ಸೇವಾದಳ ಯಂಗ್ ಬ್ರಿಗೇಡ್ ಅಧ್ಯಕ್ಷರಾಗಿ ಜುನೈದ್

ಬೆಂಗಳೂರು, ಫೆ.೨೩- ಕಾಂಗ್ರೆಸ್ ಪಕ್ಷದ ಸೇವಾದಳ ಯಂಗ್ ಬ್ರಿಗೇಡ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಜುನೈದ್ ಪಿ.ಕೆ. ಅವರನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಮತ್ತು ಜಾತ್ಯತೀತ ವಿಚಾರಧಾರೆಗಳನ್ನು ಪ್ರಚಾರಪಡಿಸಲು ೨೦೧೮ ಆಗಸ್ಟ್ ೨೦ ರಂದು ರಾಜೀವ್ ಗಾಂಧಿ ಜಯಂತಿಯಂದು ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾದ ಲಾಲ್ ಜೀ ದೇಸಾಯಿಯವರ ಸಮ್ಮುಖದಲ್ಲಿ ಈ ಸೇವಾದಳ ಯಂಗ್ ಬ್ರಿಗೇಡ್ ರಚಿಸಲಾಯಿತು.
ದಕ್ಷಿಣ ಭಾರತದಿಂದ ಪ್ರತಿನಿಧಿಸಿದ ಏಕೈಕ ಪ್ರತಿನಿಧಿಯಾಗಿದ್ದ ಕರಾವಳಿ ಮೂಲದ ಜುನೈದ್ ಪಿ.ಕೆ. ಅವರು, ರಾಜ್ಯ ವ್ಯಾಪ್ತಿಯಲ್ಲಿ ಸೇವಾದಳ ಯಂಗ್ ಬ್ರಿಗೇಡ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ನಿಟ್ಟಿನಲ್ಲಿ ಸೇವಾದಳ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಸೇವಾದಳದ ಪ್ರಮುಖ ಸಂಚಾಲಕರಾದ ಲಾಲ್ ಜಿ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment