ಸೇವಾಸಿಂಧು, ಎಐಐಎಸ್ ಹೆಚ್ಇ ಕಾರ್ಯಗಾರಕ್ಕೆ ಚಾಲನೆ

ಮೈಸೂರು. ಫೆ.29- ಉನ್ನತ ಶಿಕ್ಷಣ ಸಂಪೂರ್ಣ ಡಿಜಿಟಲೀಕರಣವಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ವಿಶ್ವವಿದ್ಯಾನಿಲಯಗಳ ಜೊತೆ ಕೈಜೋಡಿಸಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಅವರು ಇಂದು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಅಧ್ಯಕ್ಷರು, ಪ್ರಾಂಶುಪಾಲರು, ನೋಡೆಲ್ ಅಧಿಕಾರಿಗಳಿಗೆ ಹಮ್ಮಿಕೊಂಡ “ಸೇವಾಸಿಂಧು ಹಾಗೂ ಎಐಐಎಸ್ ಹೆಚ್ಇ” ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಲೇಜುಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಹಾಗೂ ಉನ್ನತೀಕರಣ ಕುರಿತು ತರಬೇತಿ ನೀಡಲಾಗುತ್ತದೆ. ಬಹಳ ಸೂಕ್ತ ಮತ್ತು ಅವಶ್ಯಕತೆಯಿದೆ ಎಂದು ತಿಳಿದು ವಿಶ್ವವಿದ್ಯಾನಿಲಯದಡಿ ಬರುವ ಎಲ್ಲ ಪ್ರಾಂಶುಪಾಲರಿಗೆ, ಆಟೋಮೇಶನ್ ಆಫ್ ಆಲ್ ಯುನಿವರ್ಸಿಟಿಸ್ ಗೆ ತರಬೇತಿ ನೀಡಬೇಕು. ಅವರು ಚಟುವಟಿಕೆಯಿಂದ ಕೆಲಸ ಮಾಡುವುದರಿಂದಲೇ ತಂತ್ರಾಂಶಗಳು ಕೆಲಸ ಮಾಡುತ್ತಿವೆ. ಎಷ್ಟೋ ಸಲ ಏನಾಗತ್ತೆ, ತಂತ್ರಾಂಶಗಳು ಪ್ರಾರಂಭವಾಗತ್ತೆ. ಸ್ವಲ್ಪ ದಿನ ಇರತ್ತೆ. ಆಮೇಲೆ ಕೆಟ್ಟೋಗತ್ತೆ. ಅದನ್ನು ಯಾರೂ ಸರಿ ಮಾಡಲ್ಲ. ಇದು ನಾವು ನೋಡಿದ ಪದ್ಧತಿ ಎಂದು ಬೇಸರ ವ್ಯಕ್ತಪಡಿಸಿದರು.
ಇ-ಗವರ್ನೆನ್ಸ್ ನ್ನು ಯಾರೂ ಸುಲಭವಾಗಿ ಒಪ್ಪಿಕೊಳ್ಳಲ್ಲ. ತಂತ್ರಾಂಶಗಳ ಪ್ರಯೋಗ, ಉಪಯೋಗ ತಿಳಿದುಕೊಂಡು ನೇರವಾಗಿ ನಾವೇನು ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡಬೇಕು ಅನ್ನೋ ಸಲುವಾಗಿ ತಂತ್ರಾಂಶಗಳನ್ನು ಪ್ರಯೋಗ ಮಾಡಿದ್ದಾರೆ ಎಂದು ತಿಳಿಸಿದರು.
ಎಲ್ಲರೂ ಕಾಮನ್ ಆಗಿ ಉಪಯೋಗಿಸಿಕೊಳ್ಳಬೇಕು. ಒಂದು ಅರ್ಜಿ ಕೊಟ್ಟರೆ ಅದು ತಲುಪಲಿಕ್ಕೇ 7ದಿನ ಬೇಕಾಗತ್ತೆ. ಆನ್ ಲೈನ್ ಮಾಡಿ ಅದರ ಮೂಲಕ ಕಳುಹಿಸಿದರೆ ಎಷ್ಟು ಬೇಗ ತಲುಪತ್ತೆ. 49ಸರ್ವೀಸ್ ಇದೆ ಎಂದಿದ್ದಾರೆ. ಸದ್ಯಕ್ಕೆ 15ಸರ್ವೀಸ್ ನಡೀತಿದೆ. ಏನು ಬೇಕಾದರೂ ಸವಲತ್ತು ಸಿಗತ್ತೆ. ಅದನ್ನು ಉಪಯೋಗಿಸಲು ಸಿದ್ಧರಿರಬೇಕು ಎಂದರು. ಎಲ್ಲವೂ ಆನ್ ಲೈನ್ ನಲ್ಲಿ ಬರತ್ತೆ. ಡಿಜಿಟಲೈಶೇನ್ ನಲ್ಲಿ ಇದು ಮೊದಲ ಹಂತ. ಹೈಯರ್ ಎಜುಕೇಶನ್ ಸಂಪೂರ್ಣ ಡಿಜಿಟಲೈಜೇಶನ್ ಆಗಬೇಕೆಂಬುದು ಉದ್ದೇಶ. 2020ರಲ್ಲಿ ವಿವಿಯಲ್ಲಿ 80% ಮಾಡಬೇಕೆಂದುಕೊಂಡಿದ್ದೇವೆ. 20% ಅಗಿದೆ. ಇದಕ್ಕೆ ಸರ್ಕಾರ ಕೈಜೋಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರದಕಾರದ ಇ-ಆಡಳಿತ ಪರಿಣಿತ ಭಾಗ್ಯವಾನ್, ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment