ಸೂಕ್ಷ್ಮಜೀವಿ ತಂತ್ರಜ್ಞಾನ: ವಿಚಾರ ಸಂಕಿರಣ 15 ರಿಂದ

ಕಲಬುರಗಿ ಸ 13: ನಗರದ ಸೇಡಂ ರಸ್ತೆ ಸರಕಾರಿ ಮಹಾವಿದ್ಯಾಲಯದಲ್ಲಿ ಸೂಕ್ಷ್ಮಜೀವಿ ತಂತ್ರಜ್ಞಾನ: ಇತ್ತೀಚಿನ ಬೆಳವಣಿಗೆಗಳು ಮತ್ತು ಅಭಿವೃದ್ಧಿ ( ರೀಸೆಂಟ್ ಅಡ್ವಾನ್ಸ್‍ಸ್ ಅಂಡ್ ಡೆವಲಪಮೆಂಟ್ ಇನ್ ಮೈಕ್ರೋಬಿಯಲ್ ಟೆಕ್ನಾಲಜಿ ) ವಿಷಯ ಕುರಿತು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಸಪ್ಟೆಂಬರ್ 15 ಮತ್ತು 16 ರಂದು ನಡೆಯಲಿದೆ.
ಈ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ರಾಜ್ಯಗಳ ವಿಷಯ ಪರಿಣಿತರು, ವಿಜ್ಞಾನಿಗಳು ಹಾಗೂ ಸಂಶೋಧಕರಿಂದ ಸುಮಾರು 80 ಸಂಶೋಧನಾ ಪ್ರಬಂಧ ಮಂಡನೆಯಾಗಲಿದ್ದು ಸುಮಾರು 300 ಪ್ರತಿನಿಧಿಗಳು ಭಾಗವಹಿಸುವರು ಎಂದು ಪ್ರಾಚಾರ್ಯರಾದ ಡಾ ನಂದಗಿ ರಾಚಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ವಿಚಾರ ಸಂಕಿರಣವನ್ನು ಬೆಳಿಗ್ಗೆ  10 .30 ಕ್ಕೆ ಜಿಲ್ಲಾ ಉಸ್ತುವಾರಿ  ಸಚಿವ ಡಾ ಶರಣ ಪ್ರಕಾಶ ಪಾಟೀಲ ಅವರು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಪ್ರೊ ಎಸ್ ಆರ್ ನಿರಂಜನ ಪ್ರೊ ಬಹ್ಮನಪದ ಸಿಪಿ ಅವರು ಆಗಮಿಸಲಿದ್ದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಅಧ್ಯಕ್ಷತೆ ವಹಿಸುವರು.
ಸಮಾರೋಪ ಸಮಾರಂಭ 16 ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದರು
ಸುದ್ದಿಗೋಷ್ಠಿಯಲ್ಲಿ  ಡಾ ರಾಮಕೃಷ್ಣ, ಡಾ ಸೋಮನಾಥರೆಡ್ಡಿ ಪಾಟೀಲ, ಪ್ರೊ ಬೀದೆ ಸುನೀಲಕುಮಾರ ಡಾ ಕೆ ಶಿವಕುಮಾರ ಇದ್ದರು

Leave a Comment