿಹಿಕುಂಬಳದಲ್ಲಿ ಉರಿಯೂತ ನಿವಾರಕ ಅಂಶಗಳಿದ್ದು, ಉರಿಯೂತ ಮತ್ತು ಬಾವುಗಳನ್ನು ದೂರಮಾಡಲಿವೆ ಹಾಗೂ ಜಠರದಲ್ಲಿ ಉಂಟಾಗುವ ನೋವುಗಳನ್ನು ಇವು ನಿವಾರಿಸಲಿವೆ.
ಈ ರಸಗಳಲ್ಲಿ ಕ್ಯಾರೋಟೀನ್ ಎಂಬ ಪೌಷ್ಠಿಕಾಂಶವೂ ಇದ್ದು, ಕಣ್ಣಿನ ದೃಷ್ಟಿಯನ್ನು ಸಕ್ಷಮಗೊಳಿಸಲು ನೆರವಾಗುತ್ತವೆ. ಈ ರಸವನ್ನು ನಿಯಮಿತವಾಗಿ ಸೇವಿಸಿದಲ್ಲಿ ದೇಹದಲ್ಲಿನ ರೋಗನಿರೋಧಕ ದಿನೇ ದಿನೇ ಶಕ್ತಿ ವೃದ್ಧಿಯಾಗಲಿದೆ.
ರೋಗಾಣುಗಳು ಕಂಡುಬಂದಲ್ಲಿ ಹತ್ತಿಕ್ಕುವ ಕೆಲಸ ಇದರಿಂದ ಆಗಲಿದೆ.
ಈ ಪೇಯದಲ್ಲಿ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರು ಇದ್ದು, ತ್ಯಾಜ್ಯಗಳು ಸುಲಭವಾಗಿ ವಿಸರ್ಜನೆಗೊಳ್ಳಲು ನೆರವಾಗುತ್ತದೆ. ಇದರಿಂದ ಮಲಬದ್ಧತೆಗೆ ತೆಗೆದುಕೊಳ್ಳುತ್ತಿದ್ದ ಔಷಧಿಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು.

Leave a Comment