ಸೆ.10 ಕ್ಕೆ ಸಂವಿಧಾನ ಸುಟ್ಟವರ ವಿರುದ್ದ ಜನಾಂದೋಲನ

ದಾವಣಗೆರೆ, ಸೆ. 7 – ಸಂವಿಧಾನ ಸುಟ್ಟವರ ವಿರುದ್ದ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಸೆ. 10 ರಂದು ಬೆಳಗ್ಗೆ 11 ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಈ ಆಂದೋಲನ ನಡೆಯಲಿದೆ ಎಂದು ಸಂವಿಧಾನ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಅಂದು ಬೆಳಗ್ಗೆ 11 ಕ್ಕೆ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಲಾಗುವುದು. ನಂತರ ಜಯದೇವವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬಹಿರಂಗ ಸಭೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಭಾರತೀಯರು ಎಂದೇ ಪ್ರಾರಂಭವಾಗುವ ಸಂವಿಧಾನದ ಪೀಠಿಕೆ ಸಮಗ್ರ ಭಾರತದ ಎಲ್ಲಾ ವರ್ಗದ ಜನರನ್ನು ಪ್ರತಿನಿಧಿಸುತ್ತದೆ. ಶಿಕ್ಷಣ, ಉದ್ಯೋಗ, ಸಮಾನತೆಯ ಪ್ರಜ್ಞೆ ನಮ್ಮಲ್ಲಿ ಮೂಡಿದ್ದರೆ ಹಾಗೂ ಅದು ನಮ್ಮ ಹಕ್ಕು ಎಂದು ಪರಿಗಣಿಸುವ ಸ್ಥಿತಿ ಇದ್ದರೆ ಅದು ನಮಗೆ ನಮ್ಮ ಸಂವಿಧಾನ ನೀಡಿರುವುದು ಆದರೆ ಕೆಲವರು ದೆಹಲಿಯ ಜಂತರ್ ಮಂತರ್ ನಲ್ಲಿ ಕಳೆದ ತಿಂಗಳ ಆಗಸ್ಟ್ 10 ರಂದು ಸಂವಿಧಾನವನ್ನು ಸುಟ್ಟು ಹಾಕಿದ್ದಾರೆ. ಇದು ಖಂಡನೀಯ. ಈ ಕೂಡಲೇ ಇಂತಹ ಕೃತ್ಯ ನಡೆಸಿದವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಶಿಕ್ಷೆಗೆ ಗುರಿಪಡಿಸಬೇಕು. ಸಂಘಟನೆಯ ಹಿಂದಿರುವ ಸಂಘಟನೆಗಳು, ಶಕ್ತಿಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದೆಂದರು.
ಸುದ್ದಿಗೋಷ್ಟಿಯಲ್ಲಿ ಇಮ್ತಿಯಾಜ್ ಹುಸೇನ್, ರಾಮಚಂದ್ರಕಲಾಲ್, ಆವರಗೆರೆ ಚಂದ್ರು, ಕೆ.ಎಲ್.ಭಟ್, ಷಣ್ಮುಖಸ್ವಾಮಿ, ಹೆಚ್.ಮಲ್ಲೇಶ್, ಹೆಚ್.ದುರುಗೇಶ್, ಜಯಣ್ಣ ಜಾದವ್ ಇದ್ದರು.

Leave a Comment