ಸೂರ್ಯನ ನೇರ ದೃಶ್ಯಗಳನ್ನು ಸೆರೆಹಿಡಿಯಲು ನಭಕ್ಕೆ ಚಿಮ್ಮಲಿದೆ ನಾಸಾದ ಸೋಲಾರ್ ಆರ್ಬಿಟರ್

ವಾಷಿಂಗ್ಟನ್, ಜ 28 – ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್ ಎ) ಜಂಟಿಯಾಗಿ ಸೂರ್ಯದ ದಕ್ಷಿಣ ಹಾಗೂ ಉತ್ತರ ಧ್ರುವಗಳಿಗೆ ಹೊಸ ಉಪಗ್ರಹವೊಂದನ್ನು ಉಡಾವಣೆ ಮಾಡಲಿವೆ.
ಈ ಕುರಿತು ಸೋಮವಾರ ನಾಸಾ ಮಾಹಿತಿ ನೀಡಿದ್ದು, ಫೆ. 7ರಂದು ಫ್ಲೋರಿಡಾದ ಕೇಪ್ ಕನವೆರಲ್ ನಿಂದ ಉನೈಟೈಡ್ ಲಾಂಚ್ ಅಟ್ಲಾಸ್ ವಿ ರಾಕೆಟ್ ಮೂಲಕ ಸೋಲಾರ್ ಆರ್ಬಿಟರ್ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಇದು ಉಡಾವಣಾ ನೌಕೆಯಿಂದ ಹೊರಬಂದು ಸೂರ್ಯನ ಧ್ರವುಗಳ ಮೊದಲ ಚಿತ್ರವನ್ನು ಸೆರೆ ಹಿಡಿಯಲು ಶುಕ್ರಗ್ರಹ ಮತ್ತು ಭೂಮಿಯ ಗುರುತ್ವಾಕರ್ಷಣೆಯನ್ನು ಬಳಸಿಕೊಳ್ಳಲಿದೆ ಎಂದು ತಿಳಿಸಿದೆ.
ಈ ಎಕ್ಲಿಪ್ಟಿಕ್ ನೌಕೆಯನ್ನು ಸೂರ್ಯನ ಮಧ್ಯಭಾಗಕ್ಕೆ ಸಮನಾಗಿ ಸಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಸೋಲಾರ್ ಆರ್ಬಿಟರ್ ಉಪಗ್ರಹ ಉಡಾವಣಾ ನೌಕೆಯೊಳಗೆ ಮತ್ತು ಅದಕ್ಕೆ ಸಮೀಪದಲ್ಲಿರುವವರೆಗೆ ನಾವು ಮೇಲಿನಿಂದ ಚಂದ್ರನನ್ನು ನೋಡಲು ಸಾಧ್ಯವಾಗುತ್ತದೆ ಎಂದು ಬಾಹ್ಯಾಕಾಶ ವಿಜ್ಞಾನಿ ರುಸೆಲ್ ಹಾವರ್ಡ್ ಹೇಳಿದ್ದಾರೆ.
ಇದಕ್ಕೂ ಮುನ್ನ ಸೂರ್ಯನ ಧ್ರುವದತ್ತ ನಾಸಾದ ಯುಲೈಸೆಸ್ ಉಪಗ್ರಹ ಮಾತ್ರ ಪ್ರಯಾಣ ಬೆಳೆಸಿತ್ತು. ಇದನ್ನು 1990ರಲ್ಲಿ ಉಡಾವಣೆ ಮಾಡಲಾಗಿತ್ತು ಮತ್ತು 2009ರಲ್ಲಿ ನಿವೃತ್ತಿಯಾಯಿತು. ಆದರೆ, ಯುಲೈಸೆಸ್ ಎಂದಿಗೂ ಭೂಮಿಗಿಂತ ಹೆಚ್ಚು ಸೂರ್ಯನ ಸಮೀಪ ಸಾಗಲು ಸಾಧ್ಯವಾಗಲಿಲ್ಲ ಮತ್ತು ಕೇವಲ ಉಪಗ್ರಹದ ಸುತ್ತಮುತ್ತಲಿನ ಬಾಹ್ಯಾಕಾಶ ಪರಿಸರವನ್ನು ಪರಿಶೀಲಿಸಲು ಉಪಗ್ರಹಗಳನ್ನು ಸಾಗಿಸಲು ನೆರವಾಯಿತಷ್ಟೇ.
ಈ ನೂತನ ಆರ್ಬಿಟರ್ ಬುಧಗ್ರಹದ ಕಕ್ಷೆಯೊಳಗೆ ಪ್ರವೇಶಿಸಲಿದ್ದು, ತನ್ನೊಂದಿಗೆ ನಾಲ್ಕು ಉಪಕರಣಗಳು ಮತ್ತು ಸೂರ್ಯನನ್ನು ದೂರದಿಂದ ಗುರುತಿಸಬಲ್ಲ ಆರು ರಿಮೋಟ್ ಸೆನ್ಸಿಂಗ್ ಉಪಕರಣಗಳನ್ನು ಹೊತ್ತೊಯ್ಯಲಿದೆ ಎಂದು ನಾಸಾ ತಿಳಿಸಿದೆ.
ಇದು ಏಳೂ ವರ್ಷಗಳ ಅವಧಿಯಲ್ಲಿ ಸೂರ್ಯದ ಮಧ್ಯಭಾಗದ 24 ಡಿಗ್ರಿ ಅಂತರವನ್ನು ತಲುಪಲಿದೆ ಮತ್ತು ಮುಂದಿನ ಹೆಚ್ಚುವರಿ ಮೂರು ವರ್ಷಗಳಲ್ಲಿ ಅದನ್ನು 33 ಡಿಗ್ರಿಗೆ ಹೆಚ್ಚಿಸಲಿದೆ. ಇದು 2018ರ ಪಾರ್ಕರ್ ಸೋಲಾರ್ ಪ್ರೋಬ್ ನಂತರ ನಾಸಾದ ಎರಡನೇ ಪ್ರಮುಖ ಬಾಹ್ಯಾಕಾಶ ಯೋಜನೆಯಾಗಿದೆ.

Leave a Comment