ಸೋಲಿನಿಂದ ಎದೆಗುಂದಿಲ್ಲ: ಪಾಟೀಲ

ಧಾರವಾಡ : ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮಾಡಿದ್ದಕ್ಕೆ ಕೆಲವರು ನಮ್ಮನ್ನು ಖಳನಾಯಕರಂತೆ ಬಿಂಬಿಸಿದರು ಎಂದು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ ಹೇಳಿದರು
ಧಾರವಾಡ ಮುರುಘಾಮಠದ ಪ್ರಸಾದ ನಿಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನೋವು ತೋಡಿಕೊಂಡ ಪಾಟೀಲ
ಪ್ರತ್ಯೇಕ ಧರ್ಮ ಹೋರಾಟದಿಂದಲೇ ನಾವು ಚುನಾವಣೆಯಲ್ಲಿ ಸೋತಿರಬಹುದು, ಆದರೆ, ಎದೆಗುಂದಿಲ್ಲ
ನಮ್ಮ ಹೋರಾಟ ಇಂದಲ್ಲ ನಾಳೆ ಯಶಸ್ವಿ ಆಗೇ ಆಗುತ್ತೆ. ವೈದಿಕ ವ್ಯವಸ್ಥೆಯ ಡಂಬಾಚಾರದ ವಿರುದ್ಧದ ಹೋರಾಟವೂ ಮುಂದುವರೆಯುತ್ತದೆ ಬಸವಪಥದತ್ತ ಸಾಗೇಸಾಗುವೆವು ಎಂದರು

Leave a Comment