ಸೇವಾ ಸಹಕಾರಿ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಮುಂಡಗೋಡ,ಫೆ.16-: ತಾಲೂಕಿನ ಚವಡಳ್ಳಿ ಮಲವಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಪರಶುರಾಮ ತಹಸೀಲ್ದಾರ್ ಹಾಗೂ ಉಪಾಧ್ಯಕ್ಷರಾಗಿ ನಿಂಗಪ್ಪ ಭದ್ರಾಪುರ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಒಟ್ಟು 13ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 10 ಹಾಗೂ ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪರಶುರಾಮ ತಹಸೀಲ್ದಾರ್ ಮತ್ತು ಧರ್ಮಣ್ಣಾ ಆರೆಗೊಪ್ಪ ನಾಮಪತ್ರ ಸಲ್ಲಿಸಿದ್ದರು. ಪರಶುರಾಮ ತಹಸೀಲ್ದಾರ್ 10 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಪ್ಪ ಭದ್ರಾಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ಆನಂದ ಕೊರವರ ಮತ್ತು ದಯಾನಂದ ನಾಯ್ಕ ಕಾರ್ಯ ನಿರ್ವಹಿಸಿದರು.
ಮುಖಂಡರಾದ ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಮಂಜುನಾಥ ಕಟಗಿ, ನಿಂಗಜ್ಜ ಕೋಣನಕೇರಿ, ವೈ.ಪಿ.ಪಾಟೀಲ, ಅರ್ಜುನ ಶಿಂಗನಳ್ಳಿ, ಮಹೇಶ ಅರ್ಕಸಾಲಿ ಇತರರಿದ್ದರು.

Leave a Comment