ಸೆಂಟ್ರಲ್ ಮಾರ್ಕೆಟ್ ಗ್ರಾಹಕರಿಗೆ ಬಂದ್!

ಮಂಗಳೂರು, ಎ.೧- ಇಂದಿನಿಂದ ಸೆಂಟ್ರಲ್ ಮಾರ್ಕೆಟ್ ಬಳಕೆಗೆ ಹೋಲ್ ಸೇಲ್ ವ್ಯಾಪಾರಿಗಳಿಗೆ ಮಾತ್ರ ಅವಕಾಶವಿರಲಿದ್ದು ಅಂಗಡಿಗಳನ್ನು ಮುಚ್ಚಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಆದೇಶ ನೀಡಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಸೆಂಟ್ರಲ್ ಮಾರ್ಕೆಟನ್ನು ವ್ಯಾಪಾರಸ್ಥರು ಮಾತ್ರ ಬಳಸಬೇಕು. ರಾತ್ರಿ ೧೧ರಿಂದ ಮುಂಜಾನೆ ೪ ಗಂಟೆಯ ಒಳಗೆ ತಮ್ಮ ವ್ಯವಹಾರವನ್ನು ಮುಗಿಸಬೇಕು. ರಾತ್ರಿ ವೇಳೆ ಚಿಲ್ಲರೆ ವ್ಯಾಪಾರಿಗಳು ಸಗಟು ವ್ಯಾಪಾರಿಗಳ ಬಳಿ ಖರೀದಿ ಮಾಡಬೇಕು. ಆದರೆ, ಸೆಂಟ್ರಲ್ ಮಾರುಕಟ್ಟೆಯೊಳಗಿರುವ ಚಿಲ್ಲರೆ ವ್ಯಾಪಾರಿಗಳಿಗೆ ಅನುಮತಿ ಇಲ್ಲ ಎಂದಿದ್ದಾರೆ. ಮಾರ್ಕೆಟ್ ವ್ಯಾಪಾರಿಗಳಿಗೆ ಜಿಲ್ಲಾಡಳಿತದಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸೆಂಟ್ರಲ್ ಮಾರ್ಕೆಟ್ ಒಳಗೆ ಸಾರ್ವಜನಿಕರ ಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತೀದಿನ ದಿನಸಿ, ತರಕಾರಿ ಅಂಗಡಿಗಳು ಬೆಳಗ್ಗೆ ೭ರಿಂದ ೧೨ ರವರೆಗೆ ತೆರೆದಿರುತ್ತವೆ. ೧೨ ಗಂಟೆಯ ಬಳಿಕ ಎಲ್ಲಾ ಅಂಗಡಿ, ಮಳಿಗೆಗಳು ಬಂದ್ ಮಾಡಬೇಕು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕಾರ ನೀಡಬೇಕು ಎಂದು ಆದೇಶ ನೀಡಿದ್ದಾರೆ.

Leave a Comment