ಸೆಂಟ್ ಮೇರೀಸ್ ಆಸ್ಪತ್ರೆ ಸೀಲ್ ಡೌನ್

ಮೈಸೂರು. ಜೂ.30- ಕೊರೋನಾ ಸೋಂಕಿತ ಬಾಲಕಿ ಚಿಕಿತ್ಸೆ ಪಡೆದಿದ್ದ ಹಿನ್ನೆಲೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯ ಸೆಂಟ್ ಮೇರೀಸ್ ಆಸ್ಪತ್ರೆಯನ್ನ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಹುಣಸೂರು ತಾಲ್ಲೂಕಿನ ಸೊಂಕೀತ ಬಾಲಕಿ ಎಚ್. ಡಿ ಕೋಟೆ ಸೆಂಟ್ ಮೇರೀಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆ ಅಧಿಕಾರಿಗಳು ನಿನ್ನೆಯೇ ಆಸ್ಪತ್ರೆಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಿದ್ದು, ಆಸ್ಪತ್ರೆಯಲ್ಲಿ ಇದ್ದವರೆಲ್ಲ ಕ್ವಾರಂಟೈನ್ ಗೆ ಇಡಲಾಗಿದೆ. ಇನ್ನು ಆಸ್ಪತ್ರೆಗೆ ಔಷಧಿ ಸಿಂಪಡಣೆ ಮಾಡಲಾಗಿದೆ.
ಸೋಂಕಿತ ಬಾಲಕಿಯ ತಂದೆ ಕ್ಷೌರಿಕ ವೃತ್ತಿ ಮಾಡುತ್ತಿದ್ದರು. ಎಚ್ ಡಿ ಕೋಟೆಯ ಕೆಲ ಗ್ರಾಮಗಳಲ್ಲಿ ಕ್ಷೌರಿಕ ಸೇವೆ ನೀಡಿದ್ದು ಆತ ಬೇಟಿ ನೀಡಿದ್ದ ಗ್ರಾಮಗಳ ಕೆಲ ಮನೆಯವರನ್ನ ತಾಲ್ಲೂಕು ಆಡಳಿತ ಹೋಮ್ ಕ್ವಾರಂಟೈನ್ ಮಾಡಿದೆ. ಹೀಗಾಗಿ ಎಚ್ ಡಿ ಕೋಟೆ ತಾಲ್ಲೂಕಿಗೂ ಸೋಂಕು ಹರಡುವ ಭೀತಿ ಜನರಿಗೆ ಎದುರಾಗಿದೆ

Share

Leave a Comment