ಸೊಂಟ ಸಣ್ಣಗಾಗಬೇಕೆ? ಸೈಕಲ್ ತುಳಿಯಿರಿ

ಸಾಮಾನ್ಯವಾಗಿ ದಪ್ಪ ಇರುವ ಡೊಳ್ಳು ಹೊಟ್ಟೆಯವರಿಗೆ ಹೊಟ್ಟೆ ಕರಗಿಸುವ ಚಿಂತೆ ಇರುತ್ತದೆ. ಹೊಟ್ಟೆಯ ಸುತ್ತಲಿನ ಕೊಬ್ಬು ಹೆಚ್ಚಾದಷ್ಟು ಆರೋಗ್ಯ ತೊಂದರೆಗಳು ಹೆಚ್ಚು. ಹಾಗಾಗಿ ಸೊಂಟ ಹಾಗೂ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಂಡರೆ ಒಳ್ಳೆಯದು. ಅದಕ್ಕಾಗಿ ಹಲವು ವ್ಯಾಯಾಮಗಳನ್ನು ಮಾಡಬಹುದು. ಸೈಕಲ್ ತುಳಿಯುವುದರಿಂದಲೂ ಸೊಂಟದ ಕೊಬ್ಬು ಕರಗಿಸಲು ಸಾಧ್ಯ. ಚಿಕ್ಕವರಿದ್ದಾಗ ದಿನವೂ ಸೈಕಲ್ ತುಳಿದು ಆರೋಗ್ಯದಿಂದ, ಲವಲವಿಕೆಯಿಂದ ಇದ್ದೆವು. ಹಾಗೆಯೇ ದೊಡ್ಡವರಾದ ಮೇಲು ನಿತ್ಯವು ಕೆಲ ಗಂಟೆಗಳ ಕಾಲ ಸೈಕಲ್ ತುಳಿಯುವುದರಿಂದ ಸೊಂಟದ ಕೊಬ್ಬು ಕರಗಿಸಲು ಸಾಧ್ಯ.

ಸೈಕಲ್ ತುಳಿಯುವುದರಿಂದ ಆ ಸಮಯದಲ್ಲಿ ಹೃದಯದ ಬಡಿತ ಹೆಚ್ಚಾಗುತ್ತದೆ. ಇದರಿಂದ ವಿಶೇಷವಾಗಿ ಜೀವ ರಾಸಾಯನಿಕ ಕ್ರಿಯೆಗಳು ಚುರುಕುಗೊಳ್ಳುತ್ತದೆ. ಅಲ್ಲದೆ ಸ್ನಾಯುಗಳ ಚಲನೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುವ ಕಾರಣ ಅನಿವಾರ್ಯವಾಗಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಿಕೊಳ್ಳಲೇ ಬೇಕಾಗುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಯಾವುದೇ ವ್ಯಾಯಾಮದಂತೆ ಸೈಕಲ್ ತುಳಿಯುವುದು ಮಿತಿಬಾರದು ಎಲ್ಲವೂ ಇತಿಮಿತಿಯಲ್ಲಿದ್ದರೆ ಒಳ್ಳೆಯದು.

Leave a Comment