ಸೋಲು ಗೆಲುವಿನ ಬಗ್ಗೆ ತಲೆಕೆಡೆಸಿಕೊಳ್ಳಲ್ಲ ವಿಷಾದದಲ್ಲೂ ನಂಬಿಕೆಯಿಲ್ಲ ಪ್ರಿಯಾಂಕ ಚೋಪ್ರಾ ಬಿಂದಾಸ್ ಮಾತು

ಬಾಲಿವುಡ್ ಚಿತ್ರಗಳಲ್ಲಿ ಬಿಜಿಯಾಗಿದ್ದು ಕೊಂಡೇ ಹಾಲಿವುಡ್ ಹಾರಿದ ಬಾಲಿವುಡ್‌ನಲ್ಲಿ ಪ್ರಿಯಾಂಕ ಚೋಪ್ರಾ: ಅಮೆರಿಕಾದ ಕಿರುತೆರೆಗಳಲ್ಲಿ ಕಾಣಿಸಿಕೊಂಡು ಎಲ್ಲೆಡೆ ಜನಪ್ರಿಯತೆ ಪಡೆದ ಬಾಲಿವುಡ್‌ನ ಗ್ಲಾಮರಸ್ ಬೆಡಗಿಗೆ ಹಾಲಿವುಡ್‌ನಲ್ಲಿ ಅವಕಾಶಗಳ ಸುರಿ ಮಳೆ ಬಂದಿದೆ.

ಬಾಲಿವುಡ್ ಮತ್ತು ಹಾಲಿವುಡ್‌ನ ಎರಡು ದೋಣಿಗಳಲ್ಲಿ ಏಕಕಾಲಕ್ಕೆ ಪಯಣಿಸುತ್ತಿರುವ ಪ್ರಿಯಾಂಕ ಚೋಪ್ರಾ ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎನ್ನುವುದರಲ್ಲಿ ನಂಬಿಕೆ ಇಟ್ಟವರು. ಈ ಕುರಿತು ತಮ್ಮದೆ ದಾಟಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಚಿತ್ರಗಳ ಕತೆ ಕೇಳಿ ಇಷ್ಟಪಟ್ಟು ಸಿನಿಮಾಗಳಲ್ಲಿ ನಟಿಸುತ್ತೇವೆ. ಚಿತ್ರ ಪೂರ್ಣಗೊಂಡ ಬಳಿಕ ಅದರ ಸೋಲು ಗೆಲುವು ನಮ್ಮ ಕೈಯಲ್ಲಿರುವುದಿಲ್ಲ. ನಮ್ಮದೇನಿದ್ದರೂ ಚಿತ್ರದಲ್ಲಿ ಸಿಕ್ಕ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುವುದಷ್ಟೇ ನಮ್ಮ ಕೆಲಸ. ಆ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತೇನೆ. ಸೋಲು ಗೆಲುವಿನಲ್ಲಿ ವಿಶ್ವಾಸವಿಲ್ಲ.

ನಿರೀಕ್ಷಿತ ಚಿತ್ರ ಸೋತ ಬಗ್ಗೆ ವಿಷಾದ ವ್ಯಕ್ತಪಡಿಸುವುದರಲ್ಲೂ ನಂಬಿಕೆ ಇಲ್ಲ. ಇಂಥಹುವುದನ್ನು ತಾವು ಒಪ್ಪುವುದಿಲ್ಲ ಎಂದು ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

ಕಿರಿತೆರೆ, ಸಿನಿಮಾ ಸೇರಿದಂತೆ ಯಾವುದೇ ಕೆಲಸ ಸಿಕ್ಕರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ನನ್ನ ಕೆಲಸ. ಆ ಕೆಲಸವನ್ನು ಮಾಡುತ್ತೇನೆ, ಇದರ ಬಗ್ಗೆ ನಂಬಿಕೆ, ವಿಶ್ವಾಸವಿದೆ.

ಒಮ್ಮೆ ಮಾಡಿದ ಚಿತ್ರ ಮತ್ತು ಪಾತ್ರಕ್ಕಿಂತ ಮುಂದಿನ ಚಿತ್ರ ಮತ್ತು ಪಾತ್ರದಲ್ಲಿ ಇನ್ನಷ್ಟು ಸುಧಾರಣೆಗೆ ಗಮನ ಹರಿಸುತ್ತೇನೆ. ಆ ಕೆಲಸವೇ ನನ್ನನ್ನು ಚಿತ್ರರಂಗದಲ್ಲಿ ಎತ್ತರಕ್ಕೆ ಕೊಂಡೊಯ್ದಿದೆ ಎನ್ನುವ ಅಚಲವಾದ ನಂಬಿಕೆ ನನ್ನದ್ದು.

ಹೀಗಾಗಿ ಸೋಲು ಗೆಲುವು ಚಿತ್ರ ಸೋತ ಬಗ್ಗೆ ವಿಷಾದ ವ್ಯಕ್ತಪಡಿಸುವ ಅದರಲ್ಲಿ ನಂಬಿಕೆ ಇಟ್ಟಿಲ್ಲ. ಒಳ್ಳೆಯ ಚಿತ್ರ ನೀಡಬೇಕು ಮತ್ತು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ತುಡಿತ ಸದಾ ನನ್ನಲ್ಲಿ ಅನುರಣಿಸುತ್ತದೆ. ಇದೇ ಕಾರಣಕ್ಕೆ ಹಾಲಿವುಡ್ ಚಿತ್ರಗಳಲ್ಲೂ ಅವಕಾಶ ಸಿಕ್ಕಿದೆ. ಅದನ್ನು ಪ್ರೀತಿಯಿಂದ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ.

ಇಂದು ಚಿತ್ರರಂಗದಲ್ಲಿ ಏನಾದರೂ ಸಾಧಿಸಿದರೆ ಅದಕ್ಕೆ ನನ್ನ ಕಠಿಣ ಪರಿಶ್ರಮವೇ ಕಾರಣ. ಪರಿಶ್ರಮದಲ್ಲಿ ನಂಬಿಕೆ ಇಟ್ಟವಳು ನಾನು ಎಂದು ಪ್ರಿಯಾಂಕಾ ಬಿಂದಾಸಾಗಿ ಹೇಳಿಕೊಂಡಿದ್ದಾರೆ.

***

Leave a Comment