ಸೆ.30ರಿಂದ ಅ.4ರವರೆಗೆ ಮಹಿಳಾ ಮತ್ತು ಮಕ್ಕಳ ದಸರಾ

ಮೈಸೂರು.ಸೆ.23. ಸೆ.30ರಿಂದ ಅ.4ರವರೆಗೆ ಜೆ.ಕೆ.ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದೆ. ಮಹಿಳಾ ದಸರಾ ಪ್ರಯುಕ್ತ ಸೆ.30ರಂದು ಅಂಬಾವಿಲಾಸ ಅರಮನೆ ಮುಂಭಾಗ ‘ರಂಗೋಲಿ ಚಿತ್ತಾರ’ ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಚಾಲನೆ ನೀಡಲಿದ್ದಾರೆ ಎಂದು ದಸರಾ ಉಪವಿಶೇಷಾಧಿಕಾರಿ ಡಾ.ಪ್ರೇಮ್ ಕುಮಾರ್ ತಿಳಿಸಿದರು. ಅವರಿಂದು ವಾರ್ತಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಹಿಳಾ ದಸರಾ 2019 ಉದ್ಯಮ ಸಂಭ್ರಮ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸೆ.30ರಂದು ಬೆಳಿಗ್ಗೆ ಸಚಿವೆ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಉದ್ಘಾಟಿಸಲಿದ್ದು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪ್ರತಿದಿನವೂ ವಿವಿಧ ಕಲಾವಿದರು ಸಾಮಸ್ಕೃತಿಕ ಕಾರ್ಯಕ್ರಮ, ಹಾಸ್ಯ ಫ್ಯಾಷನ್ ಶೋ ಸ್ಪರ್ಧೆ ನಡೆಯಲಿದೆ. ಅ.2ರಂದು ಅಂಗನವಾಡಿ ಮಕ್ಕಳಿಂದ ಚಿಣ್ಣರ ದಸರಾ ನಡೆಯಲಿದೆ. ಅ.3ರಂದು ಹಿರಿಯ ನಾಗರಿಕರಿಗಾಗಿ ವಿವಿಧ ಸ್ಪರ್ಧೆ ನಡೆಯಲಿದೆ ಎಂದರು. ಮಹಿಳೆಯರಿಗೆ ಸ್ಥಳದಲ್ಲಿಯೇ ವಿವಿಧ ರೀತಿಯ ಕೌಶಲ್ಯ ತರಬೇತಿಗಳನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅ.3ರಂದು ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ಮಹಿಳಾ ಸಬಲೀಕರಣ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀ ಭವನ ವಿಜಯ ನಗರ 2ನೇ ಹಂತ, ಕೃಷ್ಣದೇವರಾಯ ವೃತ್ತ, ಮೈಸೂರು-570017 ದೂ.ಸಂ. 0821-2495432/2498031ನ್ನು ಸಂಪರ್ಕಿಸಬಹುದು ಎಂದರು
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಉಪಸಮಿತಿಯ ಅಧ್ಯಕ್ಷೆ ವಿದ್ಯಾ ಅರಸ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ಉಪಾಧ್ಯಕ್ಷರಾದ ಅನ್ನಪೂರ್ಣ, ಟಿ.ಎಸ್.ಶಾಂತ, ರತ್ನ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು

Leave a Comment