ಸೆ.16 ಶ್ರೀಕಾಂತ ರಾವ್ ವಕೀಲರ ಜೀವನಾಧಾರಿತ ಕೃತಿ ಲೋಕಾರ್ಪಣೆ

ರಾಯಚೂರು.ಸೆ.12- ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಶ್ರೀಕಾಂತರಾವ್ ವಕೀಲರ ಜೀವನಾಧಾರಿತ ಸರ್ವೋತ್ತಮ ಕೃತಿ ಲೋಕಾರ್ಪಣೆ ಸಮಾರಂಭ ಸೆ.16 ರಂದು ಸ್ಥಳೀಯ ಸಂತೋಷಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಗೀರಥ ವಿದ್ಯಾ ನಿಕೇತನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ವೈ.ಎಸ್.ಪ್ರಶಾಂತ್ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗ ಭಗೀರಥ ಪೀಠ ಹೊಸದುರ್ಗದ ಡಾ.ಶ್ರೀ ಪುರುಷೋತ್ತಮ ನಂದಾಪುರಿ ಮಹಾಸ್ವಾಮಿಗಳು, ಸೋಮವಾರ ಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮಿಗಳು, ಹಾಗೂ ಮಲ್ದಕಲ್ ನಿಜಾನಂದ ಯೋಗಾಶ್ರಮದ ಶ್ರೀ ಗುರುಬಸವ ರಾಜಗುರುಗಳು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಲಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮಭಟ್ ಸರ್ವೊತ್ತಮ ಕೃತಿ ಲೋಕಾರ್ಪಣೆ ಮಾಡುವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು, ಸಂಸದ ಬಿ.ವಿ.ನಾಯಕ ಅಧ್ಯಕ್ಷತೆ ವಹಿಸುವರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಬೈಲೂರು ಶಂಕರ್ ರಾಮ್, 1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ಮಹಾದೇವಯ್ಯ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಶ್ರೀಕಾಂತ ರಾವ್ ವಕೀಲರು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಶಾಸಕ ಸತೀಶ್ ಜಾರಕಿಹೊಳಿ, ರಾಧಾಕೃಷ್ಣ ಆರ್.ದೊಡ್ಡಮನಿ, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಹಿರಿಯ ನ್ಯಾಯಾಧೀಶರಾದ ಬಿ.ಆರ್.ಕೊಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಟಿ.ಎಸ್.ಎಸ್. ಅಧ್ಯಕ್ಷ ಪಾರಸಮಲ್ ಸುಖಾಣಿ, ಮಾಜಿ ಶಾಸಕ ರಾಜಾ ರಾಯಪ್ಪ ನಾಯಕ, ವೈ.ಹನುಮಂತಪ್ಪ, ಬಾನುರಾಜ್ ವಕೀಲರು, ಕೆ.ಶಾಂತಪ್ಪ, ಅಬ್ದುಲ್ ಕರೀಂ, ಯು.ವೆಂಕೋಬ, ಎಂ.ವಿರೂಪಾಕ್ಷಿ ಭಾಗವಹಿಸುವರೆಂದು ತಿಳಿಸಿದರು.
ರಾಮಸ್ವಾಮಿ ವಕೀಲರು, ಶರಣಪ್ಪ ವಕೀಲರು, ಶ್ರೀನಿವಾಸ್, ಎನ್.ಶರಣಪ್ಪ ಅಸ್ಕಿಹಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment