ಸೊನಾಟಾದ ನೂತನ ಸಂಗ್ರಹಗಳ ಬಿಡುಗಡೆ

ಹುಬ್ಬಳ್ಳಿ, ಸೆ 11- ಭಾರತದ ವಾಚ್ ಉದ್ಯಮದಲ್ಲಿ ಮುಂಚೂಣಿಯಲಿರುವ ಸೊನಾಟಾವು ಎರಡು ನೂತನ ಸಂಗ್ರಹಗಳಾದ -ಬಿಯಾಂಡ್ ಗೋಲ್ಡ್ ಮತ್ತು ಬ್ಲಶ್ ಇಟ್ ಅಪ್ ವಾಚ್‍ಗಳನ್ನು ರಾಜ್ಯದಲ್ಲಿ ಇದೀಗ ಬಿಡುಗಡೆ ಮಾಡಿದೆ.
ಮುಂಬರುವ  ಹಬ್ಬಗಳು ಹಾಗೂ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಂಗ್ರಹಗಳನ್ನು ಬಿಡುಗಡೆ ಮಾಡಲಾಗಿದೆ. ಆಧುನಿಕ ಪುರುಷರು ಎದುರು ನೋಡುವ ಸಂಗ್ರಹಗಳನ್ನು ಗಮನದಲ್ಲಿರಿಸಿಕೊಂಡು ರಿಚ್ ಡಯಲ್ ವರ್ಣಗಳಲ್ಲಿ ಸೊಗಸಾದ ಸ್ಟ್ರ್ಯಾಪ್‍ಗಳಲ್ಲಿ ಆದರೆ ಗೋಲ್ಡ್ ಸ್ಟ್ರ್ಯಾಪ್‍ಗಳಲ್ಲಿ ಇಲ್ಲ. ಬಿಯಾಂಡ್ ಗೋಲ್ಡ್ ಟ್ರೆಂಡಿ ಫೆಸ್ಟಿವ್ ವಾಚ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಸೊನಾಟಾ ಬ್ಲಶ್ ಇಟ್ ಅಪ್ ಸಂಗ್ರಹವು ರೋಸ್ ಗೋಲ್ಡ್ ಫ್ಯಾಷನ್ ಪೋರ್ಟ್‍ಫೋಲಿಯೊದಲ್ಲಿ ಈಗಾಗಲೇ ಯಶಸ್ವಿಯಾಗಿರುವ ಬ್ಲಶ್ ಸಂಗ್ರಹಗಳಲ್ಲಿ ಈ ಮೊದಲೇ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಅಭಿಪ್ರಾಯವ್ಯಕ್ತಪಡಿಸಿರುವ ಸೊನಾಟಾ ಮಾರುಕಟ್ಟೆ ಮುಖ್ಯಸ್ಥ ಉತ್ಕರ್ಷ್ ಥಾಕೂರ್, ಕರ್ನಾಟಕವು ಸೋನಾಟಾಗೆ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ನಮ್ಮ ಗ್ರಾಹಕರಿಗಾಗಿ ಈ ಎರಡು ಹೊಸ ಸಂಗ್ರಹಗಳನ್ನು ಬಿಡುಗಡೆ ಮಾಡಲು ಸಂತಸವಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ, ವಿಶಾಲ ಡೀಲರ್ ಜಾಲ ಹಾಗೂ ನೂತನ ಉತ್ಪನ್ನಗಳ ಪರಿಚಯವು ಕರ್ನಾಟಕದಲ್ಲಿ ಸೊನಾಟವು ಮುಂಚೂಣಿ ಬ್ರ್ಯಾಂಡ್ ಆಗಿ ತನ್ನ ಸ್ಥಾನ ಬಲಪಡಿಸಿಕೊಳ್ಳಲು ನೆರವಾಗಲಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಗುಲ್ಬರ್ಗಾ ನಮ್ಮ ನಿರ್ಣಾಯಕ ಮಾರುಕಟ್ಟೆಗಳಾಗಿವೆ. ಹಾಗೂ ಮುಂಬರುವ ವರ್ಷಗಳಲ್ಲಿ ನಾವು ನಮ್ಮ ಜಾಲವನ್ನು ಇನ್ನಷ್ಟು ವಿಸ್ತರಿಸಿಕೊಂಡು ಈ ನಿಟ್ಟಿನಲ್ಲಿ ಮುನ್ನುಗ್ಗಲಿದ್ದೇವೆ ಎಂದಿದ್ದಾರೆ.
‘ಸೊನಾಟಾವು 1997ರಿಂದ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಉತ್ಪನ್ನವಾಗಿ ನಿರ್ಣಾಯಕ ಪಾತ್ರವಹಿಸಿಸುತ್ತಾ ಬಂದಿದೆ. ಈ ಬ್ರ್ಯಾಂಡ್‍ವಿನ್ಯಾಸದಿಂದ ಮಾತ್ರವಲ್ಲ, ತನ್ನ ನಿಲುವಿನಿಂದಲೂ ಕಾಲದೊಂದಿಗೆ ಮಿಳಿತಗೊಂಡಿದೆ. ಉತ್ತಮ ಗುಣಮಟ್ಟಕ್ಕೆ ಸಮಾನಾರ್ಥಕ ಹಾಗೂ ಗ್ರಾಹಕರಿಗೆ ಹೆಚ್ಚಿನ ಮೌಲ್ಯ ಒದಗಿಸಿದೆ.
ಪುರುಷರು, ಮಹಿಳೆಯರು ಮತ್ತು ಯುಜನರಿಗೆ ಫ್ಯಾಷನ್, ಸ್ಪೋಟ್ರ್ಸ್, ಫಾರ್ಮಲ್, ಡ್ರೆಸ್ಸಿ ಹಾಗೂ ಸಾಂಪ್ರದಾಯಿಕ ಶೈಲಿಗಳಿಗೆ ಹೊಂದುವಂತೆ ಎಲ್ಲರಿಗಾಗಿ ವಾಚ್‍ಗಳು ಹಾಗೂ ಎಲ್ಲ ಸಂದರ್ಭಗಳಿಗಾಗಿ ಕೊಡುಗೆಯನ್ನು ಈ ಸಂಗ್ರಹಗಳ ಮೂಲಕ ಸೊನಾಟಾ ನೀಡಿದೆ. ಎಲ್ಲ ವಲ್ರ್ಡ್ ಆಫ್ ಟೈಟನ್ ಮಳಿಗೆಗಳಲ್ಲಿ ಹಾಗೂ ಅಧಿಕೃತ ಮಲ್ಟಿಬ್ರ್ಯಾಂಡ್ ರೀಟೇಲರ್‍ಗಳಲ್ಲಿ ಸೊನಾಟಾ ವಾಚ್‍ಗಳು ಲಭ್ಯವಿವೆ.

Leave a Comment