ಸೂರ್ಯನ ಸಮೀಪದಲ್ಲಿ ಸೋಲಾರ್ ಪಾರ್ಕರ್ ನೌಕೆ

  • ಉತ್ತನೂರು ವೆಂಕಟೇಶ್

ಸೂರ್ಯನ ಅಧ್ಯಯನಕ್ಕೆ ತೆರಳಿರುವ ಸೋಲಾರ್ ಪಾರ್ಕರ್  ಬಾಹ್ಯಾಕಾಶ ನೌಕೆ  ಸೂರ್ಯನ ಅತ್ಯಂತ ಹತ್ತಿರದ ಹೊರವಲಯವನ್ನು ತಲುಪಿದ್ದು , ಅಲ್ಲಿಂದ ಮೊಟ್ಟ ಮೊದಲ ಬಾರಿಗೆ ಮಾಹಿತಿಯನ್ನು ರವಾನಿಸಿದೆ, ನವೆಂಬರ್ ೧೬ ರಂದು  ಮೇರಿಲ್ಯಾಂಡ್‌ನಲ್ಲಿರುವ ಜಾನ್ ಹಾಫ್ ಕಿನ್ಸ್ ಅನ್ವಯಿಕ  ಭೌತ ಶಾಸ್ತ್ರ ಪ್ರಯೋಗಾಲಯ ಭೂ ಕೇಂದ್ರ ಮಾಹಿತಿಯನ್ನು ಸ್ವೀಕರಿಸಿದೆ. ಬಂದಿರುವ ಮಾಹಿತಿಯಲ್ಲಿ “ನೌಕೆ ಆರೋಗ್ಯ ಸ್ಥಿತಿಯಲ್ಲಿದ್ದು, ನಿಗಧಿತ ಶೋಧನಾ ಕಾರ್ಯದಲ್ಲಿ ತೊಡಗಿದೆ ” ಎಂದಿದೆ. ಇದೇ ವರ್ಷ ಆಗಸ್ಟ್ ೧೨ ರಂದು  ಉಡಾವಣೆ ಗೊಂಡಿದ್ದ ಸೋಲಾರ್ ಪಾರ್ಕರ್ ನೌಕೆಯಿಂದ ಬಂದಿರುವ ಮೊದಲ ಮಾಹಿತಿ ಇದಾಗಿದೆ ಎಂದು ನಾಸ ಹೇಳಿದೆ.

  • ನಾಸಾದ ಸೋಲಾರ್ ಪಾರ್ಕರ್ ಬಾಹ್ಯಾಕಾಶ ನೌಕೆಯ ಅಧ್ಯಯನದಿಂದ  ಸೂರ್ಯನ ಹೊರ ವಲಯ ಕುರಿತಂತೆ  ಕ್ರಾಂತಿಕಾರಕ ಆಂಶಗಳು ಹೊರ ಬರಲಿವೆ.

  • ಈ ನೌಕೆ ಸೂರ್ಯನ ಅತಿ ಸಮೀಪದ ವರೆವಿಗೂ ಹೋಗಿ ಅಧ್ಯಯನ ನಡೆಸುವ ಮೊದಲ ನೌಕೆ ಯೆನಿಸಿದೆ .

  • ಆಗಸ್ಟ್ ೧೨ರಂದು ಉಡಾವಣೆ ಗೊಂಡಿರುವ ಈ ನೌಕೆ  ತಾನು ತಲುಪಬೇಕಿದ್ದ ಸೂರ್ಯನ ಹೊರ ವಲಯ ತಲುಪಿದೆ.

  • ನೌಕೆ ಸುಕಕ್ಷಿತ ವಾಗಿದ್ದು, ತನ್ನ ಉದ್ದೇಶಿತ ಶೋಧ ಕಾರ್ಯದಲ್ಲಿ ತೊಡಗಿರುವ ಬಗ್ಗೆ ನ.೧೬ ರಂದು ಭೂ ಕೇಂದ್ರಕ್ಕೆ ಮಾಹಿತಿ ಬಂದಿದೆ.

ಸೂರ್ಯನ ಹೊರವಲಯವಾದ ಫೋಟೊಸ್ಪಿಯರ್ ಅಧ್ಯಯನಕ್ಕೆಂದು ತೆರಳಿರುವ ಸೋಲಾರ್ ಪಾರ್ಕರ್ ಬಾಹ್ಯಾ ಕಾಶ ನೌಕೆ ಸೂರ್ಯನ  ಹೊರವಲಯದ ಕಕ್ಷೆ ಸೇರಿದ್ದು ತನ್ನ ಶೋಧನಾಕಾರ್ಯ ಆರಂಭಿಸಿದೆ. ಸೂರ್ಯನಿಂದ ೬.೪ ದಶಲಕ್ಷ ಕಿ.ಮೀ.ಅಂತರದ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುವ ಈ ನೌಕೆ ಆವಲದಲ್ಲಿಯ ಸೌರ ಮಾರುತ, ಅದರ ವೇಗ ಮತ್ತು ಭೂ ಕಾಂತಿಯ ವಲಯದ ಮೇಲೆ ಅದರ ಪ್ರಭಾವ ಕುರಿತಂತೆ ೭ ವರ್ಷಗಳ ಕಾಲ ಅಧ್ಯಯನ ನಡೆಸಲಿದೆ.

25vichara2

ಸೋಲಾರ್ ಖಭೌತ ವಿಜ್ಞಾನಿ ಯುಗೆನ್ ಪಾರ್ಕರ್ ಹೆಸರಿನ ಈ ನೌಕೆ, ಇದುವರೆಗೆ ಯಾವುದೇ ಮಾನವ ನಿರ್ಮಿತ ನೌಕೆ ತಲುಪದಷ್ಟು ಸೂರ್ಯನ ಹತ್ತಿದ ಕಕ್ಷೆಯನ್ನು ತಲುಪಿದೆ. ಈ ಹಿಂದೆ  ನಾಸ ೧೯೭೬ರಲ್ಲಿ ಕಳುಹಿಸಿದ್ದ ಹೇಲಿಯೊ-೨ ಶೋಧನಾ ನೌಕೆ  ಸೂರ್ಯ ನಿಂದ ೪.೩ ದಶಲಕ್ಷ ಕಿ.ಮೀ ದೂರದ ಕಕ್ಷೆಯ ವರೆಗೆ ಮಾತ್ರ ತಲುಪಿತ್ತು.

ಸೋಲಾರ್ ಪಾರ್ಕರ್ ನೌಕೆಯನ್ನು ಅಗಾತ ಪ್ರಮಾಣದ ತಾಪಮಾನದಲ್ಲಿಯೂ ಕಾರ್ಯ ನಿರ್ವಹಿಸುವಂತೆ  ನಿರ್ಮಾಣ ಮಾಡಲಾಗಿದೆ.

ಇಷ್ಟೊಂದು ಶಾಖವನ್ನು ತಡೆದುಕೊಳ್ಳಲು ೧೧.೪೩ ಸೆ.ಮೀ. ದಪ್ಪದ ಕಾರ್ಬನ್ ಮಿಶ್ರಿತ  ವಿಶೇಷ  ಶಾಖ ರಕ್ಷಣಾ ಕವಚ  ನೌಕೆಯಲ್ಲಿದ್ದು, ಅದು ಸೂರ್ಯನ ಅಗಾದ ಪ್ರಮಾಣದ ಶಾಖದಿಂದ ನೌಕೆಯನ್ನು ರಕ್ಷಿಸ ಬಲ್ಲದು. ತನ್ನಲಿರುವ ಥರ್ಮಲ್ ರೇಡಿಯೇಟರ್‍ಸ್ ವಿಶೇಷ ಕೊಳವೆಗಳ ಮೂಲಕ ಶಾಖವನ್ನು ಬಾಹ್ಯಾಕಾಶಕ್ಕೆ ರವಾನಿಸುವ ಮೂಲಕ ನೌಕೆಯ ಒಳಭಾಗದಲ್ಲಿ ಸಾಮಾನ್ಯ ತಾಪಮಾನ ಇರುವಂತೆ ನೋಡಿಕೊಳ್ಳುತ್ತದೆ.

ಭೂಮಿಯಿಂದ ೧೪೯, ೬೦೦,೦೦೦ ಕಿ.ಮೀ ದೂರದಲ್ಲಿರುವ ಸೂರ್ಯ, ಭೂಮಿಯಂತೆ ಘನ ರೂಪದ್ದಲ್ಲ. ಉರಿಯುವ ಅನಿಲಗಳ ಚಂಡು. ಇದರಲ್ಲಿ ಶೇ.೭೦ ರಷ್ಟಿರುವ ಜಲಜನಕ ಮತ್ತು ಶೇ. ೩೦ ರಷ್ಟಿರುವ ಹೀಲಿಯಂ ಸದಾ ವಿದಳನ ಗೊಳ್ಳುತ್ತ ಅಪಾರ ಪ್ರಮಾಣದ ಶಾಖ ಮತ್ತು ಬೆಳಕನ್ನು ಹೊರ ಸೂಸುತ್ತಿರುತ್ತದೆ. ಸೂರ್ಯನ  ಕೇಂದ್ರ ಭಾಗವಾದ ಕೆರೋನಾದಲ್ಲಿ ನಡೆಯುವ ಈ ವಿದಳನ ಕಾರ್ಯದಿಂದಾಗಿಯೇ ಆ ಭಾಗದಲ್ಲಿ ೧,೩೭೭ ಡಿಗ್ರಿ ಸೆಲ್ಷಿಯಸ್ ನಷ್ಟು ತಾಪಮಾನ ವಿರುತ್ತದೆ.

Leave a Comment