ಸೂರಜ್ ಜೋಡಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

ಬೆಂಗಳೂರು, ಜು 10 -ಪಾರ್ವತಮ್ಮ ರಾಜಕುಮಾರ್ ಅವರ ಸಹೋದರ ಎಸ್.ಎ.ಶ್ರೀನಿವಾಸ್ ಅವರ ಪುತ್ರ ಸೂರಜ್‍ಕುಮಾರ್ ಚೊಚ್ಚಲ ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಲಿದೆ  ನೀನಾಸಂನಲ್ಲಿ ತರಬೇತಿ ಪಡೆದಿರುವ ಸೂರಜ್ `ತಾಕತ್` ಹಾಗೂ `ಐರಾವತ` ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಶಯದಂತೆ ಸೂರಜ್ ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ನಿರ್ಮಾಪಕ ಬಿ ಎಸ್ ಸುಧೀಂದ್ರ ತಿಳಿಸಿದ್ದಾರೆ  ಸೂರಜ್ ಗೆ ಜೋಡಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯ ವಾರಿಯರ್ ನಟಿಸುತ್ತಿದ್ದಾರೆ  ಲಕ್ಷ್ಮೀವೆಂಕಟೇಶ್ವರ ಕಂಬೈನ್ಸ್ ಲಾಂಛನದಲ್ಲಿ `ಪ್ರೊಡಕ್ಷನ್ ನಂ 6` ನೂತನ ಚಿತ್ರಕ್ಕೆ ಬಿ ಎಸ್ ಸುಧೀಂದ್ರ ಬಂಡವಾಳ ಹೂಡಿದ್ದಾರೆ  `ಕಿಲ್ಲಿಂಗ್ ವೀರಪ್ಪನ್` ಚಿತ್ರದ ನಂತರ ಬಿ.ಎಸ್ ಸುಧೀಂದ್ರ ಈ ಚಿತ್ರದ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ

ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ 5 ಹಾಡುಗಳು ಹಾಗೂ 3 ಸಾಹಸ ಸನ್ನಿವೇಶಗಳಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಇಮ್ರಾನ್ ನೃತ್ಯ ನಿರ್ದೇಶನ ಹಾಗೂ ಡಾ ರವಿವರ್ಮ ಸಾಹಸ ನಿರ್ದೇಶನವಿದ್ದು,  ಬೆಂಗಳೂರು, ಕಾಶಿ, ಹೈದರಾಬಾದ್ ಮುಂತಾದ ಕಡೆ ಚಿತ್ರಕ್ಕೆ 60 ದಿನಗಳ ಚಿತ್ರೀಕರಣ ನಡೆಯಲಿದೆ.

ರಘು ಕೋವಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಶಶಾಂಕ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಇವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

Leave a Comment