ಸೇತುವೆಯಿಂದ ಬಸ್  ಬಿದ್ದು 24 ಸಾವು

ಜೈಪುರ, ಫೆ ೨೬- ರಾಜಸ್ಥಾನದ ಬೂಂದಿ ಬಳಿ ಇಂದು ಬಸ್ಸೊಂದು ನದಿಗೆ ಬಿದ್ದು ಕನಿಷ್ಠ 24 ಜನ ಮೃತಪಟ್ಟಿದ್ದಾರೆ.  ಈ ನತದೃಷ್ಟ ಬಸ್ಸಿನಲ್ಲಿ ಮದುವೆ ದಿಬ್ಬಣದ ವರ, ಕುಟುಂಬ ಹಾಗೂ 40 ಜನ ಬಂಧುಮಿತ್ರರು ಪ್ರಯಾಣ ಮಾಡುತ್ತಿದ್ದರು.

ಬುಧವಾರ ಬೆಳಗಿನ ಜಾವ ಈ ಘೋರ ದುರಂತ ನಡೆದಿದೆ. ರಾಜಸ್ತಾನದ ಸವಾಯಿ ಮಾಧೋಪುರ ಜಿಲ್ಲೆಗೆ ಸೇರಿದ ಬೂಂದಿ ಬಳಿ ಪಾಪಡಿಗಾಂವ ಗ್ರಾಮದ ಬಳಿ ದುರಂತ ಸಂಭವಿಸಿದೆ.

Leave a Comment