ಸೊಳ್ಳೆ ಓಡಿಸಲು ಟಿಪ್ಸ್

ಬೇವಿನ ಎಲೆಯ ರಸವನ್ನು ತೆಗೆಯಿರಿ. ಅದಕ್ಕೆ ತೆಂಗಿನ ಎಣ್ಣೆಯನ್ನು ಸರಿ ಪ್ರಮಾಣದಲ್ಲಿ ಬೆರೆಸಿ. ಈ ಮಿಶ್ರಣವನ್ನು ಮೈಕೈಗೆ ಹಚ್ಚಿಕೊಳ್ಳಿ. ಬ್ಯಾಕ್ಟೀರಿಯಾ, ವೈರಸ್ ಗಳನ್ನು ಓಡಿಸುವ ಶಕ್ತಿ ಬೇವಿನ ರಸಕ್ಕಿದೆ. ಈ ಮಿಶ್ರಣದಿಂದ ವಾಸನೆಯೊಂದು ಬರುತ್ತದೆ. ಅದು ಸೊಳ್ಳೆಗಳನ್ನು ಎಂಟು ಗಂಟೆಗಳ ಕಾಲ ನಿಮ್ಮಿಂದ ದೂರವಿರಿಸುತ್ತದೆ. ಕರ್ಪೂರಕ್ಕೂ ಸೊಳ್ಳೆ ಓಡಿಸುವ ಶಕ್ತಿ ಇದೆ.

ಕೊಠಡಿಯಲ್ಲಿ ಒಂದು ಕರ್ಪೂರವನ್ನು ಹಚ್ಚಿಡಿ. ೧೫-೨೦ ನಿಮಿಷಗಳ ಕಾಲ ಹಾಗೆಯೇ ಬಿಡಿ. ಕರ್ಪೂರದ ವಾಸನೆಗೆ ಸೊಳ್ಳೆ ಕೊಠಡಿಯಿಂದ ಓಡಿ ಹೋಗಿರುತ್ತದೆ.  ತುಳಸಿ ಗಿಡವನ್ನು ಕಿಟಕಿಯ ಬಳಿ ಇಡಿ. ತುಳಸಿ ಸೊಳ್ಳೆಯನ್ನು ಓಡಿಸುತ್ತದೆ. ಮನೆಯೊಳಗೆ ಸೊಳ್ಳೆ ಪ್ರವೇಶ ಮಾಡಲು ಬಿಡುವುದಿಲ್ಲ.  ನಿಂಬು ಗಿಡ ಕೂಡ ಸೊಳ್ಳೆ ಓಡಿಸುವ ಕೆಲಸ ಮಾಡುತ್ತದೆ. ನಿಂಬೆ ಹಣ್ಣಿನ ರಸಕ್ಕೆ ಎಣ್ಣೆಯನ್ನು ಬೆರೆಸಿ ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಈ ಮಿಶ್ರಣ ಸೊಳ್ಳೆ ಓಡಿಸುವ ಜೊತೆಗೆ ನಂಜು ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

ಬೆಳ್ಳುಳ್ಳಿ ವಾಸನೆ ಅಂದ್ರೆ ಸೊಳ್ಳೆಗಳಿಗೆ ಆಗುವುದಿಲ್ಲ. ಬೆಳ್ಳುಳ್ಳಿಯನ್ನು ನೀರಿಗೆ ಹಾಕಿ ಕುದಿಸಿ. ಆ ನೀರನ್ನು ಮನೆಗೆ ಸಿಂಪಡಿಸಿ. ನಿಮ್ಮ ಮೈಮೇಲೆ ಕೂಡ ಇದರ ಮಿಶ್ರಣವನ್ನು ಚಿಮುಕಿಸಿಕೊಳ್ಳಬಹುದು. ಪುದೀನಾ ಎಲೆಯ ವಾಸನೆಗೂ ಸೊಳ್ಳೆ ಹೆದರುತ್ತದೆ. ಹಾಗಾಗಿ ಪುದೀನಾ ಎಲೆಗಳನ್ನು ಮನೆಯಲ್ಲಿಡಿ. ಇಲ್ಲವೆ ಗಿಡವನ್ನು ಕಿಟಕಿ ಬಳಿ ಇಡಿ.

Leave a Comment