ಸೇಬು: ಸಿಪ್ಪೆ ಸಮೇತ ಒಳ್ಳೆಯದು

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ನಾಣ್ಣುಡಿ ಇದೆ. ಇದಕ್ಕೆ ಕಾರಣ ಸೇಬಿನಲ್ಲಿರುವ ಪೋಷಕಾಂಶಗಳು. ಸೇಬಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೇಬಿನಲ್ಲಿರುವ ಕೆಲವೊಂದು ಅಂಶಗಳು ಸಣ್ಣಪುಟ್ಟ ಕಾಯಿಲೆಯಿಂದಲೂ ದೇಹವನ್ನು ರಕ್ಷಿಸುತ್ತದೆ. ಹಾಗಾಗಿಯೇ ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ಮಾತು ಪ್ರಚಲಿತಕ್ಕೆ ಬಂದಿದೆ.

ಸೇಬನ್ನು ಯಾವ ರೀತಿ ತಿನ್ನಬೇಕು, ಸಿಪ್ಪೆ ಸಮೇತ ತಿನ್ನಬೇಕೆ, ಸಿಪ್ಪೆ ತೆಗೆದು ತಿನ್ನಬೇಕೆ ಎಂಬ ಗೊಂದಲಗಳು ಇವೆ.ಹಲವರು ಸೇಬಿನ ಸಿಪ್ಪೆಗೆ ರಾಸಾಯನಿಕ ಮತ್ತು ಮೇಣವನ್ನು ಲೇಪಿಸುವುದರಿಂದ ಸಿಪ್ಪೆ ತೆಗೆದು ತಿನ್ನಲು ಬಯಸುತ್ತಾರೆ. ಆದರೆ ಸೇಬನ್ನು ಸಿಪ್ಪೆ ತೆಗೆಯದೆ ತಿಂದರೆ ಒಳ್ಳೆಯದು ಎಂಬ ಮಾತಿದೆ.

ಸೇಬಿನ ಸಿಪ್ಪೆ ತೆಗೆದರೆ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಹಾಗಾಗಿ ಸಿಪ್ಪೆ ಸಮೇತ ಸೇಬು ಸೇವನೆ ಒಳ್ಳೆಯದು ಎಂಬ ವಾದಗಳು ಪ್ರಬಲವಾಗಿವೆ.

ಸೇಬಿನ ಸಿಪ್ಪೆಯಲ್ಲಿ ನಾರಿನಾಂಶ ಹೆಚ್ಚಿದೆ. ಈ ನಾರಿನಾಂಶ ನೀರಿನೊಂದಿಗೆ ಸೇರಿಕೊಂಡು ಮಲಬದ್ಧತೆ ನಿವಾರಣೆ ಮಾಡಿ, ಜೀರ್ಣಕ್ರಿಯೆಯ ಕಲ್ಮಶವನ್ನು ದೊಡ್ಡ ಕರುಳಿಗೆ ಸಾಗಿಸಲು ಪ್ರಮುಖ ಪಾತ್ರ ವಹಿಸುತ್ತದೆ.

ಜತೆಗೆ ರಕ್ತದಲ್ಲಿ ಸಕ್ಕರೆ ಮಟ್ಟವೂ ಏರ

ದಂತೆ ಕಾಪಾಡುತ್ತದೆ. ಕೊಲೆಸ್ಟ್ರಾಲ್‌ನ್ನು ಈ ಸೇಬಿನ ಸಿಪ್ಪೆಯ೦ ನಾರಿನಾಂಶ ಕಡಿಮೆ ಮಾಡುತ್ತದೆ.

ಸೇಬಿನ ಸಿಪ್ಪೆಯಲ್ಲಿ ನಾರಿನಾಂಶದ ಜತೆಗೆ ವಿಟಮಿನ್ ಸಿ, ವಿಟಮಿನ್ ಎ ಇದೆ. ಇದು ಕ್ಯಾನ್ಸರ್‌ನಿಂದ ದೇಹಕ್ಕೆ ರಕ್ಷಣೆ ನೀಡುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಕ್ಯಾಲ್ಸಿಯಂ ಕೋಶಗಳನ್ನು ಕೊಲ್ಲುತ್ತವೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಸೇಬಿನಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್‌ಗಳಿದ್ದು, ಇವುಗಳು ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಈ ಅಧ್ಯಯನ ವರದಿಗಳು ಪ್ರತಿಪಾದಿಸಿವೆ.ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ.

ವಾರದಲ್ಲಿ ೫ ಅಥವಾ ಅದಕ್ಕಿಂತ ಹೆಚ್ಚು ಸೇಬು ತಿನ್ನುವವರ ಶ್ವಾಸಕೋಶವೂ ಉತ್ತಮವಾಗಿ ಕೆಲಸ ಮಾಡುತ್ತದೆ. ಅಸ್ತಮಾದ ಅಪಾಯ ಕಡಿಮೆ ಎಂದು ಈ ವರದಿಗಳು ಹೇಳಿವೆ.

ಒಂದು ಅಧ್ಯಯನದ ಪ್ರಕಾರ ಆರ್ಗನೈರ್ (ಮರೆವು) ಕಾಯಿಲೆಯಿಂದ ಮೆದುಳಿನ ಕೋಶಗಳು ಹಾನಿಗೀಡಾಗಿದ್ದರೆ ಅವುಗಳನ್ನು ಸಿಪ್ಪೆ ಸಮೇತ ಸೇಬು ಸೇವನೆ ಸರಿಪಡಿಸುತ್ತದೆ. ಸೇಬಿನ ಸಿಪ್ಪೆಯಲ್ಲಿ ಸಾರ್ಲಿಕ್ ಆಮ್ಲವಿದ್ದು, ಇದು ಬೊಜ್ಜನ್ನು ನಿಯಂತ್ರಿಸುತ್ತದೆ.

ಸೇಬಿನ ಸಿಪ್ಪೆಯಲ್ಲಿ ಪೊಟಾಷಿಯಂ, ಕ್ಯಾಲ್ಸಿಯಂ, ಸಾಲೋಟ್, ಕಬ್ಬಿನಾಂಶದಂತಹ ಖನಿಜಾಂಶಗಳು ಹೇರಳವಾಗಿದ್ದು, ಇವು ಮೂಳೆಗಳನ್ನು ಬಲಪಡಿಸುವುದಲ್ಲದೆ, ಕೆಂಪು ರಕ್ತದ ಕಣಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗಾಗಿ ಸಿಪ್ಪೆ ಸಮೇತ ಸೇಬು ಸೇವನೆ ಒಳ್ಳೆಯದು.

ಸೇಬನ್ನು ತಿನ್ನುವ ಬದಲು ಸರಿಯಾಗಿ ತೊಳೆದುಕೊಂಡು ಸೇಬು ತಾಜಾವಾಗಿ ಕಾಣಲು ಲೇಪಿಸಿರುವ ರಾಸಾಯನಿಕ ಮತ್ತು ಮೇಣವನ್ನು ತೆಗೆಯಬಹುದು. ಸೇಬಿನ ಸಿಪ್ಪೆ ತಿನ್ನಲು ಇಷ್ಟವಿಲ್ಲದಿದ್ದರೆ ಸೇಬನ್ನು ಬೇಯಿಸಿಕೊಂಡು ತಿಂದರೆ ಸಿಪ್ಪೆ ಮೃದುವಾಗುತ್ತದೆ ಮತ್ತು ಸ್ವಾದವೂ ಹೆಚ್ಚಾಗಲಿದೆ.

ಸೇಬನ್ನು ಸಿಪ್ಪೆ ಸಮೇತ ತಿನ್ನುವುದರಿಂದ ರಕ್ತಹೀನತೆಯು ಕಡಿಮೆಯಾಗುತ್ತದೆ. ಜತೆಗೆ ಕಣ್ಣಿನ ಪೊರೆ ಸಮಸ್ಯೆ ನಿವಾರಣೆ ಮಾಡುವಲ್ಲೂ ಸೇಬಿನ ಸಿಪ್ಪೆಯ ಪೋಷಕಾಂಶಗಳು ನೆರವಾಗುತ್ತವೆ. ಹಾಗಾಗಿ ಅದ್ಭುತ ಆರೋಗ್ಯಕ್ಕೆ ಕಾರಣವಾಗುವ ಸೇಬಿನ ಸಿಪ್ಪೆಯ ಬಗ್ಗೆ ಅಸಡ್ಡೆ ಮಾಡದೆ ಸಿಪ್ಪೆ ಸಮೇತ ಸೇಬು ತಿನ್ನುವುದು ಆರೋಗ್ಯಕರ.

Leave a Comment