ಸೂರ್ಯನ ಶೋಧನೆಗೆ ನೌಕೆ

ಸೂರ್ಯನ ಹೊರ ಮೇಲ್ಮೈಯಲ್ಲಿಯ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ನಾಸಾ ಕೈಗೊಂಡಿರುವ ಪಾರ್ಕರ್ ಸೋಲಾರ್ ಪ್ರೋಬ್ ಭಾಗವಾಗಿ ಇದೇ ತಿಂಗಳು ೧೧ ರಂದು ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುತ್ತಿದೆ.

ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಶೋಧನೌಕೆಯನ್ನು ಡೆಲ್ಟಾ-Iಗಿ ಉಡಾವಣಾ ರಾಕೇಟ್ ಹೊತ್ತೊಯ್ಯಲಿದೆ. ಮಾನವ ನಿರ್ಮಿತ ಯಾವುದೇ ನೌಕೆ ಇದುವರೆವಿಗೂ ಹೋಗದಷ್ಟು ಸೂರ್ಯನ ಹತ್ತಿರಕ್ಕೆ ಈ ನೌಕೆಯನ್ನು ಕಳುಹಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಬೆಂಕಿಯುಂಡೆಯಾಗಿರುವ ಸೂರ್ಯನ ಹತ್ತಿರಕ್ಕೆ ಹೋಗುವುದು ಎಂದರೆ ಅದರ ಅಗಾದ ಪ್ರಮಾಣದ ತಾಪವನ್ನು ತಡೆದುಕೊಂಡು ನೌಕೆ ಅಧ್ಯಯನ ನಡೆಸಬೇಕಾಗುತ್ತದೆ.

ಈ ಕಾರಣದಿಂದಲೇ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು ಥರ್ಮಲ್ ಪ್ರೊಟೆಕ್ಷನ್ ಸಿಸ್ಟಂ ಅಥವಾ ಹೀಟ್ ಶೀಲ್ಡ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ‘ಸೂರ್ಯನ ಶಾಖ ಮತ್ತು ವಿಕಿರಣವನ್ನು ಸಮರ್ಥವಾಗಿ ಎದುರಿಸುವಷ್ಟು ಸಾಮರ್ಥ್ಯವಾಗಿ ಈ ನೌಕೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಈ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಆಂಡಿಡ್ರೀಸ್ಟನ್ ಹೇಳಿದ್ದಾರೆ.

5vichara2

ನಾಸಾ ಮೊದಲ ಬಾರಿಗೆ ಸೂರ್ಯನ ಹೊರವಲಯದಲ್ಲಿ ನಡೆಯುವ ಪ್ರಕ್ರಿಯೆಗಳ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆಯನ್ನು ಇದೇ ತಿಂಗಳು 11 ರಂದು ಉಡಾವಣೆ ಮಾಡುತ್ತಿದೆ.

ಸೂರ್ಯನ ಪ್ರಖರ ಶಾಖವನ್ನು ತಡೆದುಕೊಳ್ಳುವಂತೆ ಪಾರ್ಕರ್ ಸೋಲಾರ್ ಕ್ರೋಬ್ ನೌಕೆಯನ್ನು ನಿರ್ಮಾಣ ಮಾಡಲಾಗಿದೆ. ಸೂರ್ಯನ ಹತ್ತಿರದ ಕಕ್ಷೆಯಲ್ಲಿ ಸುಮಾರು 7 ವರ್ಷಗಳ ಕಾಲ ಸುತ್ತುತ್ತ ಅದರ ಹೊರ ವಲಯದ ಅಧ್ಯಯನ ನಡೆಸುವ ಈ ನೌಕೆ, ಸೂರ್ಯನ ಉಷ್ಣತೆ, ವಿಕಿರಣ ಸಾಮರ್ಥ್ಯ ಹಾಗೂ ಇತರೆ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಮಾಹಿತಿಯನ್ನು ಭೂಮಿಗೆ  ರವಾನಿಸುತ್ತದೆ.

ಸೌರಮಂಡಲದಲ್ಲಿಯ ಗ್ರಹ, ನಕ್ಷತ್ರಗಳಲ್ಲದೆ ಸೌರಮಂಡಲದಾಚಿಗಿನ ಹೊಸ ನಕ್ಷತ್ರ ಮಂಡಲಗಳು ಮತ್ತು ಆಕಾಶಕಾಯಗಳ ಅಧ್ಯಯನದಲ್ಲಿ ತೊಡಗಿರುವ ವಿಶ್ವದ ಬಾಹ್ಯಾಕಾಶ ಸಂಸ್ಥೆಗಳಿಗೆ ಅದೇ ರೀತಿಯಲ್ಲಿ ಸೂರ್ಯನನ್ನು ಕುರಿತಂತೆ ಶೋಧನೆ ಮಾಡಲು ಸಾಧ್ಯವಾಗಿಲ್ಲ. ನಾಸಾ ಈ ಯತ್ನವನ್ನು ಈಗ ಕೈಗೊಂಡಿದೆ. ಭಾರತವೂ ಸಹ ಇಂತ ಯತ್ನಕ್ಕೆ ಕೈಹಾಕಿದ್ದು, ಆದಿತ್ಯ-1 ಪರಿಷ್ಕೃತ ಯೋಜನಾ ಕಾರ್ಯಾದಲ್ಲಿ ನಿರತವಾಗಿದೆ.

ಭೂಮಿಯಿಂದ ೧೫ ಕೋಟಿ ಕಿ.ಮೀ ದೂರದಲ್ಲಿರುವ ಸೂರ್ಯ ಬಿಸಿ ಅನಿಲಗಳಿಂದ ಕೂಡಿದ್ದು, ಉರಿಯುತ್ತಿರುವ ಚೆಂಡಿನಂತೆ ಕಾಣುತ್ತಾನೆ. ಇದರ ತಾಪಮಾನ ಮತ್ತು ಬೆಳಕಿನ ಕಿರಣಗಳು ಅತೀ ತೀಕ್ಷ್ಣ. ಸೂರ್ಯ ಹೊರ ಮೈ ಉಷ್ಣಾಂಶವೇ ೬೦೦೦ ಡಿಗ್ರಿ ಸೆಂಟಿಗ್ರೇಟ್. ಮಧ್ಯಭಾಗದ ಉಷ್ಣಾಂಶ ೧ ಕೋಟಿ ೪೫ ಲಕ್ಷ ಡಿಗ್ರಿ ಸೆಂಟಿಗ್ರೇಟ್ ಅಂದರೆ ೧,೪೩೦ ಸೆಂಟಿಗ್ರೇಟ್ ಉಷ್ಣತೆಯಲ್ಲಿ ಕಬ್ಬಿಣವೇ ಕರಗಿ ನೀರಾಗುತ್ತದೆ. ಅಂದ ಮೇಲೆ ಈಗ ಶೋಧನೆಗೆ ಹೋಗುವ ಬಾಹ್ಯಾಕಾಶ ನೌಕೆಯ ಮುಂದಿರುವ ಸವಾಲು ಎಷ್ಟು ಎಂಬುದನ್ನು ಅಂದಾಜು ಮಾಡಬಹುದು.

ಸೂರ್ಯನ ಒಳಗಿನ ಜಲಜನಕದ ಪರಮಾಣುವಿದಳನ ಕ್ರಿಯೆ ನಿರಂತರವಾಗಿ ನಡೆಯುವ ಮೂಲಕ ಅಗಾಧ ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ. ಸೂರ್ಯನ ಗಾತ್ರ ಮತ್ತು ಭಾರದಿಂದಾಗಿ ಅದರ ಒಳ ಭಾಗದ ಅತ್ಯಂತ ಹೆಚ್ಚಿನ ಒತ್ತಡಕ್ಕೆ ಒಳಗಾಗುವುದರಿಂದಲೇ ಜಲಜನಕದ ಅಣುಗಳು ಮಿಳಿತಗೊಂಡು ಮತ್ತೆ ಮತ್ತೆ ವಿದಳನಕ್ಕೆ ಒಳಗಾಗುತ್ತದೆ.

ಸೂರ್ಯನ ಹೊರ ವಲಯದ ಶೋಧನೆಗಾಗಿ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಯನ್ನು ನಾಸಾ ೨೦೦೯ರಲ್ಲಿಯೇ ಕೈಗೆತ್ತಿಕೊಂಡಿದೆ. ಆದರೆ ಇದು ಹೆಚ್ಚಿನ ಕ್ಲಿಷ್ಟಕರವಾದ ಯಾನವಾದ ಕಾರಣ ನೌಕೆಯ ನಿರ್ಮಾಣ ಮತ್ತು ಉಡಾವಣಾ ದಿನಾಂಕಗಳು ಬೇಗ ನಿರ್ಧರಿಸಲು ಸಾಧ್ಯವಾಗಿರಲಿಲ್ಲ.

ಕಳೆದ ತಿಂಗಳು ೩೧ ರಂದು ಉಡಾವಣೆ ಮಾಡಲು ಸಿದ್ಧತೆಗಳು ನಡೆದಿದ್ದರೂ ಅದನ್ನು ಮುಂದೂಡಲಾಗಿತ್ತು. ಈಗ ಆ. ೧೧ ರಂದು ಉಡಾವಣೆ ದಿನಾಂಕ ನಿಗದಿಯಾಗಿದೆ.

ಉತ್ತನೂರು ವೆಂಕಟೇಶ್

Leave a Comment