ಸೊರೋಸಿಸ್; ಉರಿಯನ್ನು ತಡೆಯುವುದು ಮತ್ತು ಲಕ್ಷಣಗಳ ನಿರ್ವಹಣ

ಸೊರೋಸಿಸ್ ಚರ್ಮದ ದೀರ್ಘಕಾಲಿಕ ರೋಗವಾಗಿದ್ದು ಅದಕ್ಕೆ ಜೀವನಪರ್ಯಂತ ಚಿಕಿತ್ಸೆ ಹಾಗೂ ನಿರ್ವಹಣೆಯ ಅಗತ್ಯವಿದೆ. ಈ ಸ್ಥಿತಿಯಲ್ಲಿರುವ ರೋಗಿಗಳು ದಪ್ಪ, ಪದರ ಹಾಗೂ ನೋವುಭರಿತ ಮಚ್ಚೆಯಂತಹವುಗಳನ್ನು ಹೊಂದಿರುತ್ತಾರೆ. ಈ ಲಕ್ಷಣಗಳು ಸಾಮಾನ್ಯವಾಗಿ ಮೊಣಕೈ, ಮೂಳೆಗಳು, ಕಾಲುಗಳು ಮತ್ತು ತಲೆಬಬುರುಡೆಗಳ ಮೇಲೆ ಕಾಣಿಸಿಕೊಳ್ಳುತ್ತವೆಯಾದರೂ, ಅವು ದೇಹದ ಯಾವುದೇ ಭಾಗದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು.

ಸೊರೋಸಿಸ್ ಸಾಮಾನ್ಯವಗಿ ಹಂತಹಂತವಾಗಿ ಕಾಣಿಸಕೊಳ್ಳುತ್ತವೆ. ರೋಗಿಗಳು ಚರ್ಮದ ಮೇಲೆ ‘ಉರಿ’ಯ ಭಾವ ಹೊಂದಿದ್ದರೆ ಲಕ್ಷಣಗಳು ಗಂಭೀರವಾಗಬಹುದು ಎಂಬರ್ಥ ನೀಡುತ್ತದೆ. ಮತ್ತು ಕೆಲವೊಮ್ಮೆ ಈ ಲಕ್ಷಣಗಳು ಕೆಲವು ವಾರ ಮತ್ತು ತಿಂಗಳುಗಳಲ್ಲಿ ಕಡಿಮೆಯಾಗುತದೆ. ಸೊರೋಸಿಸ್ ನ ಬೆಳವಣಿಗೆಯಲ್ಲಿ ಮನುಷ್ಯದ ದೇಹದ ರೋಗನಿರೋಧಕ ಶಕ್ತಿ ಮತ್ತು ವಂಶವಾಹಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಚರ್ಮದ ಮೇಲೆ ಉರಿ ಕಾಣಿಸಿಕೊಳ್ಳಲು ಪರಿಸರ ಮತ್ತು ಜೀವನಶೈಲಿಯ ಅಂಶಗಳು ಕಾರಣವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದರಿಂದ ರೋಗಿಗಳು ತಮ್ಮ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಅರಿತು, ಅದನ್ನು ಕಡಿಮೆಗೊಳಿಸಲು ಇಲ್ಲವೇ ಹೊರಗಿನ ವಾತಾವರಣಕ್ಕೆ ಒಡ್ಡಿಕೊಳ್ಳದಂತೆ ತಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬಹುದು.

ಸೊರೋಸಿಸ್ ನ ಕೆಲವು ಸಾಮಾನ್ಯ ಕಾರಣಗಳು ಅದನ್ನು ನಿರ್ವಹಿಸುವ ಸಲಹೆಗಳು

*ಚರ್ಮದ ಗಾಯಗಳು ಮತ್ತು ಕೀಟಗಳ ಕಡಿತ; ನಿಮ್ಮ ಚರ್ಮದ ಮೇಲೆ ಗಾಯ ಇಲ್ಲವೇ ತರಚಿದಂತ ಗಾಯಗಳಾದರೆ, ಅದಕ್ಕೆ ತಕ್ಷಣ ಚಿಕಿತ್ಸೆ ನೀಡಿ. ಯಾವುದೇ ಗಾಯವನ್ನು ಕೆರೆಯಬೇಡಿ. ಜೊತೆಗೆ, ಕೀಟಗಳ(ತಿಗಣೆ) ಕಡಿತದ ಸಾಧ್ಯತೆ ಕಡಿಮೆಗೊಳಿಸಲು ರೆಪೆಲೆಂಟ್ ಗಳನ್ನು ಬಳಸಿ. ಕೆಲವು ಪ್ರಕರಣಗಳಲ್ಲಿ, ಚುಚ್ಚುಮದ್ದು ಕೂಡ ಉರಿಗೆ ಕಾರಣವಾಗಬಹುದು. ಇದರರ್ಥ ನೀವು ಚುಚ್ಚುಮದ್ದುಗಳಿಂದ ದೂರವಿರಬೇಕು ಎಂದಲ್ಲ, ಬದಲಿಗೆ ಮೊದಲೇ ನಿಮ್ಮ ಚರ್ಮರೋಗ ತಜ್ಞರೊಂದಿಗೆ ಈ ಉರಿಯನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು ಮಾತನಾಡಿ.

*ಆಲ್ಕೋಹಾಲ್; ಮದ್ಯಪಾನ ಸೇವನೆಯನ್ನು ಕಡಿಮೆ ಮಾಡಿ. ನೀವು ಮದ್ಯಪಾನ ಮಾಡುವವರಾದರೆ ಅದನ್ನು ವೈದ್ಯರಿಗೆ ಮುಂಚಿತವಾಗಿ ತಿಳಿಸುವುದು ಉತ್ತಮ. ಏಕೆಂದರೆ, ಅಂತಹ ಪರಿಸ್ಥಿತಿಗಳನ್ನು ಸೊರೋಸಿಸ್ ಗೆ ಕೆಲ ಔಷಧಗಳನ್ನು ಸೂಚಿಸದಿರುವುದು ಉತ್ತಮ.

*ಸಿಗರೇಟು ಸೇವನೆ; ಒಟ್ಟಾರೆಯಾಗಿ, ನೀವು ಸಿಗರೇಟು ಸೇವನೆಯನ್ನು ಕೈಬಿಡಬೇಕು. ಆದರೆ, ಅದು ಯಾವಾಗಲೂ ಸುಲಭವಲ್ಲ. ಸಿಗರೇಟು ಸೇವನೆಯನ್ನು ನಿಧಾನವಾಗಿ ಕಡಿಮೆಗೊಳಿಸಿ ನಂತರ ಅದನ್ನು ಸಂಪೂರ್ಣವಾಗಿ ತ್ಯಜಿಸುವ ವಿಧಾನದ ಕುರಿತು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಜೊತೆಗೆ, ಸಿಗರೇಟಿನ ಹೊಗೆಗೆ ಒಡ್ಡಿಕೊಳ್ಳುವುದನ್ನು ಕೂಡ ತಡೆಯಲು ಯತ್ನಿಸಿ.

*ಸೋಂಕುಗಳು; ಟೋನ್ಸಿಲ್ಸ್, ಕಿವಿ ಅಥವಾ ಗಂಟಲಿನ ಸೋಂಕು ಕೂಡ ೨ರಿಂದ ೬ ವಾರಗಳ ನಂತರ ಸೊರೋಸಿಸ್ ನ ಉರಿಗೆ ಕಾರಣವಾಗಬಹುದು. ಸೋಂಕಿಗೆ ಸೂಕ್ತವಾಗಿ ಚಿಕಿತ್ಸೆ ನೀಡುವ ಮೂಲಕ ಉರಿಯನ್ನು ಕಡಿಮೆಗೊಳಿಸಬಹುದು.

*ತಣ್ಣಗಿನ ಅಥವಾ ಬಿಸಿಲಿನ ವಾತಾವರಣ; ಕೆಲ ರೋಗಿಗಳು ವಾತಾವರಣ ತಣ್ಣಗಾದಾಗ ಇಲ್ಲವೇ ಬಿಸಿಯಾದಾಗ ಉರಿಯ ಅನುಭವ ಪಡೆಯುತ್ತಾರೆ. ಅಂತಹ ಪ್ರಕರಣಗಳಲ್ಲಿ, ಚರ್ಮವನ್ನು ಮಾಶ್ಚರೈಸ್ ಮಾಡುವುದು; ಮನೆಯಲ್ಲಿ ಸಾಧ್ಯವಾದಲ್ಲಿ ಆರ್ದ್ರಕಗಳನ್ನು ಅಳವಡಿಸುವುದು; ಬಿಸಿ ನೀರಿನ ಬದಲಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು; ೧೦ ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ಸ್ನಾನ ಮುಗಿಸುವುದು; ಮತ್ತು ಸೂಕ್ತ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಅಗತ್ಯ. ಇತರ ರೋಗಿಗಳಿಗೆ ಬೆಚ್ಚಗಿನ, ಬಿಸಿ ವಾತಾವರಣದಲ್ಲಿ ಉರಿ ಕಾಣಿಸಿಕೊಳ್ಳಬಹುದು. ಇಂತಹ ಪ್ರಕರಣಗಳಲ್ಲಿ, ನಿಮ್ಮ ಚರ್ಮದ ಮಾಶ್ಚರೈಸ್ ಮಾಡಿ ಮತ್ತು ದಿನದಲ್ಲಿ ಹೊರಗೆ ಹೋಗುವಾಗ ಸನ್ ಸ್ಕ್ರೀನ್ ಬಳಸಿ.

*ಒತ್ತಡ; ಒತ್ತಡ ಮತ್ತು ಸೊರೋಸಿಸ್ ಒಂದು ವಿಷವರ್ತಲವಾಗಬಹುದು. ಒತ್ತಡ ಸೊರೋಸಿಸ್ ಉರಿಯನ್ನು ಹೆಚ್ಚು ಮಾಡಬಹುದು ಮತ್ತು ಸೊರೋಸಿಸ್ ರೋಗಕ್ಕೆ ಗುರಿಯಾಗುವುದೇ ರೋಗಿಗೆ ಒತ್ತಡ ಉಂಟುಮಾಡುತ್ತದೆ. ನಿಮ್ಮನ್ನು ಶಾಂತವಾಗಿಸುವ ಮತ್ತು ರಿಲ್ಯಾಕ್ಸ್ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡವನ್ನು ಸೂಕ್ತವಾಗಿ ನಿಭಾಯಿಸಲು ಕಲಿಯಿರಿ.

ಸೊರೋಸಿಸ್ ಗೆ ಯಾವುದೇ ಪರಿಹಾರವಿಲ್ಲ. ಆದರೆ, ರೋಗಿಗಳು ವೈದ್ಯರೊಂದಿಗೆ ಸಹಕರಿಸಿ ಮತ್ತು ಎರಡು ಕೆಲಸಗಳನ್ನು ಶಿಸ್ತಿನಿಂದ ಮಾಡಿದರೆ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಅವುಗಳೆಂದರೆ ಉರಿಯನ್ನು ಹೆಚ್ಚಿಸುವ ಅಂಶಗಳನ್ನು ಆದಷ್ಟು ತಡೆಯಲು ಯತ್ನಿಸಿ ಮತ್ತು ವೈದ್ಯರು ತಿಳಿಸುವ ಔಷಧವನ್ನು ಸ್ವೀಕರಿಸುವುದು. ರೋಗಿಗಳು ನಿರಂತರ ತಪಾಸಣೆಗೊಳಪಡಬೇಕು ಮತ್ತು ರೋಗದ ಲಕ್ಷಣಗಳಲ್ಲಿ ಏನಾದರೂ ಬದಲಾವಣೆಯಿದ್ದರೆ ಅಥವಾ ಉರಿಯಿದ್ದರೆ ವೈದ್ಯರಿಗೆ ಮಾಹಿತಿ ನೀಡಬೇಕು.

– ಡಾ.ಮನೋಜ್ ಪರೇಕ್, ವೈದ್ಯಕೀಯ ನಿರ್ದೇಶಕರು, ಪ್ರೋಡರ್ಮಾ ಸ್ಕಿನ್ ಕ್ಲಿನಿಕ್, ಬೆಂಗಳೂರು

Leave a Comment