ಸೂಯಿ ಧಾಗಾ – ಮೇಡ್ ಇನ್ ಇಂಡಿಯಾ

ಬಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ  ಮೂಡಿಸಿರುವ ಹಾಗೂ ಅನುಷ್ಕಾ ಶರ್ಮಾ ಮತ್ತು ವರುಣ್ ಧವನ್ ಅಭಿನಯದ ಸೂಯಿ ಧಾಗಾ-ಮೇಡ್ ಇನ್ ಇಂಡಿಯಾ ಚಲನಚಿತ್ರಕ್ಕಾಗಿ ತಮ್ಮ ಕೈಲಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈ ಗೊಂಡಿದ್ದಾರೆ.
ಈ ಸೂಪರ್ ಸ್ಟಾರ್‌ಗಳು ಚಲನ ಚಿತ್ರದಲ್ಲಿ ಅಮಾಯಕ ಮೌಜಿ ಮತ್ತು ಮಮತ ಎಂಬ ಪಾತ್ರಗಳಲ್ಲಿ ನಟಿಸಿದ್ದು, ಅನುಷ್ಕಾ ಅವರು ಕಸೂತಿ ಕಲಾವಿದೆಯ ಪಾತ್ರ ನಿರ್ವಹಿಸಿದ್ದರೆ ವರುಣ್ ಒಬ್ಬ ದರ್ಜಿಯ ಪಾತ್ರ ನಿರ್ವ ಹಿಸಿದ್ದಾರೆ.

ತಮ್ಮ ಅದ್ಭುತ ನಟನೆಯಿಂದ ಬಾಲಿವುಡ್‌ನಲ್ಲಿ ಖ್ಯಾತಿ ಗಳಿಸಿರುವ ನಟಿ ಅನುಷ್ಕಾ ಶರ್ಮಾ ಸೂಯಿಧಾಗ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಸೂತಿ ಕೆಲಸ ಮಾಡುವವರನ್ನು ಬಹಳ ಹತ್ತಿರದಿಂದ ಗಮನಿಸಿದ್ದಲ್ಲದೇ, ಮಧ್ಯರಾತ್ರಿಯಲ್ಲಿ ಹೊಲಿಗೆ ಹಾಕುವುದನ್ನು ಅಭ್ಯಾಸ ಮಾಡಿದ್ದಾರೆ. ಸಾಧ್ಯವಾದಷ್ಟು ಮಮತ ಪಾತ್ರ ನೈಜತೆಯಿಂದ ಇರುವಂತೆ ಕಾಣಲು ಅನುಷ್ಕಾ ಬಹಳ ಶ್ರಮವಹಿಸಿದ್ದಾರೆ ಎಂಬುದು ಕೆಲ ದೃಶ್ಯಗಳು ಸಾರಿ ಹೇಳತ್ತವೆ.

ನಿರ್ದೇಶಕ ಶರತ್ ಕಟಾರಿಯಾ ಅವರು ಹಳ್ಳಿಯೊಂದರಲ್ಲಿ ಕೆಲಸ ಮಾಡುವ ದರ್ಜಿಯ ಕತೆಯನ್ನು ತಮ್ಮ ಚಿತ್ರದಲ್ಲಿ ಹಿಡಿದಿಡಲು ಇಚ್ಛಿಸಿ ದೃಶ್ಯಗಳು ಆದಷ್ಟು ಸ್ವಾಭಾವಿಕ ರೀತಿಯಲ್ಲಿ ಕಾಣುವಂತೆ ಮಾಡಲು ಸಕಲ ಪ್ರಯತ್ನ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಅನುಷ್ಕಾ ಅವರು ಮಾತನಾಡಿ, ಕರಕುಶಲ ಕರ್ಮಿಗಳು ಹಗಲೂ-ರಾತ್ರಿ ಕೆಲಸ ಮಾಡುತ್ತಾರೆ.

ರಾತ್ರಿಯ ವೇಳೆ ಹಳ್ಳಿಯೊಂದರಲ್ಲಿ ಕರಕುಶಲ ಕರ್ಮಿಗಳು ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸಲು ಶರತ್ ಇಚ್ಛಿಸಿದ್ದರು. ತಮ್ಮ ವೃತ್ತಿಪರ ಅಗತ್ಯಗಳನ್ನು ಪೂರೈಸಲು ಪ್ರಖರವಾದ ಬೀದಿ ದೀಪಗಳನ್ನು ಅನೇಕರು ಬಳಸುತ್ತಾರೆ ಎಂದು ನಾವು ತಿಳಿದುಕೊಂಡು, ಇದನ್ನೇ ನಮ್ಮ ಚಲನಚಿತ್ರದಲ್ಲಿ ತೋರಿಸಲು ಇಚ್ಛಿಸಿದ್ದೆವು ಎಂದರು.

ನಟ ವರುಣ್ ಅವರು ಮಾತನಾಡಿ, ಸಾಮಾನ್ಯವಾಗಿ ಈ ಪ್ರತಿಭಾವಂತ ಕಲಾವಿದರು ರಾತ್ರಿಯ ವೇಳೆ ಮನೆಯ ಮೇಲೆ ಹೋಗಿ ಕುಳಿತುಕೊಂಡು ತಮ್ಮ ಕೆಲಸಗಳನ್ನು ಆರಂಭಿಸುತ್ತಾರೆ. ಈ ಬದ್ಧತೆ, ಮಹತ್ವಾಕಾಂಕ್ಷೆ ಮತ್ತು ಉದ್ಯಮಶೀಲತೆಯ
ಚೇತನದ ಅಂಶಗಳನ್ನು ಮಮತ ಮತ್ತು ಮೌಜಿ ಅವರ ಪಾತ್ರಗಳು ಬಿಂಬಿಸುತ್ತವೆ.

ಚಂದೇರಿಯ ಬೀದಿ ದೀಪಗಳನ್ನು ಬಳಸಿ ಕೆಲವು ಹೊಲಿಗೆ ಮತ್ತು ಕಸೂತಿ ಕಾರ್‍ಯದ ದೃಶ್ಯಗಳನ್ನು ನಾವು ಚಿತ್ರೀಕರಿಸಿದ್ದೆವು. ಮತ್ತು ಅವು ನಿಜಕ್ಕೂ ಹೃದಯಸ್ಪರ್ಶಿಯಾಗಿವೆ.

ವರುಣ್ ಮತ್ತು ಅನುಷ್ಕಾ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ನಟಿಸುತ್ತಿದ್ದು ಇವರು ೨೦೧೮ರ ಬಹುನಿರೀಕ್ಷಿತ ಜೋಡಿಯಾಗಿದ್ದಾರೆ. ಯಶ್‌ರಾಜ್ ಫಿಲಮ್ಸ್‌ನ ಮನರಂಜನಾತ್ಮಕ ಸುಯಿ ಧಾಗಾ- ಮೇಡ್ ಇನ್ ಇಂಡಿಯಾ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ವಿಜೇತ, ನಿರ್ಮಾಪಕ ಮತ್ತು ನಿರ್ದೇಶಕ ಮನೀಶ್ ಶರ್ಮಾ ಮತ್ತು ಶರತ್ ಕಟಾರಿಯಾ ಅವರ ಜೋಡಿಯನ್ನು ಮತ್ತೆ ತರುತ್ತಿದೆ.

ಈ ಹಿಂದೆ ಈ ಜೋಡಿ ದಮ್ ಲಗಾ ಕೆ ಹೈಷಾ ಎಂಬ ಯಶಸ್ವಿ ಚಲನಚಿತ್ರವನ್ನು ನೀಡಿದ್ದರು. ಭಾರತದ ಯುವಜನತೆ ಮತ್ತು ಸ್ಥಳೀಯ ಕರಕುಶಲ ಕರ್ಮಿಗಳಲ್ಲಿರುವ ಅಭಿಜಾತ ಉದ್ಯಮಶೀಲತೆ ಚೇತನವನ್ನು ಈ ಚಲನಚಿತ್ರ ಗೌರವಿಸುತ್ತದೆ. ಸೂಯಿ ಧಾಗಾ ಮೇಡ್ ಇನ್ ಇಂಡಿಯಾ ಇದೇ ವರ್ಷ ಸೆಪ್ಟೆಂಬರ್ ೨೮ರಂದು ಗಾಂಧಿ ಜಯಂತಿಗೆ ಸ್ವಲ್ಪ ಮುಂಚಿತವಾಗಿ ತೆರೆ ಕಾಣಲಿದೆ.

ಚಾವ್ ಲಾಗಾ ಹಾಡು ಬಿಡುಗಡೆ

ಸುಯಿ ಧಾಗಾ ಚಿತ್ರದ ಮೊದಲ ಹಾಡು ಚಾವ್ ಲಾಗಾ ಬಿಡುಗಡೆಯಾಗಿದ್ದು, ಸ್ಟಾರ್ ನಟರ ನೈಜ ಅಭಿನಯ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಸುಯಿ ಧಾಗಾ ಚಿತ್ರಕ್ಕೆ ಅನು ಮಲಿಕ್ ಸಂಗೀತ ನೀಡಿದ್ದಾರೆ. ಸದ್ಯ ಸದ್ದು ಮಾಡುತ್ತಿರುವ ಹಾಡಿಗೆ, ಪಪೂನ್ ಹಾಗೂ ರೊಂಕಿನಿ ಗುಪ್ತಾ ಕಂಠದಾನ ಮಾಡಿದ್ದಾರೆ. ಮೂರು ನಿಮಿಷದ ವಿಡಿಯೋ, ಅಭಿಮಾನಿಗಳನ್ನು ಆಕರ್ಷಿಸಿದೆ. ತನ್ನ ತಾಯಿಗೆ ಅನುಶ್ಕಾ ಶರ್ಮಾ, ತಮ್ಮ ಪ್ರಿಯತಮನ ಜೊತೆ ಸುಖವಾಗಿರೋದಾಗಿ ಹೇಳುತ್ತಲೆ ಹಾಡು ಆರಂಭವಾಗುತ್ತದೆ.

ಸ್ಟಾರ್ ನಟರಾದ ವರುಣ್ ಧವನ್ ಹಾಗೂ ಅನುಷ್ಕಾ ಕೆಮೆಸ್ಟ್ರಿ ವರ್ಕ್ ಔಟ್ ಆಗಿದೆ. ಈ ವಿಡಿಯೋದಲ್ಲಿ ಸ್ಟಾರ್‌ಗಳು ಎದುರಿಸಿದ ಸವಾಲುಗಳನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ. ಈ ಚಿತ್ರದ ಹಾಡನ್ನು ವರುಣ್, ಅನುಷ್ಕಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

Leave a Comment