ಸೂಯಿ ಧಾಗ ಅಭಿಯಾನ – ಸೂಜಿ ದಾರ

ವರುಣ್ ಧವನ್ ಮತ್ತು ಅನುಷ್ಕಾ ಶರ್ಮಾ ತಾರಾಗಣದ ‘ಸೂಯಿ ಧಾಗ’ (ಸೂಜಿ ದಾರ) ಉದ್ಯಮಶೀಲತೆ ಮತ್ತು ಆತ್ಮನಿರ್ಭರತೆಯ ಸಬಲೀಕರಣದ ಪರಿಣಾಮವನ್ನು ಸಂಭ್ರಮಿಸುತ್ತದಲ್ಲದೇ, ರಾಷ್ಟ್ರೀಯ ಕೈಮಗ್ಗ ದಿನವಾದ ಆ ೭ರಂದು ತನ್ನ ಅಭಿಯಾನ ಆರಂಭಿಸಲಿದೆ.

ಚಿತ್ರದಲ್ಲಿ ವರುಣ್ ದರ್ಜಿಯೊಬ್ಬನ ಪಾತ್ರ ವಹಿಸಿದರೆ, ಅನುಷ್ಕ, ಕಸೂತಿ ಕೆಲಸ ಮಾಡುವವರಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿ ಅವರ ಪಾತ್ರಗಳು ಜಗತ್ತಿನ ಎಲ್ಲೆಡೆಗಳಲ್ಲಿ ಖ್ಯಾತಿ ಗಳಿಸಿರುವ ಭಾರತೀಯ ಕರಕುಶಲತೆಯನ್ನು ಸಂಭ್ರಮಿಸುತ್ತವೆ. ಚಲನಚಿತ್ರದ ಪ್ರಚಾರ ಆರಂಭಿಸಲು ಇದಕ್ಕಿಂತಲೂ ಹೆಚ್ಚು ಸೂಕ್ತ ಮತ್ತೊಂದಿರಲಾರದು.

sui-dhaaga-image-2“ಪ್ರಜ್ಞಾ ಪೂರ್ವಕವಾಗಿ ನಾವು ಅಭಿಯಾನವನ್ನು ರಾಷ್ಟ್ರೀಯ ಕೈಮಗ್ಗ ದಿನವಾದ ಆಗಸ್ಟ್ ೭ರಂದು ಆರಂಭಿಸಲು ಇಚ್ಛಿಸಿದ್ದೆವು. ನಮ್ಮ ಚಿತ್ರ ‘ಸೂಯಿ ಧಾಗ’ ಆ ಧೈರ್ಯಶಾಲಿ ಉದ್ಯಮಶೀಲರು ಮತ್ತು ಮತ್ತು ದೇಶದ ಆತ್ಮನಿರ್ಭರತೆಯ ಕಾರ್ಯ ಪಡೆಯಾದ- ಕಲಾವಿದರು, ಕರಕುಶಲಕರ್ಮಿಗಳು, ನೇಕಾರರಿಗೆ ಗೌರವ ಸಲ್ಲಿಸುವ ಚಿತ್ರವಾಗಿದೆ. ಭಾರತದ ಬೆಳೆಯುತ್ತಿರುವ ಸ್ವದೇಶಿ ಉದ್ಯಮಕ್ಕೆ ತಳಮಟ್ಟದಲ್ಲಿ ಕೊಡುಗೆ ನೀಡುವವರಾಗಿದ್ದಾರೆ.  ನಮ್ಮ ದೇಶದ ಕೌಶಲ್ಯಪೂರ್ಣ ಉದ್ಯಮ ಶೀಲರಿಗೆ ಸಮರ್ಪಿತವಾದ ದಿನದಂದೇ ನಮ್ಮ ಪ್ರಚಾರಾಭಿಯಾನ ಆರಂಭಿಸಲು ನಾವು ನಿರ್ಧರಿಸಿದ್ದೇವೆ” ಎಂದು ನಿರ್ಮಾಪಕ ಮನೀಶ್ ಶರ್ಮಾ ಹೇಳಿದರು.

ಭಾರತದ ಇತಿಹಾಸದಲ್ಲಿ ಈ ದಿನದ ಪ್ರಾಮುಖ್ಯತೆಯನ್ನು ಗಮನಿಸಿಯೇ ಪ್ರತಿ ವರ್ಷ ಆಗಸ್ಟ್ ೭ರಂದು ರಾಷ್ಟ್ರೀಯ ಕೈಮಗ್ಗ ದಿನ ಆಚರಿಸುವಂತೆ ಭಾರತದ ಕೇಂದ್ರ ಸರ್ಕಾರ ಘೋಷಿಸಿದೆ. ೧೯೦೫ರಲ್ಲಿ ಇದೇ ದಿನದಂದು ಸ್ವದೇಶಿ ಚಳುವಳಿಯನ್ನು ಆರಂಭಿಸಲಾಗಿತ್ತು. ಈ ಚಳುವಳಿ ಭಾರತೀಯ ಉದ್ಯಮಶೀಲತೆಗೆ ಮರು ಜೀವ ನೀಡಿತ್ತು. ವರುಣ  ಅನುಷ್ಕಾ ಅವರು ಈ ದಿನದಿಂದ ಭಾರತ ಪ್ರವಾಸ ಆರಂಭಿಸಲಿದ್ದಾರೆ.

ಮಾರುಕಟ್ಟೆ ಅಭಿಯಾನದ ಮೊದಲ ಆಸ್ತಿಯನ್ನು ನಾವು ಬಿಡುಗಡೆ ಮಾಡಲಿದ್ದು, ಅದು ಟ್ರೇಲರ್ ಅಲ್ಲ. ಟ್ರೇಲರ್ ಒಂದು ವಾರದ ನಂತರ ಹೊರಬರಲಿದೆ. ರಾಷ್ಟ್ರೀಯ ಕೈಮಗ್ಗ ದಿನದಂದು ನಾವು ಬಿಡುಗಡೆ ಮಾಡಲಿರುವ ಆಸ್ತಿಯನ್ನು ಸಿದ್ಧ ಪಡಿಸಲು ಮಾರುಕಟ್ಟೆ ಮತ್ತು ಸಂವಹನ ತಂಡ ಆರು ತಿಂಗಳು ದಣಿವಿಲ್ಲದೇ ಶ್ರಮಿಸಿದೆ. ಈ ತುಣುಕನ್ನು ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಚಟುವಟಿಕೆಗೆ ನಮ್ಮ ಬಳಿ ಒಂದು ಮಹತ್ವಾಕಾಂಕ್ಷಿ ಯೋಜನೆಯಿದ್ದು, ಅದನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು” ಎಂದರು.

ಶರತ್ ಕಟಾರಿಯ ನಿರ್ದೇಶಿಸಿ, ಮನೀಶ್ ಶರ್ಮಾ(ದಮ್ ಲಗಾಕೆ ಹೈಶಾ ಚಿತ್ರ ತಯಾರಿಸಿದ ರಾಷ್ಟ್ರೀಯ ಪ್ರಶಸ್ತಿ ವಿಜೇತ ತಂಡ) ನಿರ್ಮಿಸಿರುವ ಮತ್ತು ಉನ್ನತ ನಿರೀಕ್ಷೆಯ ‘ಸೂಯಿ ಧಾಗ’ ಚಿತ್ರ ಸೆ ೨೮ರಂದು ಬಿಡುಗಡೆಯಾಗಲಿದೆ.

Leave a Comment