ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ

ಜಕಾರ್ತ, ಆ.೨೫- ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಸೈನಾ ನೆಹ್ವಾಲ್ ಅವರು ಇಂಡೊನೇಷಿಯಾದ ಫಿಟ್ರಿಯಾನಿ ವಿರುದ್ಧ ೨೧-೬, ೨೧-೧೪ ಅಂತರದ ನೇರ ಸೆಟ್‌ಗಳಿಂದ ಜಯ ಗಳಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು. ಪಂದ್ಯದ ಮೊದಲ ಸುತ್ತಿನ ಆಟದಲ್ಲಿ ಸೈನಾ ಕೇವಲ ೧೩ ನಿಮಿಷದಲ್ಲಿ ಫಿಟ್ರಿಯಾನಿ ಅವರನ್ನು ೨೧-೬ ಭಾರಿ ಅಂತರದಲ್ಲಿ ಸೋಲುಣಿಸಿದರು. ಗೆಲುವಿನ ಮೂಲಕ ಸೈನಾ ಭಾರತಕ್ಕೆ ಮತ್ತೊಂದು ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ

Leave a Comment