ಸೋಲಿನ ಕಾರಣ: ರಾಯ್‌ಬರೇಲಿಗೆ ಸೋನಿಯಾ, ಪ್ರಿಯಾಂಕಾ ಭೇಟಿ

ರಾಯಬರೇಲಿ,  ಜೂ 12 – ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಲ್ಲಿಗೆ ಆಗಮಿಸಿ ಲೋಕಸಭಾ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ಸೋಲಿನ ನಿಖರ ಕಾರಣ ಅರಿಯಲಿದ್ದಾರೆ.

ಸೋನಿಯಾ ಗಾಂಧಿ ರಾಯಬರೇಲಿಯಿಂದ ಸತತ  ಐದನೇ ಬಾರಿಗೆ 1.65 ಲಕ್ಷ ಮತಗಳ ಅಂತರದಿಂದ ಮರು ಆಯ್ಕೆಯಾಗಿದ್ದಾರೆ, ಇದಕ್ಕಾಗಿ ಅವರು ಮತದಾರರಿಗೆ ಧನ್ಯವಾದ  ಹೇಳಲಿದ್ದಾರೆ.

ಇನ್ನೊಂದೆಡೆ ಪ್ರಿಯಾಂಕಾ ಅವರು ಸೋತ ಲೋಕಸಭಾ ಅಭ್ಯರ್ಥಿಗಳು ಮತ್ತು ಪೂರ್ವಾಂಚಲ ಭಾಗದ 40 ಜಿಲ್ಲಾ ಅಧ್ಯಕ್ಷರ ಜೊತೆ ಸಭೆ ಮಾಡಿ ನಿಖರ ಕಾರಣ ಅರಿಯಲಿದ್ದಾರೆ

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋನಿಯಾ ಗಾಂಧಿಯವರಿಗೆ ಕಾರ್ಯಕರ್ತರು ಭವ್ಯ ಸ್ವಾಗತ  ನೀಡಿದರು.

Leave a Comment