ಸೇನೆ ಸೇರಲು ಮುಂದಾದ ಹುತಾತ್ಮ ಯೋಧನ ಪತ್ನಿ ನಿತಿಕಾ ಕೌಲ್

ನವದೆಹಲಿ, ಫೆ ೧೯- ಪುಲ್ವಾಮ ಉಗ್ರರ ವಿರುದ್ಧ ನಡೆದ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ಸದ್ಯದಲ್ಲೇ ಸೇನೆ ಸೇರಲು ಸಿದ್ಧತೆ ನಡೆಸಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಜೈಷ್ ಉಗ್ರರನ್ನು ಸದೆ ಬಡಿಯುವ ವೇಳೆ ಉಗ್ರರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾಗಿದ್ದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್ ಸೇನೆ ಸೇರಲು ಸಿದ್ಧರಾಗಿದ್ದಾರೆ.
೨೮ ವರ್ಷದ ಕೌಲ್ ಸದ್ಯ ಎಸ್‌ಎಸ್‌ಸಿ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದಾರೆ. ಮೆರಿಟ್ ಲಿಸ್ಟ್ ಎದುರು ನೋಡುತ್ತಿರುವ ಅವರು ಶೀಘ್ರವೇ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಅವರು ಸೇನೆಗೆ ಸೇರುವ ಮೂಲಕ ನನ್ನ ಪತಿಗೆ ನಿಜವಾದ ಶ್ರದ್ಧಾಂಜಲಿ ನೀಡುವುದು ಸಾಧ್ಯ ಎಂದು ಅನಿಸಿತು. ಆದರೆ ನಾನು ಈ ಹಿಂದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸೇನೆಯಲ್ಲಿನ ಸೇವೆಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟ ಎನಿಸಬಹುದು ಎಂದು ಕೌಲ್ ಹೇಳಿದ್ದಾರೆ.

Leave a Comment