ಸೂರು ಕಳೆದುಕೊಳ್ಳುವ ಭೀತಿಯಲ್ಲಿ ೪೦೦ ಕುಟುಂಬಗಳು

ಸೋನ್‌ಭದ್ರಾ, ಫೆ ೨೩-ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ೪೦೦ ಆದಿವಾಸಿ ಕುಟಂಗಳು ಮನೆ ಮಠ ಕಳೆದುಕೊಳ್ಳುವ ಭೀತಿಗೆ ಸಿಲುಕಿವೆ. ಭಾರತೀಯ ಭೌಗೋಳಿಕ ಸಮೀಕ್ಷೆ ೧೨ ಲಕ್ಷ ಕೋಟಿ ಮೌಲ್ಯದ ೩೦೦೦ ಟನ್‌ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿರುವ ಬೆನ್ನಲ್ಲೆ, ಆದಿವಾಸಿ ಕುಟುಂಬಗಳು ನೆಲೆ ಕಳೆದುಕೊಳ್ಳುವ ಭೀತಿಗೆ ಸಿಲುಕಿವೆ.
ಸೋನ್‌ಭದ್ರಾ ಜಿಲ್ಲೆಯ ಸಾನ್ ಪಾಡಿ ಮತ್ತು ಹಾರ್ದಿ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ದೊರೆತಿರುವುದನ್ನು ಭಾರತೀಯ ಭೌಗೋಳಿಕ ಸಮೀಕ್ಷೆ ದೃಢಪಡಿಸಿದ್ದು, ಇದರ ಇ-ಟೆಂಡಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರಿಷ್ಠ ಮಟ್ಟದ ಚಿನ್ನದ ನಿಕ್ಷೇಪಗಳು ಇರುವುದರಿಂದ ದೇಶದ ಭೂಪಟ ಪಟ್ಟಿಯಲ್ಲಿ ಹಾಗೂ ವಿಶ್ವದಲ್ಲೇ ಮೊದಲ ಪಟ್ಟಿಯಲ್ಲಿದೆ. ಆದರೆ ಪನಾರಿ ಗ್ರಾಮ ಪಂಚಾಯ್ತಿಯ ೨೫೦ ಹಾಗೂ ಧೋಹರ್ ಮತ್ತು ಪಿಪ್ವಾರ ಗ್ರಾಮಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಆದಿವಾಸಿಗಳೇ ಹೆಚ್ಚು ಜನರು ವಾಸವಾಗಿದ್ದಾರೆ.
ಈ ಭಾಗದ ಜನರು ಕೃಷಿ ಮತ್ತು ಬೇಟೆಯಾಡಿ ಜೀವನಸಾಗಿಸುತ್ತಿದ್ದಾರೆ. ಈ ಆದಿವಾಸಿಗಳನ್ನು ತೆರವುಗೊಳಿಸಿದರೆ ಮನೆ, ಜಮೀನುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಮನೆ, ಮಠ ಕಳೆದುಕೊಳ್ಳುವ ಈ ಆದಿವಾಸಿಗಳಿಗೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.
ಇಲ್ಲಿರುವ ಆದಿವಾಸಿಗಳನ್ನು ತೆರವುಗೊಳಿಸಿದರೆ ಜೀವನ ಸಾಗಿಸುವುದು ದುಸ್ತರವಾಗುತ್ತದೆ. ಹೀಗಾಗಿ ಸರ್ಕಾರ ನಿರ್ದಿಷ್ಟ ಮೊತ್ತದ ಪರಿಹಾರ ನೀಡಬೇಕೆಂದು ಪರಿಸರ ಕಾರ್ಯಕರ್ತ ರಾಮೇಶ್ವರ್ ಗೋಂಡ್ ಒತ್ತಾಯಿಸಿದ್ದಾರೆ.

Leave a Comment