ಸೇವಾಲಯ ಬಡ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವ ದೇವಾಲಯ

ತಾವೇ ಹೆತ್ತ ಒಂದೋ ? ಎರಡೋ ಮಕ್ಕಳನ್ನು ಸಹ ಸಾಕಲಾಗದೆ ಬೀದಿಗೆ ಬಿಡುವ ಅದೆಷ್ಟೋ ತಂದೆ ತಾಯಿಯರಿರುವ ಈ ಸಮಾಜದಲ್ಲಿ, ಹಲವು ಮಕ್ಕಳಿಗೆ ಆಶ್ರಯ ನೀಡಿ ಬದುಕು ಕಟ್ಟಿ ಕೊಡಲು ಮುಂದೆ ಬರುವವರಿದ್ದಾರೆಯೇ ಎಂದು ಊಹಿಸಲು ಸಹ ಅಸಾಧ್ಯವಾದ ಕಾಲವಿದು. ಅಂತಹವುದರಲ್ಲಿ ನಗರದ ಕುಂಬಳಗೋಡು ಸಮೀಪದ ಗಂಗಸಂದ್ರದಲ್ಲಿರುವ ಸ್ವಾಮಿ ವಿವೇಕಾನಂದ ಸಾಮಾಜಿಕ ಸೇವಾ ಸಂಸ್ಥೆ ಅಡಿಯ ‘ಸೇವಾಲಯ’ ಅನೇಕ ಬಡ ಮಕ್ಕಳಿಗೆ ನೆರವಾಗಿ, ಅವರನ್ನು ಸಾಕಿ ಸಲಹುತಿರುವುದು ನಿಜಕ್ಕೂ ಗಮನಾರ್ಹ.

s3

ಅತ್ಯಂತ ಕಡು ಬಡವರು, ನಿರ್ಗತಿಕರು, ಅನಾಥರು, ತಂದೆ ಇದ್ದು ತಾಯಿ ಇಲ್ಲದ ಅಥವಾ ತಾಯಿ ಇದ್ದು ತಂದೆ ಇಲ್ಲದ ಏಕ ಪೋಷಕ ಬಡ ಮಕ್ಕಳು ಈ ಸೇವಾಲಯದಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು ೨೫ ಮಕ್ಕಳಿರುವ ಈ ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಉಚಿತ ಶಿಕ್ಷಣದ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರಿಂದ ಸಂಗ್ರಹವಾಗುವ ನೆರವು ಕೂಡ ಈ ಮಕ್ಕಳ ಭವಿಷ್ಯಕ್ಕೆ ದಾರಿ ತೋರಿಸುತ್ತಿದೆ.

ಅನಾಥರು, ಬಡವರು, ಮತ್ತು ನಿರ್ಗತಿಕರಿಗೆ ದಯೆ, ಅನುಕಂಪ ತೋರಿದರೆ ಸಾಲದು. ಉಳ್ಳವರು ಅವರ ಜೀವನೋನ್ನತಿಗೆ ಕೈಲಾದ ಸಹಾಯ, ಸಹಕಾರದ ಹಸ್ತ ಚಾಚಬೇಕು. ಅವರ ಬದುಕಿನ ಸ್ಥಿತಿ ಸುಧಾರಣೆಗೆ ಸಲಹೆ, ಮಾರ್ಗದರ್ಶನವನ್ನು ಸಹ ನೀಡಿ ಅವರನ್ನು ಅಸಹಾಯಕ ಪರಿಸ್ಥಿತಿಯಿಂದ ಹೊರ ತರಬೇಕು ಎಂಬ ಉದಾತ್ತ ಚಿಂತನೆ ದ್ಯೇಯೋದ್ದೇಶಗಳನ್ನು ಹೊಂದಿರುವ ಆರ್.ರಾಜಶೇಖರ್ ಅವರು ಈ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸ್ವಾವಲಂಬಿ ಬದುಕಿನ ತರಬೇತಿಯ ವ್ಯವಸ್ಥೆ ಕೂಡ ಮಾಡಿದ್ದಾರೆ. ಆಟ, ಪಾಠ, ಯೋಗ, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ತಮ ಸಂಸ್ಕಾರ ಸಂಸ್ಕೃತಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾದ ವಿವಿಧ ಕಾರ್ಯಾಗಾರಗಳು ಹಾಗೂ ಸ್ವಾವಲಂಬಿತನ ರೂಢಿಸುವ ಚಟುವಟಿಕೆಗಳನ್ನು ಸಹ ಕಲಿಸಲಾಗುತ್ತಿದೆ.

s

ಈ ದುಬಾರಿ ಕಾಲದಲ್ಲಿ ಒಂದು ಕುಟುಂಬದ ಜವಬ್ದಾರಿ ನಿರ್ವಹಿಸುವುದೇ ಕಷ್ಟ. ಅದರಲ್ಲಿ ೨೫ ಮಕ್ಕಳ ಸಂಪೂರ್ಣ ಜವಬ್ದಾರಿ ಹೊತ್ತು ಶಿಕ್ಷಣ, ಊಟ ಬಟ್ಟೆ, ವಸತಿಯ ಜೊತೆ ಎಲ್ಲವನ್ನೂ ಉಚಿತವಾಗಿಯೇ ನೀಡುತ್ತಾ ಸಾಕಿ ಸಲುಹುವುದೆಂದರೆ ಸುಲಭದ ಮಾತೇನು.., ನಿಜಕ್ಕೂ ಅದು ಅಚ್ಚರಿಯ ಸಾಹಸ ಮತ್ತು ಸಾಧನೆಯೇ ಸರಿ!. ಇವರ ಸಮಾಜಸೇವೆ ಹೀಗೆ ಮುಂದುವರೆಯಲಿ.

ನೆರವಿಗೆ ಮನವಿ
ಸ್ವಾಮಿ ವಿವೇಕಾನಂದ ಸಾಮಾಜಿಕ ಸೇವಾ ಸಂಸ್ಥೆ ಅಡಿಯಲ್ಲಿ ‘ಸೇವಾಲಯ‘ ಎಂಬ ಬಡ ಮಕ್ಕಳ ಆಶ್ರಮ ನಡೆಸುತ್ತಿದ್ದು, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯು ಸುಮಾರು ಆರು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದು, ಈ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಪ್ರತಿ ತಿಂಗಳು ಸುಮಾರು ೧.೫ ಲಕ್ಷದಿಂದ ೧.೮ ಲಕ್ಷದವರೆಗೆ ಖರ್ಚುವೆಚ್ಚವನ್ನು ಭರಿಸುತ್ತಿರುವುದರಿಂದ, ಆಸಕ್ತ ದಾನಿಗಳ ಸ್ವಸಹಾಯ ಅಗತ್ಯವಿದೆ.

ಸಂಸ್ಥೆಗೆ ವಾರ್ತಾ ಪತ್ರಿಕೆ, ಬಟ್ಟೆಗಳು, ಆಹಾರ ಧಾನ್ಯಗಳು ಮತ್ತು ಉಪಯುಕ್ತವಾದ ಎಲ್ಲಾ ಸಾಮಾಗ್ರಿಗಳ ಅವಶ್ಯಕತೆ ಇರುತ್ತದೆ. ಮತ್ತು ಧನ ಸಹಾಯದ ಅವಶ್ಯಕತೆಯು ಇದೆ. ಅಲ್ಲದೇ ಸಂಸ್ಥೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಂಶಯವಿದ್ದಲ್ಲಿ, ಮಾಹಿತಿ ಬೇಕಾದಲ್ಲಿ, ಸಂಸ್ಥೆಯ ದೂರವಾಣಿಗೆ ಕರೆ ಮಾಡಿ ಖಚಿತ ಪಡಿಸಿಕೊಳ್ಳಿ.

s1

ಬ್ಯಾಂಕ್‌ನ ವಿಳಾಸ:
ಎಸ್.ಬಿ.ಐ.
ಖಾತೆ ಸಂಖ್ಯೆ: 62343980500
ಶಾಖೆ: ಕಗ್ಗಲೀಪುರ.
ಐಎಫ್‌ಎಸ್‌ಸಿ ಕೋಡ್- ಎಸ್.ಬಿ.ಐ N0021734
ಹೆಚ್ಚಿನ ಮಾಹಿತಿಗಾಗಿ 9742228885/ 9449555390

 

Leave a Comment