ಸೂರ್ಯವಂಶಿಯಲ್ಲಿ ಬ್ಯಾಡಮ್ಯಾನ್ ಪಾತ್ರ ಅಭಿನಯಿಸಲಿದ್ದಾರೆ ಗುಲ್ಶನ್‌ ಗ್ರೋವರ್

ಮುಂಬೈ, ಜೂ 8- ಬಾಲಿವುಡ್ ಬ್ಯಾಡಮ್ಯಾನ್ ಗುಲ್ಶನ್‌ ಗ್ರೋವರ್ ತಮ್ಮ ಮುಂಬರುವ “ಸೂರ್ಯವಂಶಿ” ಚಿತ್ರದಲ್ಲಿ ಬ್ಯಾಡಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶರ್ಮಾ ಸದ್ಯ ಅಕ್ಷಯಕುಮಾರ್ ಹಾಗೂ ಕತ್ರಿನಾ ಕೈಫ್ ಅವರೊಂದಿಗೆ ಸೂರ್ಯವಂಶಿ ಚಿತ್ರ ನಿರ್ಮಾಣದಲ್ಲಿ ಬಿಜಿಯಾಗಿದ್ದಾರೆ. ಗುಲ್ಶನ್‌ ಗ್ರೋವರ್ ಈಗ ಮತ್ತೊಮ್ಮೆ ಬ್ಯಾಡಮ್ಯಾನ್ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಬ್ಯಾಂಕಾಕ್ ನಲ್ಲಿ ಸೂರ್ಯವಂಶಿ ಚಿತ್ರೀಕರಣ ನಡೆಯುತ್ತಿದ್ದು, ಖಳನಾಯಕನ ಪಾತ್ರ ಅಭಿನಯಿಸುತ್ತಿರುವ ಗುಲ್ಶನ್‌ ಗ್ರೋವರ್ ಕೂಡ ಚಿತ್ರ ತಂಡಕ್ಕೆ ಸೇರಿಕೊಂಡಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಎಸ್ ಟಿಎಫ್ ಮುಖ್ಯಸ್ಥ ವೀರ್ ಸೂರ್ಯವಂಶಿ ಪಾತ್ರ ಅಭಿನಯಿಸುತ್ತಿದ್ದಾರೆ. ಅವರ ಜೊತೆ ಕತ್ರಿನಾ ಕೈಫ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾವು ರೋಹಿತ್ ಶೆಟ್ಟಿ ಅವರ ಚಿತ್ರಗಳ ದೊಡ್ಡ ಅಭಿಮಾನಿಯಾದ್ದೇನೆ. ಇದುವರೆಗೆ ಅವರ ಸಿಕ್ಕ ಯಶಸ್ಸಿಗೆ ಅವರು ಯೋಗ್ಯರಾಗಿದ್ದಾರೆ. ಅವರು ಚಿತ್ರಗಳನ್ನು ನಿರ್ಮಿಸುವಾಗ ತಮ್ಮ ಕುಟುಂಬ ಹಾಗೂ ಯುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡಿರುತ್ತಾರೆ. ಅಕ್ಷಯ್ ಕುಮಾರ್ ಜೊತೆ ಇನ್ನೊಮ್ಮೆ ಅಭಿನಯಿಸಲು ತಾವು ಉತ್ಸಾಹಿತರಾಗಿರುವುದಾಗಿ ಗ್ರೋವರ್ ತಿಳಿಸಿದ್ದಾರೆ.

ಪರದೆ ಹಾಗೂ ಅದನ್ನು ಹೊರತುಪಡಿಸಿಯೂ ಅಕ್ಷಯ್ ಕುಮಾರ್ ಅವರ ಜತೆಗಿನ ನನ್ನ ಸಂಬಂಧಗಳು ಚೆನ್ನಾಗಿವೆ ಎಂದು ಗುಲ್ಶನ್‌ ಗ್ರೋವರ್ ಹೇಳಿದ್ದಾರೆ. ಅವರು ನನ್ನ ಸಹೋದರನ ಹಾಗೆ ಇದ್ದಾರೆ. ಅವರು ಧನಾತ್ಮಕ ಹಾಗೂ ಬೆಂಬಲಿತರಾಗಿಯೂ ಇದ್ದಾರೆ ಎಂದು ಗ್ರೋವರ್ ಅಭಿಪ್ರಾಯಪಟ್ಟಿದ್ದಾರೆ.

Leave a Comment