ಸೈಕಲ್ ಹೊಂದಿರುವ ಯುವಕರಿಗೆ ಡನ್ಜೊ ನಿಂದ ಉದ್ಯೋಗಾವಕಾಶ

ಪರಿಸರ ಕಾಳಜಿಯಿಂದ ಹಾಗೂ ಆರೋಗ್ಯದ ದೃಷ್ಠಿಯಲ್ಲಿ ಇತ್ತೀಚೆಗೆ ಜನರು ಸೈಕಲ್ ಸವಾರಿ ಹೆಚ್ಚಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಡನ್ಜೊ ಸಂಸ್ಥೆ ಕೂಡ ಸೈಕಲ್‌ನಿಂದಲೇ ಯುವಜನತೆಗಾಗಿ ಉದ್ಯೋಗ ಸೃಷ್ಠಿಸಿ ಗಮನ ಸೆಳೆದಿದೆ.

ಎಲ್ಲಾ ನಗರಪ್ರದೇಶಗಳಲ್ಲಿ, ಇವಾಣಿಜ್ಯ ಮತ್ತು ಬಟವಾಡೆ ಸ್ಟಾರ್ಟಪ್ ಗಳಲ್ಲಿ ಹೆಚ್ಚಳದಿಂದಾಗಿ ದ್ವಿಚಕ್ರವಾಹನಗಳ ಚಾಲಕ ಪಾಲುದಾರರಿಗೆ ಬೇಡಿಕೆಯ ಹೆಚ್ಚುತ್ತಿದೆ. ಆದರೆ ಸುಮಾರು ೫೦೦ ದಶಲಕ್ಷ ಯುವಕರಿಗೆ ಕೇವಲ ೩೭ ದಶಲಕ್ಷ ದ್ವಿಚಕ್ರವಾಹನಗಳಿವೆ. ಆಸಕ್ತ ಪಾಲುದಾರರಲ್ಲಿ ಅನೇಕರ ಬಳಿ ಬೈಕ್ ಇಲ್ಲ, ಹಾಗಾಗಿ ಅವರು ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಡನ್ಜೊ ಗೆ ಸರಾಸರಿ ಬಟವಾಡೆಯು ೪ ಕಿಮೀ ದೂರ ಅಥವಾ ಕಡಿಮೆ ಇದ್ದು, ಇದಕ್ಕೆ ಬೈಸಿಕಲ್ ಅತಿಸೂಕ್ತವಾದ ವಿಧಾನವಾಗಿದೆ ಪಿಕಪ್ ಮತ್ತು ಡ್ರಾಪ್ ಮಾಡಲು ಇದ್ದರಿಂದ ಸಾಧ್ಯವಾಗಿದೆ.

ಡನ್ಜೊದಲ್ಲಿ ನಾವು ಯಾವಾಗಲೂ ಪಾಲುದಾರರು ಹೆಚ್ಚು ಸ್ವಾವಲಂಬಿಗಳಾಗಿರಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಿರಲು ಶ್ರಮವಹಿಸುತ್ತಿದ್ದೇವೆ. ತಮ್ಮದೇ ರೀತಿಯಲ್ಲಿ ಉದ್ಯಮಿಗಳಾದ ಅವರು, ಪಾಲುದಾರರಾಗಿ ಬೈಸಿಕಲ್ ಅನ್ನು ವಾಹನಗಳ ಆಯ್ಕೆಯಲ್ಲಿ ಸೇರಿಸಿದಾಗ, ದೀರ್ಘಕಾಲಿಕವಾಗಿ ಅವರು ಮಾಡಬೇಕಾದ ಬಂಡವಾಳ ಹೂಡಿಕೆ ಕಡಿಮೆ ಆಗುತ್ತದೆ. ಬೈಸಿಕಲ್ ಆನ್ನು ನಿರ್ವಹಿಸುವುದು ಸುಲಭ, ಅದರ ಇಂಧನ ವೆಚ್ಚಗಳು ಶೂನ್ಯ, ಹೆಚ್ಚು ವಿಮೆಯ ವ್ಯಾಪ್ಯತೆ ಹೊಂದಿದೆ, ಮತ್ತು ಅಗ್ಗವಾಗಿರುವುದರಿಂದ ಅವು ಆರೋಗ್ಯಕರ ಆಯ್ಕೆಯಾಗಿದೆ. ಈ ಉಳಿತಾಯಗಳು
ಪಾಲುದಾರರಿಗೆ ಮತ್ತು ಸಂಸ್ಥೆಗೆ ಪರಸ್ಪರ ಲಾಭದಾಯಕವಾಗಿದ್ದು, ಬೈಕ್ ಹೊಂದಿರದ ಪಾಲುದಾರರಿಗೆ ಹೆಚ್ಚು ಆದಾಯ ಗಳಿಸಲು ಅವಕಾಶ ನೀಡುತ್ತದೆ ಮತ್ತು ಬಟವಾಡೆಯ ಪಾಲುದಾರರ ಮೈತ್ರಿಯನ್ನು ನಿರ್ಮಿಸುವಾಗ, ಡನ್ಜೊ ತನ್ನ ವೇದಿಕೆಯನ್ನು ಸೇರಬಯಸುವ ವಿವಿಧ ರೀತಿಯ ಪ್ರತಿಭಾನ್ವಿತರಿಗೆ ಮುಕ್ತವಾಗಿ ತೆರೆದಿದೆ. ಸಧ್ಯದ ಫ್ಲೀಟ್ ಪ್ರತಿ ತಿಂಗಳು ೧೮ ಸಾವಿರ ಸಕ್ರಿಯ ಪಾಲುದಾರರಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು, ಕೃಷಿಕರು, ಹಿರಿಯ ನಾಗರಿಕರು, ಶಿಕ್ಷಕರು, ಚಾಲಕರು, ಏಕ ಪೋಷಕರು, ಮತ್ತು ಮನೆಯಾಳುಗಳು ಸೇರಿದ್ದಾರೆ ಎಂದು ಸಿಇಒ ಕಬೀರ್ ಬಿಸ್ವಾಸ್ ತಿಳಿಸಿದ್ದಾರೆ.

ಬೈಸಿಕಲ್ ಬಳಕೆಯಿಂದ ಬೈಕ್ ಇಲ್ಲದೇ ಪರದಾಡುತ್ತಿದ್ದ ಯುವಕರಿಗೆ ಇದೀಗ ಮಾರ್ಗವೊಂದು ಸೃಷಿಸಿರುವ ಡನ್ಜೊ ಸಂಸ್ಥೆ ಅಲ್ಲದೇ ಯಾವುದೇ ಮುಂಗಡ ಹೂಡಿಕೆ ಇಲ್ಲದೆ ಕೌಟುಂಬಿಕ ಆದಾಯ ಹೆಚ್ಚಿಸಿಕೊಳ್ಳಲು ಪಾಲುದಾರರಿಗೆ ಇದು ಅವಕಾಶ ನೀಡಿದೆ.
ಈ ಮಾದರಿಯು ಅನೇಕ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದು, ಇವರು ಕೆಲವು ಘಂಟೆಗಳು ಬಟವಾಡೆ ಮಾಡಿ ಸ್ವಲ್ಪ ಹಣ ಗಳಿಸಲು ಸಾಧ್ಯವಾಗಿದ್ದು, ಜೊತೆಗೆ ಅವರು ತಮ್ಮ ನಗರಗಳನ್ನು ಚೆನ್ನಾಗಿ ತಿಳಿಯುತ್ತಾರೆ. ಡನ್ಜೊದ ಸೈಕಲ್ ಕಾರ್ಯಕ್ರಮವು ಬೆಂಗಳೂರು, ದೆಹಲಿ, ಪುಣೆಗಳಲ್ಲಿ ಆರಂಭವಾಗಿದ್ದು, ಬೇಗನೆ ಇತರ ಪ್ರದೇಶಗಳೂ ಸೇರಲಿವೆ, ಸದ್ಯಕ್ಕೆ ಈಗಾಗಲೇ ಸುಮಾರು ಸಾವಿರ ಪಾಲುದಾರರು ಇದಕ್ಕೆ ಸೇರ್ಪಡೆಯಾಗಿದ್ದಾರೆ.

ಸೈಕಲ್ ಗಳಲ್ಲದೆ, ಡನ್ಜೊ ಈಗ ಸಾಮಾಜಿಕ ಮತ್ತು ಹಣಕಾಸಿ ಲಾಭಗಳಾದ ಕಾರ್ಯದ ಜೀವವಿಮೆ ೫ ಲಕ್ಷದವರೆಗೆ, ಮೆಡಿಕ್ಲೈಂ, ಪಾಲುದಾರರ ಔಷಧಾಲಯಗಳಲ್ಲಿ ಔಷಧಗಳ ಮೇಲೆ ರಿಯಾಯಿತಿ, ಹೆಚ್ಚು ದಕ್ಷ ಪಾಲುದಾರರ ಕುಟುಂಬದ ತುರ್ತು ಪರಿಸ್ಥಿತಿಗೆ ಕರೆದಾಗ ಬರುವ ವೈದ್ಯರು, ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಉತ್ತೇಜಕಗಳು, ಮತ್ತು ಉನ್ನತ ದಕ್ಷತೆಯ ಪಾಲುದಾರರಿಗೆ ರಾಷ್ಟ್ರೀಯ ಗೌರವದ ಕಾರ್ಯಕ್ರಮವನ್ನು ನೀಡುತ್ತಿದ್ದೇವೆ.

ಕಬೀರ್ ಬಿಸ್ವಾಸ್, ದಲ್ವೀರ್ ಸುರಿ, ಮುಕುಂದ್ ಝಾ, ಮತ್ತು ಅಂಕುರ್ ಅಗರ್ವಾಲ್ ಅವರು ೨೦೧೫ರಲ್ಲಿ ಸ್ಥಾಪಿಸಿದ ಡನ್ಜೊ ಡಿಜಿಟಲ್ ತಂತ್ರಜ್ಞಾನದ ಸಂಸ್ಥೆಯಾಗಿದ್ದು, ಇದು ವಾಣಿಜ್ಯ, ಕೌರಿಯರ್ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ಸಾಧ್ಯವಾಗಿಸುತ್ತದೆ. ಇದರ ೩ ಮುಖಗಳ ವೇದಿಕೆಯು ಸ್ಥಳೀಯ ವ್ಯಾಪಾರಿಗಳು, ಸ್ವತಂತ್ರ ಬಟವಾಡೆ ಪಾಲುದಾರರು, ಮತ್ತು ಬಳಕೆದಾರರೊಂದಿಗೆ ಕೆಲಸ ಮಾಡಿ, ದಿನಸಿ, ಆಹಾರ, ಪ್ಯಾಕೇಜ್, ಔಷಧಗಳು, ಮತ್ತು ಬಳಕೆದಾರರಿಗೆ ಬೇಕಾಗುವ ಯಾವುದೇ ವಸ್ತುಗಳನ್ನು ನಗರದಾದ್ಯಂತ ಸಾಗಿಸಲು ನೆರವಾಗುತ್ತದೆ. ಡನ್ಜೊ ಗುರುಗ್ರಾಂ ನ್ಬಲ್ಲಿ ಬೈಕ್ ಟಾಕ್ಸಿ ಸೇವೆಯನ್ನೂ ಹೊಂದಿದೆ. ಕಳೆದ ೧೮ ಮಾಸಗಳಲ್ಲಿ, ಡನ್ಜೊ ೩೦ ರಷ್ಟು ಬೆಳೆದಿದೆ ಮತ್ತು ಪ್ರತಿ ಮಾಸ ೨ ದಶಲಕ್ಷ ಆರ್ಡರ್ ಗಳ ಮೈಲಿಗಲ್ಲನ್ನು ಸಾಧಿಸಿದೆ. ಡನ್ಜೊ ಪ್ರತಿ ನಗರದ ಲಾಜಿಸ್ಟಿಕ್ ಪದರವಾಗಿ ಇರಲು ಮತ್ತು ೨೦೨೦ ವೇಳೆಗೆ ಉನ್ನತ ೨೫ ನಗರಗಳಲ್ಲಿ ಇರುವ ಗುರಿಯನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗೆ: ಜuಟಿzo.ಛಿom

Leave a Comment