ಸೇವಾ ಸಿಂಧು ಯೋಜನೆಗೆ ರಾಮದಾಸ್ ಚಾಲನೆ

ಮೈಸೂರು. ಮೇ.26- ಸೇಫ್ ವ್ಹೀಲ್ಸ್ ಮತ್ತು ಭಾರತ್ ಅನೌಪಚಾರಿಕ ಉಪಕ್ರಮ(ರಿ) ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಸೇವಾ ಸಿಂಧು ಪೋರ್ಟಲ್ ಆನ್ ಲೈನ್ ನಲ್ಲಿ ಉಚಿತ ಅರ್ಜಿ ಸಲ್ಲಿಸುವ ಸೇವಾ ಕೇಂದ್ರಕ್ಕೆ ಸರಸ್ವತಿಪುರಂನಲ್ಲಿಂದು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಚಾಲನೆ ನಿಡಿದರು.
ಬಳಿಕ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿರುವ ಅಸಂಘಟಿತ ವಲಯದಲ್ಲಿ ಇರುವ ಕೆಲಸ ಮಾಡತಕ್ಕ ಸುಮಾರು ಎರಡು ಸಾವಿರದ ಇನ್ನೂರು ಕೋ.ರೂ.ಗಳ ಒಂದು ಯೋಜನೆ ಜಾರಿಗೊಳಿಸಿದರು. ಅದರಲ್ಲಿ ವಿಶೇಷವಾಗಿ ಆಟೋ ಚಾಲಕರು, ಕ್ಯಾಬ್ ಚಾಲಕರು ಯಾರು ನಿರಂತರವಾಗಿ ದುಡಿಮೆಯನ್ನು ಮಾಡುತ್ತಿದ್ದಾರೆ ಅವರಿಗೋಸ್ಕರ. ಅವರ ಖಾತೆಗೆ ಐದು ಸಾವಿರ ರೂ.ಹಾಕುವಂತಹ ಒಂದು ಯೋಜನೆಯನ್ನು ಅದಕ್ಕೆ ಬೇಕಾದ ಮಾಹಿತಿಯನ್ನು ಸೇವಾ ಸಿಂಧುಗೆ ಅಪ್ ಲೋಡ್ ಮಾಡಲಿಕ್ಕೋಸ್ಕರ ಇರುವಂತಹ ಕಾರ್ಯಕ್ರಮ. ಮೊನ್ನೆ ಸರ್ಕಾರ ಚಾಲನೆ ನೀಡಿದೆ. ಈ ದೃಷ್ಟಿಯಿಂದ ಜನಸಾಮಾನ್ಯರು ತಮ್ಮ ಮೊಬೈಲ್ ನಲ್ಲಿಯೇ ಸೇವಾ ಸಿಂಧುಗೆ ಅಪ್ಲೋಡ್ ಮಾಡಬಹುದಾದರೂ ಕೂಡ ಎಷ್ಟೋ ಜನರಿಗೆ ಅದು ಗೊತ್ತಾಗಲ್ಲ ಎನ್ನುವ ಕಾರಣ ಇಟ್ಟುಕೊಂಡು ಇವತ್ತು ವಿಶೇಷವಾಗಿ ಸೇಫ್ ವ್ಹೀಲ್ಸ್ ,ಲೆಟ್ಸ್ ಡು ಇಟ್ ನ ಜೊತೆಯಲ್ಲಿ ಸಮಾಜದಲ್ಲಿರುವ ಎಲ್ಲ ಚಾಲಕರುಗಳಿಗೆ ಅವರ ದಾಖಲೆಗಳನ್ನು ತೆಗೆದುಕೊಂಡು ಏನು ಐದು ದಾಖಲೆಗಳನ್ನು ಕೊಡಬೇಕಂತ ಆಗಿದೆ. ಚಾಲನಾ ಪರವಾನಗಿ ಪತ್ರ, ಬ್ಯಾಡ್ಜ್, ನಂಬರ್ ಹಾಗೆ ಆರ್ ಸಿ ಬುಕ್ ಜೊತೆಯಲ್ಲಿ ಆಧಾರ ಕಾರ್ಡ್ ಪ್ರತಿ ತಂದು ಅಪ್ ಲೋಡ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಗರದಲ್ಲಿರುವ ಸಹಸ್ರಾರು ಜನ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಅಪ್ ಲೋಡ್ ಮಾಡುವ ಸಂದರ್ಭದಲ್ಲಿ ಯಾವ ಕ್ಯಾಬ್ ಗಳು 6ಸೀಟುಗಳ ಮೇಲಿರುವ ವಾಹನಗಳು ಅದನ್ನು ಸಿಂಧು ನಲ್ಲಿ ತಗೋತಿಲ್ಲ ಅನ್ನುವ ಸಮಸ್ಯೆ ಇದೆ. ವಾಹನದಲ್ಲಿ ಒಂದು ವಾಹನವನ್ನು ಇಬ್ಬರು ಚಾಲಕರು ನಡೆಸುವಂತಹ ವ್ಯವಸ್ಥೆಯಿದೆ. ಇದರಲ್ಲಿ ಒಬ್ಬ ಚಾಲಕನಿಗೆ ಮಾತ್ರ ಸಿಗತ್ತೆ. ಮತ್ತೊಬ್ಬ ಚಾಲಕನಿಗೆ ಸಿಗಲ್ಲ ಎಂಬ ಸಮಸ್ಯೆ ಇವೆಲ್ಲವೂ ಸೇವಾಸಿಂಧು ಅಪ್ ಲೋಡ್ ಮಾಡಿದಾಗ ಗೊತ್ತಾಗ್ತಿದೆ. ಈ ವಿಷಯವನ್ನು ಇಂದೇ ಟ್ರಾನ್ಸ್ ಪೋರ್ಟ್ ಕಮೀಷನರ್ ಬಳಿ ಮಾತನಾಡಿ ಮಂತ್ರಿಗಳ ಜೊತೆಯಲ್ಲೂ ಚರ್ಚೆ ಮಾಡಿ ಇದಕ್ಕೆ ಪರಿಹಾರ ಹುಡುಕುವುದು ಹೇಗೆ ಎನ್ನುವುದರ ಕುರಿತು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಇನ್ನೊಂದು ಬಹಳ ದೊಡ್ಡ ವಿಚಾರ ಮೈಸೂರು ಇಡೀ ದೇಶದಲ್ಲಿ ಯಾವುದೇ ಸಾವು ನೋವು ಇಲ್ಲದೇ ಕೊರೋನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಡಳಿತ, ವೈದ್ಯರು, ಪ್ಯಾರಾಮೆಡಿಕಲ್, ನರ್ಸಿಂಗ್ ಸ್ಟಾಪ್, ಪೊಲೀಸ್, ಆಶಾಕಾರ್ಯಕರ್ತರು ಅವರೆಲ್ಲರೂ ಮೈಸೂರನ್ನು ಕೊರೋನಾ ಮುಕ್ತವಾಗಿಸುವಲ್ಲಿ ಶ್ರಮಿಸಿದ್ದಾರೆ. ಇವತ್ತಿನಿಂದ 30ನೇ ತಾರೀಖಿನವರೆಗೆ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದವರಿಗೆ ಉಚಿತವಾಗಿ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾಂಕೇತಿಕವಾಗಿಯೂ ಚಾಲನೆ ನೀಡಲಾಗಿದೆ. ಜೊತೆಜೊತೆಯಲ್ಲಿ ನಿರಂತರವಾಗಿ ವಾರಿಯರ್ಸ್ ರೂಪದಲ್ಲಿ ಚಾಲಕರಿಗೂ ಸರ್ಕಾರದ ಸವಲತ್ತು ತಲುಪಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಕೊರೋನಾ ನಂತರದಲ್ಲಿ ಏನು ಎನ್ನುವ ಚಿಂತನೆ ನಡೆಸಲಾಗುತ್ತಿದೆ. ಮೈಸೂರು ಪ್ರವಾಸೋದ್ಯಮವನ್ನೇ ನಂಬಿಕೊಂಡಿದೆ. ವಿಶೇಷ ಪ್ಯಾಕೇಜ್ ಹೇಗೆ ಕೊಡಬೇಕು ಎನ್ನುವುದನ್ನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ನೀಡುವ ಕೆಲಸ ಕೂಡ ಆಗುತ್ತಿದೆ. ಕೊರೋನಾ ಯಾವ ಸ್ಥಿತಿಯಲ್ಲಿದೆ ಎನ್ನುವುದು ಗೊತ್ತಿಲ್ಲ. ಅದರ ಜೊತೆಯಲ್ಲಿಯೇ ಬದುಕಬೇಕಾಗಿದೆ. ಮತ್ತೆ ಮೈಸೂರಿಗೆ ಬರದಂತೆ ತಡೆಯುವ ಕೆಲಸವಾಗುತ್ತಿದೆ ಎಂದರು.
ಈ ಸಂದರ್ಭ ಸೇಪ್ ವ್ಹೀಲ್ಸ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಬಿ.ಎಸ್,ಮತ್ತಿತರರು ಉಪಸ್ಥಿತರಿದ್ದರು.

Share

Leave a Comment