‘ಸುಶಾಂತ್ ಸಿಂಗ್ ರಜಪೂತ್ ವೈಯಕ್ತಿಕ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು

ನವದೆಹಲಿ, ಜೂನ್ 15-ಭಾನುವಾರ ಆತ್ಮಹತ್ಯೆಗೆ ಶರಣಾದ ನಟ ಸುಶಾಂಗ್ ಸಿಂಗ್ ರಜಪೂತ್ ವೈಯಕ್ತಿಕ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು ಎಂದು ಪತ್ರಕರ್ತ ಮತ್ತು ಚಲನಚಿತ್ರ ಪ್ರಚಾರಕ ಫ್ಲಿನ್ ರೆಮಿಡಿಯೋಸ್ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ (34) ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಮನೆಗೆಲಸದ ವ್ಯಕ್ತಿಯೊಬ್ಬರು ತಿಳಿಸಿದ್ದರು.
“ಸುಶಾಂತ್ ಕೆಲ ವೈಯಕ್ತಿಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು. ಈ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಆತ್ಮಹತ್ಯೆಯ ಹಿಂದೆ ಇನ್ನೂ ಹಲವು ಕಾರಣಗಳಿರಬಹು ಎಂದು ರೆಮಿಡಿಯೊಸ್ ಹೇಳಿಕೊಂಡಿದ್ದಾರೆ.

Share

Leave a Comment