ಸೌಂದರ್ಯದ ಗಣಿ ಕಮಲಿ ಪ್ರೇಕ್ಷಕರು ಫಿದಾ

ಪ್ರತಿದಿನ ಕನ್ನಡಿಗರ ಮನಕ್ಕೆ ಲಗ್ಗೆ ಇಡುತ್ತಿರುವ ಕಮಲಿಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಟ್ ಬ್ಯೂಟಿ ಅಮೂಲ್ಯ ಹಳ್ಳಿ ಸೊಗಡಿನ ಅಂದ ಚೆಂದದ ಮುದ್ದು ಮುಖದ ಚೆಲುವೆ ಕಮಲಿಯಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾಳೆ. ಹೌದು ಈ ಕಮಲಿ ಮಹಿಳೆಯರನ್ನು ಮಾತ್ರವಲ್ಲ ಪಡ್ಡೆ ಹುಡುಗರಿಂದ ಹಿಡಿದು ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿಬಿಟ್ಟಿದ್ದಾಳೆ.

kamli

ಎಂದರೆ ಹಳ್ಳಿ ಹುಡುಗಿ. ಬಹುಶಃ ಧಾರವಾಹಿ ತಂಡದವರು ತುಂಬಾ ಕಷ್ಟಪಟ್ಟು ಯಾವುದೋ ಹಳ್ಳಿಮೂಲೆಯಿಂದ ಈ ಪಾತ್ರಕ್ಕಾಗಿಯೇ ಈಕೆಯನ್ನು ಆರಿಸಿ ತಂದಿದ್ದಾರೆ ಎಂದುಕೊಂಡರೆ ಅದು ತಪ್ಪು. ಯಾಕೆಂದರೆ, ಈ ಕಮಲಿ ಹಳ್ಳಿ ಹುಡುಗಿಯಲ್ಲ- ಮಾಡರ್ನ್ ಬೆಡಗಿ ಹಾಟ್ ಬ್ಯೂಟಿ ಅಮೂಲ್ಯ ಎಂಬುದು ಆಕೆಯ ಅದ್ಭುತ ಪೋಟೋಗಳಿಂದ ತಿಳಿದು ಅಚ್ಚರಿಪಡುವಿರಿ.

ಅಷ್ಟಕ್ಕೂ ಕಮಲಿ ನಿಜಜೀವನದಲ್ಲಿ ಎಷ್ಟು ಹಾಟ್ ಬ್ಯೂಟಿ ಆಗಿದ್ದಾರೆ ಎಂದರೆ ನೋಡಿದ ಪ್ರೇಕ್ಷಕ ಮಹಾನುಭಾವ  ಅಮೂಲ್ಯರನ್ನು ನೋಡಲು ಮತ್ತೆ ಮತ್ತೆ ಸಾಮಾಜಿಕ ಜಾಲತಾಣವನ್ನು ಇಣುಕುತ್ತಿದ್ದಾನೆ. ಕಮಲಿ ಪಾತ್ರದ ಅಮೂಲ್ಯಳ ಸೌಂದರ್ಯ ನೋಡಿ ಜನರು ಇನ್ನಷ್ಟು ಆಕೆಗೆ ಫಿದಾ ಆಗಿಬಿಟ್ಟಿದ್ದಾರೆ. ಇಷ್ಟು ದಿನ ಹಳ್ಳಿ ಸೊಗಡಿನಲ್ಲಿ ಎಲ್ಲರನ್ನು ಆಕರ್ಷಿಸಿದ ಅಮೂಲ್ಯ ತಮ್ಮ ಫೇಸುಬುಕ್ ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಹಲವು ಬಗೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಲಾಂಗ್ ಸ್ಕರ್ಟ್, ಶಾಟ್ಸ್, ಜೀನ್ಸ್, ಮಿನಿ ಸ್ಕರ್ಟ್,  ಸೀರೆ ಸೇರಿದಂತೆ ಅನೇಕ ತರಾವರಿ ಉಡುಗೆ ಗಳಲ್ಲಿ ಅಮೂಲ್ಯ ಪೋಟೋಶೂಟ್ ಮಾಡಿಸಿ ಮಿಂಚಿದ್ದಾರೆ. ಈ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಸೂಪರ್ ಆಗಿದೆ ಎಂದು ಅಭಿ ಮಾನಿಗಳು ಹಾಡಿ ಹೊಗಳುತ್ತಿದ್ದಾರೆ.

amulya5ಕಮಲಿ ಎಂದರೆ ಹಳ್ಳಿ ಹುಡುಗಿ. ಬಹುಶಃ ಧಾರವಾಹಿ ತಂಡದವರು ತುಂಬಾ ಕಷ್ಟಪಟ್ಟು ಯಾವುದೋ ಹಳ್ಳಿಮೂಲೆಯಿಂದ ಈ ಪಾತ್ರಕ್ಕಾಗಿಯೇ ಈಕೆಯನ್ನು ಆರಿಸಿ ತಂದಿದ್ದಾರೆ ಎಂದು ಕೊಂಡರೆ ಅದು ತಪ್ಪು. ಯಾಕೆಂದರೆ, ಈ ಕಮಲಿ ಹಳ್ಳಿಹುಡುಗಿಯಲ್ಲ- ಮಾಡರ್ನ್ ಬೆಡಗಿ ಎಂಬುದು ಆಕೆಯ ಅದ್ಭುತ ಪೋಟೋಗಳಿಂದ ತಿಳಿದು ಅಚ್ಚರಿಪಡುವಿರಿ. ಜೀ ವಾಹಿನಿಯಲ್ಲಿ ಮೇ ೨೮ರಿಂದ ಪ್ರಸಾರವಾಗುತ್ತಿರುವ ಆಕರ್ಷಕ ಹೆಸರಿನ ’ಕಮಲಿ’ ಕೆಲವೇ ವಾರಗಳಲ್ಲಿ ವೀಕ್ಷಕರಿಂದ ಪ್ರಶಂಸೆಗೆ ಒಳಪಟ್ಟಿದೆ.

ಸಾವಿರ ಕನಸುಗಳು ಕಮರುವ ಮುನ್ನ.. ಗೆಲುವಿನ ಕಡಲು ಮುಟ್ತಾಳಾ? ಎಂಬ ಅಡಿಬರಹದಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ  ಕಮಲಿ ಪಟ್ಟಣದಲ್ಲಿ ಅನುಭವಿಸುವ ನೋವು, ನಲಿವಿನ ಗೊಂಚಲುಗಳು ಇಲ್ಲಿವೆ. ಪಟ್ಟಣದ ಪಯಣದಲ್ಲಿ ಕಮಲಿಗೆ ನಾಯಕ ಸಿಗುತ್ತಾನೆ. ಅವನಿಂದ ಈಕೆಯ ಬದುಕಿನಲ್ಲಿ ಎಂಥ ತಿರುವು ಸಿಗುತ್ತದೆ ಎಂಬ ಸುತ್ತ ಕಥೆ ಸಾಗುತ್ತದೆ.

ಇನ್ನು ಕಮಲಿ ಪಾತ್ರದಲ್ಲಿ  ನಿಜವಾಗಲೂ ಅಮೂಲ್ಯ ಅರ್ಥಗರ್ಭಿತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಎಂದರೆ ತಪ್ಪಾಗ ಲಾರದು. ಆಕೆಯ ಹಳ್ಳಿ ಶೈಲಿಯ ಮಾತುಗಾರಿಕೆ, ಸಾಧಿಸ ಬೇಕೆಂಬ ಹಂಬಲ, ಸೌಂದರ್ಯದಲ್ಲಿ ಸ್ನಿಗ್ಧತೆ ಇವೆಲ್ಲದರಿಂದ ಕಮಲಿ ಅಲಿಯಾಸ್ ಅಮೂಲ್ಯ  ನಿಧಾನವಾಗಿ ಕನ್ನಡಿಗರ ಹೃದಯ ಹೊಕ್ಕಿ ಆವರಿಸಿಬಿಟ್ಟಿದ್ದಾಳೆ.  ಮುಂದೆ ಭವಿಷ್ಯದಲ್ಲಿ ಈಕೆ ಅತ್ಯುತ್ತಮ ನಟಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಿದೆ ಸ್ಯಾಂಡಲ್‌ವುಡ್.

ಈಜು ಪ್ರಿಯೆ ಅಮೂಲ್ಯ ಕೊರಿಯನ್ ಡ್ರಾಮಾದ ಹುಡುಗಿಗೆ ಈಜು ಎಂದರೆ ತುಂಬಾ ಇಷ್ಟವಾದರೆ ಧಾರಾವಾಹಿಯ ಈ ಕಮಲಿಗೆ ಕಬಡ್ಡಿ ಎಂದರೆ ಪಂಚಪ್ರಾಣ. ತನ್ನ ಪ್ರತಿಭೆಯಿಂದಲೇ ಸ್ಕಾಲರ್‌ಷಿಪ್ ಪಡೆದು ನಗರಕ್ಕೆ ಬರುವ ಕಮಲಿಗೆ ಒಂದಿಷ್ಟು ಸವಾಲುಗಳು ಬರುತ್ತವೆ. ಅವೆಲ್ಲವನ್ನು ಆಕೆ ಮೆಟ್ಟಿ ನಿಂತು ಹೇಗೆ ತನ್ನ ಕನಸು ನನಸಾಗಿಸಿಕೊಳ್ಳುತ್ತಾಳೆ ಎಂಬ ಕಥಾ ಹಂದರ ಈ ಧಾರವಾಹಿಯದ್ದು. ಈ ಕಮಲಿ ಕುರಿತು ಸಾಕಷ್ಟು ಜನರು ಫೇಸ್‌ಬುಕ್‌ನಲ್ಲಿ ಹುಡುಕುತ್ತಿದ್ದಾರೆ. ಆಕೆಯ ಒಂದೆರಡು ವರ್ಷದ ಫೇಸ್‌ಬುಕ್ ಪುಟಕ್ಕೆ ನಾಲ್ಕು ಸಾವಿರ ಕ್ಕಿಂತಲೂ ಹೆಚ್ಚು ಲೈಕ್ ಬಂದಿದೆ.

ಅಚ್ಚರಿ ಗೊತ್ತೆ, ಗೂಗಲ್‌ನಲ್ಲಿ ಕಮಲಿ ಎಂದು ಹುಡುಕಿದರೆ ಕಮಲಿ ಸೀರಿಯಲ್ ಹೀರೋಯಿನ್ ಎಂಬ ಆಯ್ಕೆಯೂ ಬರುತ್ತದೆ. ಆಕೆಯ ಕುರಿತು ತುಂಬಾ ಜನರು ಮಾಹಿತಿ ಹುಡುಕುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಕೊಡೈಕನಾಲ್‌ನಲ್ಲಿ ಚಿತ್ರೀಕರಣಗೊಂಡ ಧಾರವಾಹಿ ಕಮಲಿ ಧಾರಾವಾಹಿಗೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಅರವಿಂದ್‌ಕೌಶಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಕೊಡೈಕನಾಲ್ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಮೊದಲ ಧಾರವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಮಲಿಗೆ ಪೂರ್ಣ ಪ್ರಮಾಣದಲ್ಲಿ ಹಣ ಹೂಡುವುದರ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಅಮೂಲ್ಯಗೌಡ, ಇವರೊಂದಿಗೆ ಹಿರಿಯ ನಟಿ ಪದ್ಮವಾಸಂತಿ ಉಳಿದಂತೆ ನಿರಂಜನ್, ರಚನಾ, ಅಂಕಿತಾ, ಚಂದ್ರಕಲಾಮೋಹನ್, ಬೆಂಗಳೂರುನಾಗೇಶ್ ಮುಂತಾದವರು ನಟಿಸಿದ್ದಾರೆ.

ಅನೇಕ ಧಾರವಾಹಿಗಳಲ್ಲಿ ನಟನೆ ಕಮಲಿ ಖ್ಯಾತಿಯ ನಟಿ ಅಮೂಲ್ಯ ಈಗಾಗಲೇ ಅನೇಕ ವಾಹಿನಿ ಗಳಲ್ಲಿ ಪ್ರಸಾರವಾದ ಅನೇಕ ಧಾರವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸ್ವಾತಿಮುತ್ತು ಎಂಬ ಧಾರಾವಾಹಿಯಲ್ಲಿ ಅಮೂಲ್ಯ ಮೊದಲ ನಟಿಸಿದ್ದರು. ಅನಂತರ ಪುನರ್ ವಿವಾಹ, ಅರಮನೆ ಧಾರಾವಾಹಿಯಲ್ಲಿ ಮಿಂಚಿದ್ದರು.

ಆಕರ್ಷಣೆ ಇನ್ನು ಕಮಲಿ ಧಾರಾವಾಹಿಯಲ್ಲಿ ಕಾಮಿಡಿ ಕಿಲಾಡಿ ಗೋವಿಂದೇ ಗೌಡ ಹಾಗೂ ಗೆಳತಿ ಪಾತ್ರದ ಅಂಕಿತ ಕೂಡ ಪ್ರಮುಖ ಆಕರ್ಷಣೆ ಆಗಿದ್ದಾರೆ. ಧಾರಾವಾಹಿಯಲ್ಲಿ ಕಮಲಿ ಹಾಗೂ ರಿಷಿ ಎಷ್ಟು ಇಷ್ಟ ಆಗುತ್ತಾರೋ, ಅಷ್ಟೆ ಪ್ರಮಾನದಲ್ಲಿ ಕೆಂಚ ಹಾಗೂ ನಿಂಗಿ ಕೂಡ ಜನರನ್ನು ಸೆಳೆದಿದ್ದಾರೆ.

Leave a Comment