ಸೆ.16 ಅಂಚೆ ನೌಕರರ 20 ನೇ ದ್ವೈವಾರ್ಷಿಕ ಸಮ್ಮೇಳನ

ರಾಯಚೂರು.ಸೆ.09- ರಾಷ್ಟ್ರೀಯ ಅಂಚೆ ನೌಕರರ ಸಂಘ ಪಿ 3, ಪಿ 4 ಹಾಗೂ ಗ್ರಾಮೀಣ ಅಂಚೆ ನೌಕರರ ಮತ್ತು ರಾಯಚೂರು ವಿಭಾಗದ 20 ನೇ ದ್ವೈವಾರ್ಷಿಕ ಸಮ್ಮೇಳನ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಸೆ.16 ರಂದು ಸ್ಥಳೀಯ ವಿಠ್ಠಲ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅರುಣ್ ವಿ.ಕಾಂತನವರು ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಬಿ.ವಿ.ನಾಯಕ ಸಮ್ಮೇಳನ ಉದ್ಘಾಟಿಸುವರು, ಶಾಸಕ ಡಾ.ಶಿವರಾಜ್ ಪಾಟೀಲ್, ಅಂಚೆ ಅಧೀಕ್ಷಕ ಎಂ.ವಿ.ಪಾಟೀಲ್, ಪ್ರಥಮ ದರ್ಜೆ ಗುತ್ತೇದಾರ ಎಂ.ಈರಣ್ಣ, ನಗರಸಭೆ ಸದಸ್ಯ ಶರಣಬಸ್ಸಪ್ಪ ಬಲ್ಲಟಗಿ, ಪಿ 3 ವಲಯ ಕಾರ್ಯದರ್ಶಿ ಬಿ.ಶಿವಕುಮಾರ್, ಉತ್ತರ ಕರ್ನಾಟಕ ಪ್ರಾಂತೀಯ ಪ್ರತಿನಿಧಿ ಆರ್.ಈರಣ್ಣ, ಪಿ 4 ವಲಯ ಕಾರ್ಯದರ್ಶಿ ಆರ್.ಮಹಾದೇವನ್, ಜಿಡಿಎಸ್ ವಲಯ ಕಾರ್ಯದರ್ಶಿ ಎಂ.ಪಿ.ಚಿತ್ರಸೇನಾ, ಆರ್.ವಿ.ಅಂಗಡಿ, ಉಪ ಅಂಚೆ ಅಧೀಕ್ಷಕ, ಹೆಚ್.ಸಿ.ಗಲಗಕರ್, ಸುಧಾಕರ್ ಎಸ್.ಮೂರ್ತಿ, ಮುಖ್ಯ ಅತಿಥಿಳಾಗಿ ಭಾಗವಹಿಸುವರು ಎಂದರು.
ಕೆ.ವಿ.ಅಮರೇಶ್, ಮಾಬು ಸಾಬ್ ಸೇರಿದಂತೆ ಇತರರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. 2 ವರ್ಷಕ್ಕೊಮ್ಮೆ ಸಮ್ಮೇಳನ ಆಯೋಜಿಸಿ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂಚೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಇಲಾಖೆಯ ಯೋಜನೆ ಸಮರ್ಪಕ ಜಾರಿಗೆ ಒತ್ತಾಯ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಗುತ್ತದೆ ಎಂದರು.
ಶ್ಯಾಮ ಸುಂದರ್, ಕರಿಯಪ್ಪ, ಬಸವರಾಜ ದೊರೆ, ಮಲ್ಲಯ್ಯ, ಭೀಮಸೇನಾ, ಕೆ.ವಿ.ಅಮರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment