ಸೊಮಾನಿ ಸಾಹೇಬ್ ವಿರುದ್ಧ ಸುಳ್ಳು ದೇಶ ದ್ರೋಹದ ಆರೋಪ ಖಂಡಿಸಿ ಪ್ರತಿಭಟನೆ

ಮೈಸೂರು, ಮಾ.12- ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೊಮಾನಿ ಸಾಹೇಬ್ ವಿರುದ್ಧ ಸುಳ್ಳು ದೇಶ ದ್ರೋಹದ ಆರೋಪ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.
ಮಹದೇವಪುರ ರಸ್ತೆಯಲ್ಲಿರುವ ಶಾಂತಿನಗರದ ಏಕ್ ಮಿನಾರ್ ಮಸೀದಿ ಹತ್ತಿರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಜನಾಬ್ ಸಜ್ಜಾದ್ ನೊಮಾನಿ ಸಾಹೇಬ್ ಅವರ ವಿರುದ್ಧ ವೃಥಾ ಸುಳ್ಳು ದೇಶದ್ರೋಹದ ಆರೋಪ ಹೊರಿಸಲಾಗಿದೆ. ಅದನ್ನು ನಾವು ಖಂಡಿಸುತ್ತೇವೆ ಎಂದರು. ವೃಥಾ ಸುಳ್ಳು ಆರೋಪ ಹೊರಿಸುವುದನ್ನು ನಿಲ್ಲಿಸಿ ಎಂದರು.
ಪ್ರತಿಭಟನೆಯಲ್ಲಿ ತಬ್ರೇಜ್ ಸೇಠ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Comment