ಸೋನು ಸೂದ್ ಕಾರ್ಯ ಕೊಂಡಾಡಿರುವ ಸಾನಿಯಾ, ಸೈನಾ, ಮನಿಕಾ

ಮುಂಬೈ, ಮೇ 12- ಕೊರೊನಾ ಸಂಕಷ್ಟ ಕಾಲ ಆರಂಭಗೊಂಡಂದಿನಿಂದ ಅದೆಷ್ಟೋ ನೆರವಿನ ಕಾರ್ಯ ನಡೆಸುತ್ತಿರುವ ಬಾಲಿವುಡ್ ನಟ ಸೋನು ಸೂದ್ .. ಈಗ ವಲಸೆ ಕಾರ್ಮಿಕರ ಸ್ವಸ್ಥಳಗಳಿಗೆ ಮರಳಿಸಲು ವಿಶೇಷವಾಗಿ ೧೦ ಬಸ್ಸುಗಳನ್ನು ವ್ಯವಸ್ಥೆಮಾಡಿ, ಮಾರ್ಗ ಮಧ್ಯೆ ಅವರಿಗೆ ಅಗತ್ಯವಾಗಿರುವ ಭೋಜನ ವ್ಯವಸ್ಥೆಯ ಜತೆಗೆ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳು ಸೇರಲು ಸಾಧ್ಯವಾಗುವಂತೆ ವಿವಿಧ ರಾಜ್ಯಗಳಿಂದ ಸೋನು ಸೂದ್ ಅನುಮತಿ ಪಡೆದುಕೊಂಡಿರುವುದು ಮತ್ತೊಂದು ವಿಶೇಷವಾಗಿದೆ.
ಸೋನು ಸೂದ್ ಅವರು ಕೈಗೊಂಡಿರುವ ಈ ಕಾರ್ಯವನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಮತ್ತೊಬ್ಬ ಟೆನ್ನಿಸ್ ಕ್ರೀಡಾಪಟು ಮಾನಿಕ ಬತ್ರಾ ಕೊಂಡಾಡಿದ್ದಾರೆ.
ಈ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸಲು ಉತ್ತಮ ಕೆಲಸ ಮಾಡಿದ್ದೀರಿ ಸೋನು ಸೂದ್ ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ಬಹಳ ದೊಡ್ಡ ಕೆಲಸ ಎಂದು ಮಾನಿಕ ಹೇಳಿದ್ದರೆ, ನೀವು ಮಾಡಿರುವ ಕೆಲಸ ನಮಗೆ ಬಹಳ ಹೆಮ್ಮೆ ಎನಿಸುತ್ತಿದೆ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ

Leave a Comment