ಸೂರ್ಯೋಪಾಸನೆಯಿಂದ ಮಾನಸಿಕ, ಅಂತಃಶಕ್ತಿ ಸದೃಢ

ದಾವಣಗೆರೆ ಫೆ. 12; ಇಂದು ಸೂರ್ಯನ ಜನ್ಮದಿನ, ಸಪ್ತಮಿಯ ಉತ್ತರಾಯಣ ಕಾಲ ಆರಂಭ, ಸಕಲ ಜೀವಕೋಟಿಗಳಿಗೂ ಆರೋಗ್ಯ ಭಾಗ್ಯ ದಯಪಾಲಿಸುವ ಸುದಿನ. ರಥಸಪ್ತಮಿಯಂದು ಶೃದ್ಧಾ-ಭಕ್ತಿಯಿಂದ ಸೂರ್ಯನಿಗೆ 108 ನಮಸ್ಕಾರ ಮಾಡಿದರೆ ನಮ್ಮ ಶಾರೀರಿಕ, ಮಾನಸಿಕ, ಅಂತಃಶಕ್ತಿಯು ಸುದೃಢವಾಗುತ್ತದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗಗುರು ಡಾ. ರಾಘವೇಂದ್ರ ಗುರೂಜಿ ಹೇಳಿದರು.ಅವರು ಇಂದು ಪ್ರಾತಃ ಕಾಲ ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ) ದಾವಣಗೆರೆ ಶ್ರೀ ಮಹಾಮಾಯೀ ವಿಶ್ವಯೋಗ ಮಂದಿರ ಹಾಗು ಯೋಗ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಥಸಪ್ತಮಿ ನಿಮಿತ್ತ “ಸಾಮೂಹಿಕ ಸೂರ್ಯನಮಸ್ಕಾರ ಯೋಗಯಜ್ಞ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಹುಟ್ಟಿದ ಮರುಕ್ಷಣವೇ ತನ್ನ ಕಾರ್ಯವನ್ನು ನಿರ್ವಹಿಸಿದ ಮಾಹಾ ಮಹಿಮ ಸೂರ್ಯದೇವ, ಜಗತ್ತಿಗೆ ಅವನ ಕಾರ್ಯ ನಿತ್ಯ-ನಿರಂತರ. ಕಣಿ ್ಣಗೆ ಕಾಣುವ ದೇವರು ಎಂದರೆ ಸೂರ್ಯನೊಬ್ಬನೇ ಎಂದು ತಿಳಿಸುತ್ತಾ, ಈ ದಿನ ಮಧ್ಯಾಹ್ನದ ಹೊತ್ತಿಗೆ ಮನೆಯಲ್ಲಿ ಒಲೆ ಮೇಲೆ ಹಾಲು ಉಕ್ಕಿಸಿದರೆ ಉತ್ತರೋತ್ತರ ಅಭಿವೃದ್ಧಿಗಳೊಂದಿಗೆ ಸಕಲ ಕಷ್ಟಗಳೂ ದೂರವಾಗುತ್ತವೆ ಎಂದು ಋಗ್ವೇದ ಸೂರ್ಯನ್ನು ಕೊಂಡಾಡಿದೆ ಎಂದು ತಿಳಿಸಿದರು. ವೇದಬ್ರಹ್ಮ ಪ್ರಣವಂ ಜ್ಯೋತಿಷ್ಯ ಕೇಂದ್ರದ ಪೂಜ್ಯಶ್ರೀ ನರಸಿಂಹ ಭಟ್ ರವರು ಸೂರ್ಯಾರಾಧನೆಯ ಪೂಜಾ ವಿಧಾನಗಳನ್ನು ಮಂತ್ರ ಘೋಷಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು. ಬ್ಯಾಂಕ್ ಉದ್ಯೋಗಿ ಶ್ರೀಮತಿ ಮತ್ತು ಶ್ರೀ ಗುರುರಾಜ್ ಹೆಚ್ ದಂಪತಿಗಳು ಪೂಜಾ ಕೈಂಕರ್ಯವನ್ನು ಮಾಡಿದರು. ಕೇಂದ್ರದ ವಿದ್ಯಾರ್ಥಿಗಳು ಹಾಗು ವಿಶೇಷವಾಗಿ ಆಗಮಿಸಿದ್ದ ಯೋಗಸಾಧಕರುಗಳಾದ ಡಾ. ಎಂ.ಯು.ಎಂ ಸಿದ್ದಯ್ಯ, ವೀರಭದ್ರ ಸ್ವಾಮಿ, ಪ್ರಭು ಸ್ವಾಮಿ ಇನ್ನಿತರರು 108 ಸುತ್ತಿನ ಸೂರ್ಯನಮಸ್ಕಾರಗಳನ್ನು ಮಂತ್ರಸಹಿತ ಸಾಮೂಹಿಕ ಪ್ರದರ್ಶನವನ್ನು ಯೋಗಗುರು ಡಾ. ರಾಘವೇಂದ್ರ ಗುರೂಜಿಯವರ ಮಾರ್ಗದರ್ಶನದಲ್ಲಿ ಮಾಡಿದರು. ಸಾಮೂಹಿಕ ಪ್ರದರ್ಶನದಲ್ಲಿ 10 ವರ್ಷದ ಬಾಲರುಗಳಾದ ಪ್ರಶಾಂತ್, ಪೃಥ್ವಿ, ಮುಕೇಶ್, ಶಶಾಂಕ್, ವೈಷ್ಣವಿ ಇನ್ನಿತರರು 108 ಸುತ್ತಿನ ಸೂರ್ಯನಮಸ್ಕಾರವನ್ನು ಕ್ರಮಬದ್ಧವಾಗಿ ಮಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಅರುಣ್ ಕುಮಾರ್, ಶ್ರೀಮತಿ ಸಂಧ್ಯಾ, ಶ್ರೀಮತಿ ಜ್ಯೋತಿಲಕ್ಷ್ಮಿ, ಶ್ರೀಮತಿ ಭಾಗ್ಯಶ್ರೀ, ಪ್ರಶಾಂತ, ಪೃಥ್ವಿದೇವ್, ಮುಕೇಶ್ ದೇವ್ ಮತ್ತು ಗಿರೀಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Comment