ಸೋಫಾದಲ್ಲಿ ಭೂತ

 ಭಾರತದಂತಹ ದೇಶಗಳಲ್ಲಿ ಮೂಢನಂಬಿಕೆ ಸಾಮಾನ್ಯ. ಕೋಟ್ಯಂತರ ದೇವರನ್ನು ಹೊಂದಿರುವ ಈ ದೇಶದಲ್ಲಿ ಧರ್ಮಾಚರಣೆಗಳು ಅವರವರ ನಂಬಿಕೆಗಳನ್ನಾಧರಿಸಿ ನಡೆಯುತ್ತವೆ.

ದೇಶದಲ್ಲಿ ಒಂದೊಂದು ದೇವರಿಗೂ ಒಂದೊಂದು ಕಂದಾಚಾರಗಳಿವೆ. ಈ ಆಚಾರ-ವಿಚಾರಗಳು ಆರಂಭದಿಂದಲೂ ಪಾಲನೆಯಾಗುತ್ತಾ ಬಂದಿದ್ದರೂ ನಾಗರಿಕತೆ ಬೆಳೆದಂತೆಲ್ಲ ಈ ಅನಿಷ್ಠ ಪದ್ಧತಿಗಳಿಗೆ ಅಂತ್ಯ ಹಾಡಲಾಗುತ್ತಿದೆ.

devil1ಮುಂದುವರೆದ ದೇಶಗಳಲ್ಲೂ ಮೌಡ್ಯಾಚರಣೆಗಳು ಇಲ್ಲ ಎಂದು ಹೇಳಲಾಗದು. ಆದರೆ, ಭಾರತಕ್ಕೆ ಹೋಲಿಸಿದಲ್ಲಿ ಈ ಕಂದಾಚಾರಣೆಗಳು ತೀರಾ ಕಡಿಮೆ. ಈಗ ಹೇಳ ಹೊರಟಿರುವುದು ಅಮೆರಿಕ ದೇಶದಲ್ಲಿ ನಡೆದ ಘಟನೆಯನ್ನು ಅಲ್ಲ. ಭೂತೋಚ್ಛಾಟನೆ, ವಾಮಾಚಾರಗಳು ನಡೆಯುತ್ತವೆ ಎಂದು ನಂಬಲಾಗದಂತಹ ಸಂದರ್ಭದಲ್ಲೇ ನಡೆದ ಘಟನೆ ಬೆಚ್ಚಿ ಬೀಳಿಸಿದೆ.

ಲೂಸಿಯಾನದಲ್ಲಿ ದೆವ್ವ-ಭೂತಗಳ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಮಹಿಳೆ ಜೋಲಿನ್ ವಿನ್ ಮಾಡಿಕೊಂಡ ಯಡವಟ್ಟು ಇದಾಗಿದೆ.

ತನ್ನ ಮನೆಯಲ್ಲಿ ಭೂತವೊಂದು ವಕ್ಕರಿಸಿದೆ. ಅದನ್ನು ಹೇಗಾದರೂ ಓಡಿಸಬೇಕು ಎಂದು ಇನ್ನಿಲ್ಲದ ತಂತ್ರಗಾರಿಕೆ ಮಾಡಿದ ಮಹಿಳೆ ಆಸ್ಪತ್ರೆ ಪಾಲಾಗಿ ಚಿಕಿತ್ಸೆ ಪಡೆದು ಮನೆ ಸೇರಿದ್ದಾಳೆ.

ಕೂತರು, ನಿಂತರೂ ಜೋಲಿನ್‌ಗೆ ಮನೆಯಲ್ಲಿ ದೆವ್ವದ್ದೇ ಕಾಟ, ಎದುರಿನ ಸೋಫಾದಲ್ಲಿ ದೆವ್ವ ಕೂತಿದೆ ಎಂದು ಮನೆಯವರು ಹೊರಗಿನವರಿಗೆ ಇನ್ನಿಲ್ಲದ ಕಾಟ ಕೊಟ್ಟಿದ್ದಾಳಂತೆ. ದೆವ್ವ, ಪಿಶಾತಿ ಯಾವುದೂ ಇಲ್ಲ ಎಂದು ಎಲ್ಲರೂ ಹೇಳಿದರೂ ಕಿವಿಗೆ ಹಾಕಿಕೊಳ್ಳಿಕೊಳ್ಳಲಿಲ್ಲ. ಸೋಫಾದಲ್ಲಿ ದೆವ್ವವಿದೆ ಎಂದು ಹೇಳುತ್ತಲೇ ಬಂದು ಎಲ್ಲರಿಗೂ ಭಯ ಹುಟ್ಟಿಸಿದ್ದಳಂತೆ.

ದೆವ್ವದ ಭ್ರಮೆಯಲ್ಲೇ ತೇಲುತ್ತಿದ್ದ ಜೋಲಿನ್ ಅದೊಂದು ದಿನ ಸೋಫಾದಲ್ಲಿರುವ ದೆವ್ವವನ್ನು ಓಡಿಸಲು ಅಗತ್ಯ ಎಲ್ಲ ಸಿದ್ಧತೆ ನಡೆಸಿಯೇ ಬಿಟ್ಟಳು.
ಸೋಫಾ ಮುಂದೆ ಕುಳಿತು ತನಗೆ ತಾನೇ ಭೂತೋಚ್ಛಾಟನೆಯ ಮಂತ್ರಗಳನ್ನು ಪಠಿಸುತ್ತಾ ಪೂಜೆ ನೆರವೇರಿಸಿದಳು.

ಇದ್ದಕ್ಕಿದ್ದಂತೆ ದೆವ್ವ ಕಾಣಿಸಿತು ಎಂದು ದೆವ್ವವೇ ನೀ ಸಾಯಿ ಎಂದು ಸೋಫಾಗೆ ಬೆಂಕಿ ಹಚ್ಚಿದಳು. ದೆವ್ವ ಸಾಯುತ್ತಿದೆ ಎಂದು ಕೇಕೆ ಹಾಕಿ ಮೈ ಮರೆತಿರುವಾಗಲೇ ಸೋಫಾಗೆ ಹಚ್ಚಿದ ಬೆಂಕಿ ಇಡೀ ಮನೆಯನ್ನಾವರಿಸಿತು.

ಬೆಂಕಿ ಮನೆಯನ್ನಾವರಿಸುತ್ತಿದ್ದಂತೆ ಜೋಲಿನ್ ಕೂಡ ಬೆಂಕಿಯ ಮಧ್ಯೆ ಸಿಲುಕಿಕೊಂಡಳು. ಹೊಗೆಯಿಂದ ತುಂಬಿಕೊಂಡಿದ್ದ ಆಕೆಯನ್ನು ಅಗ್ನಿಶಾಮಕ ಅಧಿಕಾರಿಗಳು ರಕ್ಷಿಸಿ ಆಸ್ಪತ್ರೆ ಸೇರಿಸಿದರಂತೆ.

ತನಿಖೆ ವೇಳೆ ಸೋಫಾಗೆ ಬೆಂಕಿ ಹಚ್ಚಿರುವುದು ಕಂಡು ಬಂದಿತು. ಆಸ್ಪತ್ರೆಯಲ್ಲಿದ್ದ ಜೋಲಿನ್‌ಗೆ ಇದೆಲ್ಲ ಹೇಗಾಯಿತು ಎಂದು ಪ್ರಶ್ನೆ ಕೇಳಿದರೆ ಸೋಫಾದಲ್ಲಿ ಭೂತ ಕಾಣಿಸಿತು. ಅದನ್ನು ಸಾಯಿಸಲು ನಾನೇ ಬೆಂಕಿ ಹಚ್ಚಿದೆ ಎಂದು ಹೇಳಿದಳಂತೆ.

Leave a Comment