ಸೂರ್ಯ ಶೋಧನಾ ನೌಕೆಗೆ ಸೂರ್ಯನಿಂದಲೇ ಶಕ್ತಿ

ಉತ್ತನೂರು ವೆಂಕಟೇಶ್

ಭೂಮಿಯಿಂದ 93 ದಶಲಕ್ಷ ಕಿ.ಮೀ ದೂರದ ಸೂರ್ಯನ ಹೊರಮೈ ಶೋಧನೆಗೆ ಹೊರಟಿರುವ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಗೆ ಸೂರ್ಯನಿಂದಲೇ ಶಕ್ತಿ. ಈ ನೌಕೆಯಲ್ಲಿರುವ ಸೋಲಾರ್ ಫಲಕಗಳು ಸೂರ್ಯನ ರಶ್ಮಿಯಿಂದ ಶಕ್ತಿ ತುಂಬಿಸಿಕೊಳ್ಳುತ್ತಿವೆ. ನೌಕೆಯ ಕಾರ್ಯಾಚರಣೆಗೆ ಇದೇ ಜೀವಧಾತು.

ಆ. 12 ರಂದು ಕೇಪ್‌ಕಾರ್ನವೆರಾಲ್ ವಾಯು ನೆಲೆಯಿಂದ ಉಡಾವಣೆಗೊಂಡ ಟಚ್ ದಿ ಸನ್ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ 1 ವಾರದ ಪಯಣದ ನಂತರ ತನ್ನ ಸೌರ್ವ ಫಲಕಗಳನ್ನು ಕಾಲುಗಳನ್ನು ಹೊರ ಚಾಚುತ್ತದೆ. ಇವು ಉತ್ಪತಿ ಮಾಡುವ ವಿದ್ಯುತ್‌ನಿಂದ ನೌಕೆ ತನ್ನ ಶೋಧನಾ ವೈಜ್ಞಾನಿಕ ಚಟುವಟಿಕೆ ನಡೆಸುತ್ತದೆ.

ಸೂರ್ಯನ ಮೇಲ್ಮೈನಿಂದ 60 ಲಕ್ಷ ಕಿ.ಮೀ ದೂರದಲ್ಲಿರುವ ಸೂರ್ಯನ ಹೊರಭಾಗವಾದ ಕರೋನಾ ವಲಯ ತಲುಪಿ ತನ್ನ ಅಧ್ಯಯನ ಕಾರ್ಯ ಆರಂಭಿಸಿದರೆ ಸೂರ್ಯನ ಅತ್ಯಂತ ಸಮೀಪಕ್ಕೆ ತಲುಪಿದ ಪ್ರಪ್ರಥಮ ನೌಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗುತ್ತದೆ. ಈವರೆಗೆಗಿನ ಮಾನವ ನಿರ್ಮಿತ ವಾಹನಗಳಲ್ಲಿಯೇ ಅತ್ಯಂತ ವೇಗ ಹೊಂದಿರುವ ನೌಕೆಯೂ ಹೌದು. ಇದು ಸೂರ್ಯನ ಹೊರ ವಲಯ ತಲುಪುವ ಸಂದರ್ಭದಲ್ಲಿ ಇದರ ವೇಗ 6.92 ಲಕ್ಷ ಕಿ.ಮೀ

ಆ. 12, 2018ರಲ್ಲಿ ಉಡಾವಣೆಗೊಂಡಿರುವ ಈ ನೌಕೆ 6 ವರ್ಷಗಳ ಪಯಣಿಸಿ ೨೦೨೪ರಲ್ಲಿ ಸೂರ್ಯನ ಹೊರ ವಲಯ ತಲುಪುತ್ತದೆ. ಇದು ಶುಕ್ರಗ್ರಹಣವನ್ನು ಅ. 2 ರಂದು ದಾಟುತ್ತಿದ್ದು, ನ. 5ರಲ್ಲಿ ಸೂರ್ಯನ ಸಮೀಪದ ಹೊರ ವಲಯ ಪ್ರವೇಶಿಸುತ್ತದೆ. ಸೂರ್ಯನ ಸುತ್ತ 24 ಭಾರಿ ಸುತ್ತುವ ಈ ನೌಕೆ ಅದರ ಹೊರ ವಲಯದ ವೈಶಿಷ್ಟ್ಯಗಳ ಅಧ್ಯಯನ ನಡೆಸುತ್ತದೆ. ಸೂರ್ಯನ ಸುತ್ತ ಒಂದು ಸುತ್ತು ಬರಲು ಈ ನೌಕೆಗೆ 88 ದಿನಗಳು ಬೇಕು.

ಸುಟ್ಟು ಬೂದಿಯಾಗುವಂತಹ ಶಾಖವನ್ನು ತಡೆದುಕೊಳ್ಳಬಹುದಾದ ಸಾಮರ್ಥ್ಯವಿರುವಂತೆ ಈ ನೌಕೆಯನ್ನು ನಿರ್ಮಾಣ ಮಾಡಿರುವುದೇ ಈ ನೌಕೆಯ ವೈಶಿಷ್ಠ್ಯ ಹಾಗೂ ಅದ್ಭುತ. ಶಾಖದಿಂದ ನೌಕೆಯನ್ನು ರಕ್ಷಿಸಲು ಟಿಪಿಎಸ್ ತಂತ್ರಜ್ಞಾನ ಬಳಸಿ 11.43 ಸೆಂ.ಮೀ ದಪ್ಪತ ರಕ್ಷಾಕವಚ ನಿರ್ಮಾಣ ಮಾಡಿ ಈ ನೌಕೆಗೆ ತೊಡಿಸಲಾಗಿದೆ. ಇದು ಸೂರ್ಯನ ಹೊರ ವಲಯದಲ್ಲಿಯ 1.377 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಹೀರಿಕೊಂಡು ನೌಕೆಯಲ್ಲಿ ಸದಾ 29 ಡಿಗ್ರಿ ಸೆಲ್ಸಿಯಸ್ ಇರುವಂತೆ ನೌಕೆಯನ್ನು ಕಾಪಾಡುತ್ತದೆ.

18vichara2

ಭೂಮಿಯಿಂದ 93 ದಶಲಕ್ಷ ಕಿ.ಮೀ ದೂರದ ಸೂರ್ಯನ ಹೊರಮೈ ಶೋಧನೆಗೆ ಹೊರಟಿರುವ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ತನ್ನ ಪಯಣವನ್ನು ಮುಂದುವರೆಸಿದೆ.

ಆ. 12 ರಂದು ಕೇಪ್‌ಕಾರ್ನವೆರಾಲ್‌ನಿಂದ ಉಡಾವಣೆಗೊಂಡಿರುವ ಟಚ್ ದಿ ಸನ್ ನೌಕೆ 6 ವರ್ಷಗಳ ಕಾಲ ಪ್ರಯಾಣ ಮಾಡಿ 2020, 2024ರಲ್ಲಿ ಸೂರ್ಯನ ಹೊರ ವಲಯ ತಲುಪುತ್ತದೆ.

ಸುಟ್ಟು ಬೂದಿಯಾಗುವಂತಹ ಶಾಖವನ್ನು ತಡೆದುಕೊಳ್ಳವಂತಹ ಸಾಮರ್ಥ್ಯ ಈ ನೌಕೆಗಿರುವುದೇ ಇದರ ವೈಶಿಷ್ಠ್ಯ.

ಇದು ಸೂರ್ಯನ ಹೊರ ವಲಯದಲ್ಲಿಯ 1.377 ಡಿಗ್ರಿ ಸೆಲ್ಸಿಯಸ್‌ನಷ್ಟು ಅಗಾಧ ಶಾಖವನ್ನು ಹೀರಿಕೊಂಡು ನೌಕೆಯಲ್ಲಿ ಸದಾ 29 ಡಿಗ್ರಿ ಸೆಲ್ಸಿಯಸ್ ಶಾಖ ಇರುವಂತೆ ನೋಡಿಕೊಳ್ಳುತ್ತದೆ.

Leave a Comment