ಸೆ.16 ಸರ್ವೋತ್ತಮ ಶ್ರೀಕಾಂತ ವಕೀಲರ ಕೃತಿ ಬಿಡುಗಡೆ

ರಾಯಚೂರು.ಸೆ.06- ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರಾದ ಶ್ರೀಕಾಂತ್ ರಾವ್ ವಕೀಲರ ಆವರ ಜೀವನಾಧಾರಿತ ಕೃತಿ ಲೋಕಾರ್ಪಣೆ ಸಮಾರಂಭ ಸೆ.16 ರಂದು ಸ್ಥಳೀಯ ನಿಮಿಶಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರತ್‌ಕುಮಾರ್ ಕಳಸ ವಕೀಲರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಗೀರಥ ವಿದ್ಯಾನಿಕೇತನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳಾದ ಡಾ.ವೈ.ಎಸ್‌.ಪ್ರಶಾಂತ್ ಅವರ ಪ್ರಕಾಶನದಲ್ಲಿ ಲೇಖಕರಾದ ಕಲ್ಬುರ್ಗಿ ಸೆಂಟ್‌ ಜೋಸೆಫ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸಿ.ಸಿ.ನಿಂಗಣ್ಣ ಅವರು ಬರೆದ `ಸರ್ವೋತ್ತಮ ಶ್ರೀಕಾಂತ ವಕೀಲರು` ಎಂಬ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ ಎಂದರು.
ವಕೀಲರಾದ ಎನ್.ಶರಣಪ್ಪ, ರಾಮಸ್ವಾಮಿ, ಎನ್.ಶ್ರೀನಿವಾಸ್, ಹುಲಿಗೆಪ್ಪ ಮಾಣಿಕ್, ನಾರಾಯಣ, ಶಿವಾರೆಡ್ಡಿ, ಹುಸೇನ್ ಪಾಷಾ, ಅಜೀತಾ, ಎನ್.ರಾಜೇಶ್, ಶರಣಬಸವ ಸ್ವಾಮಿ, ಆಂಜಿನೇಯ್ಯ, ತಾಯಣ್ಣ, ಶಿವಲಿಂಗಪ್ಪ ಉಪಸ್ಥಿತರಿದ್ದರು.

Leave a Comment