ಸುಶಾಂತ್ ಸಾವು ಅರಗಿಸಿಕೊಳ್ಳದ ಅಭಿಮಾನಿಗಳು

ಜಾಲತಾಣದಲ್ಲಿ ರಾರಾಜಿಸುತ್ತಿದೆ ನಟರ ನೆನೆಪು

ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಬಾಲಿವುಡ್‌ಗೆ ಬರಸಿಡಿಲು ಬಡಿದಂತೆ ಆಗಿದೆ. ಹೌದು ಸುಂದರ ನೋಟ, ಅದ್ಭುತ ನಟನೆ, ವಿಶೇಷವಾಗಿ ಮಹಿಳೆ ಅಭಿಮಾನಿಗಳನ್ನು ಮನಸೂರೆಗೊಂಡಿದ್ದ ಸುಶಾಂತ್ ಇನ್ನು ಮುಂದೆ ನಮ್ಮೊಟ್ಟಿಗೆ ಇರುವುದಿಲ್ಲ ಎನ್ನುವುದನ್ನು ಊಹಿಸಿಕೊಳ್ಳಲ್ಲೇ ಸಾಧ್ಯವಾಗುತ್ತಿಲ್ಲ….

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಯುವನಟ ಚಿರಜೀವಿ ಸರ್ಜಾ ಅವರ ನಿಧನದ ನೋವು ಮಾಸುವೇ ಮುನ್ನವೇ ಬಾಲಿವುಡ್‌ ನಟ ಸುಶಾಂತ್‌ ಸಾವನ್ನು  ಕನ್ನಡ ಅಭಿಮಾನಿಗಳು ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ… ಸಾಮಾಜಿಕ ಜಾಲತಾಣದ ತುಂಬೆಲ್ಲಾ ಚಿರು ಹಾಗೂ ಸುಶಾಂತ್‌ ನೆನೆಪುಗಳನ್ನು ಬಿಚ್ಚಿಟ್ಟು ನೋವನ್ನುಹೊರಹಾಕುತ್ತಿದ್ದಾರೆ.

ಬಾಲಿವುಡ್‌ನಲ್ಲಿ ಗಾಡ್‌ ಫಾದರ್‌ ಇಲ್ಲದೇ ಬೆಳೆದ ನಟ ಸುಶಾಂತ್‌ ಅನೇಕ ಅವಮಾನಗಳನ್ನು ಹೆದರಿಸಿದ್ದಾರೆ. ಅದರಲ್ಲೂ ಪ್ರೀತಿ ಪ್ರೇಮದ ವಿಚಾರದಲ್ಲಿ ಭಾರಿ ನೋವುಂಡು ಹತಾಶರಾಗಿದ್ದರು. ನೋವನ್ನು ನುಂಗಿ ಬದಕದೇ ಆತ್ಮಹತ್ಯೆ ಶರಣಾದ ಸುಶಾಂತ್‌ ಹೋಗಿಬಿಟ್ಟಿದ್ದಾನೆ ಎಂದು ಅಳಲು ತೊಡಿಕೊಂಡಿದ್ದಾರೆ. ಯಾಕೆ ಈ ರೀತಿ ಮಾಡಿಕೊಂಡರು ಎಂದು ಅವರ ಹಿನ್ನಲೆ ಹುಡುಕಾಟವನ್ನು ಆರಂಭಿಸಿದ್ದರು. ಪವಿತ್ರಾ ರಿಶ್ತಾ ಎಂಬ ಧಾರಾವಾಹಿ ಮೂಲಕ ಬಾಲಿವುಡ್‌ನಲ್ಲಿ ಖ್ಯಾತಿಗಳಿಸಿದ ಸುಶಾಂತ್ ಗೆ ಮಾನವ್‌ ದೇಶಮುಖ್‌ ಪಾತ್ರ ಭಾರಿ ಹೆಸರನ್ನು ತಂದುಕೊಟ್ಟಿತ್ತು, ಆದರೆ ಅವರು ಇನ್ನು ಏನೇದಾರೂ ಸಾಧಿಸಬೇಕು ಎಂಬ ತವಕದಲ್ಲಿದ್ದರು.  ಸುಶಾಂತ್‌ ‘ಕಿಸ್ ದೇಶ್ ಮೇ ಹೈ ದಿಲ್ ಮೇರಾ’ ಧಾರಾವಾಹಿಯಲ್ಲಿ ಪ್ರೀತ್ ಜುನೇಜಾ ಪಾತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು ಎನ್ನಲಾಗಿದೆ.

ಬಿಹಾರದ ಪಾಟ್ನಾದಲ್ಲಿ ಜನಿಸಿದ ಸುಶಾಂತ್ ಸಿಂಗ್ ಅವರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದರು. ಅವರ ಕುಟುಂಬದಲ್ಲಿ ಕಿರಿಯ ಮತ್ತು ಏಕೈಕ ಮಗ ಆಗಿದ್ದರು ಸುಶಾಂತ್‌, ಅಲ್ಲದೇ ಅವರಿಗೆ ನಾಲ್ಕು ಹಿರಿಯ ಸಹೋದರಿಯರಿದ್ದಾರೆ, ಅವರಲ್ಲಿ ಒಬ್ಬರು ರಾಜ್ಯಮಟ್ಟದ ಕ್ರಿಕೆಟಿಗರಾಗಿದ್ದಾರೆ.  ಸುಶಾಂತ್‌  12 ನೇ ತರಗತಿಯಲ್ಲಿದ್ದಾಗ ಅವರ ತಾಯಿ ತೀರಿಕೊಂಡಿದ್ದರು.

ಸುಶಾಂತ್‌ ತಮ್ಮ ಶಾಲಾ ದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರಂತೆ,  2003 ರಲ್ಲಿ 7 ನೇ ರ್ಯಾಂಕ್ ಎಐಇಇಇ ಪಡೆದುಕೊಂಡಿದ್ದರು. ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ  ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದರು, ಬಣ್ಣದ ಲೋಕದತ್ತ ಮುಖಮಾಡಿ ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ಇವರನ್ನು ಬಾಲಿವುಡ್‌ ಮತ್ತೊಬ್ಬ ಎಸ್‌ಆರ್‌ಕೆ ಎಂದು ಕರೆಯಲಾಗುತ್ತಿತ್ತು. ಇನ್ನು ಸುಶಾಂತ್‌ ಒಳ್ಳೆ ಡ್ಯಾನ್ಸ್‌ ರ್‌ ಕೂಡ, ನೃತ್ಯ ಸಂಯೋಜಕ ಶಾಯಾಮಕ್ ದವಾರಾ ಅವರ ಅಡಿಯಲ್ಲಿ ನರ್ತಕರಲ್ಲಿ ಒಬ್ಬರಾಗಿದ್ದರು. ಕಾಮನ್ವೆಲ್ತ್ ಗೇಮ್ಸ್, ಫಿಲ್ಮ್‌ಫೇರ್‌ನಂತಹ ಅನೇಕ ಕಾರ್ಯಕ್ರಮಗಳಲ್ಲಿ ಹಿನ್ನೆಲೆ ನರ್ತಕರಾಗಿಯೂ ಕಾಣಿಸಿಕೊಂಡಿದ್ದಾರೆ.  ಬಾಲಿವುಡ್‌ ಪ್ರವೇಶಕ್ಕೂ ಮೊದಲು ಆಶ್ಲೇ ಲೋಬೊ ಅವರ ತಂಡದೊಂದಿಗೆ ಕೈಜೋಡಿಸಿದ್ದರು.

ಅಲನ್ ಅಮಿಯಿಂದ ಸುಶಾಂತ್ ಸಮರ ಕಲಾ ಪಾಠಗಳನ್ನು ಕರಗತ ಮಾಡಿಕೊಂಡು ಪಿಟ್‌ ಅಂಡ್‌ ಫೈನ್‌ ಆಗಿದ್ದರು. ಇದಲ್ಲದೇ ಈ ಜೀನಿಯಸ್ ಹುಡುಗ ಭೌತಶಾಸ್ತ್ರದಲ್ಲಿ ರಾಷ್ಟ್ರೀಯ ಒಲಿಂಪಿಯಾಡ್ ವಿಜೇತರಾಗಿ ಸಾಧನೆ ಮಾಡಿದ್ದರು ಮುದ್ದಾದ ನಟ ಸುಶಾಂತ್ ರಾಜ್ 2 ಚಿತ್ರೀಕರಣದ ಸಮಯದಲ್ಲಿ ಅವರು ನಿರ್ದೇಶಕ ಮೋಹಿತ್ಸುರಿಗೆ ನೆರವು ಮಾಡಿದ್ದಾರೆ ಎನ್ನಲಾಗಿದೆ.
‘ಎಕ್ಜುಟೆ’ ಎಂಬ ನಾಟಕ ತಂಡದಲ್ಲಿ ಬ್ಯಾರಿ ಜಾನ್ ಅವರ  ವಿದ್ಯಾರ್ಥಿಯೂ ಆಗಿದ್ದರು ಎಂಬ ವದಂತಿ ಇದೆ. 2018 ರಲ್ಲಿ, ಸುಶಾಂತ್ ಅವರು ದುಬಾರಿ, ಬೋಯಿಂಗ್ 737 ಸ್ಥಿರ ಬೇಸ್ ಫ್ಲೈಟ್ ಸಿಮ್ಯುಲೇಟರ್ ಅನ್ನು ಸಹ ಖರೀದಿಸಿದ್ದರು. ಒಳ್ಳೆ ಸಂಭಾವನೆ, ಉತ್ತಮ ವಿರ್ಮಶೆಗಳು, ಇನ್ನು ನಾಲ್ಕೆದು ಹೊಸ ಪ್ರಾಜೆಕ್ಟ್‌ಗಳು ಕೈನಲ್ಲಿದ್ದರೂ ಸುಶಾಂತ್‌ ಆತ್ಮಹತ್ಯೆ ದಾರಿ ಹಿಡಿದಿದ್ದು ಸರಿಯಲ್ಲ ಎಂದು ಅಭಿಮಾನಿಗಳು, ಸೆಲಿಬ್ರಿಟಿಗಳು ದುಃಖಿತರಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಯುವ ನಟ ಚಿರಜೀವಿ ನಿಧನದಿಂದ ಕಂಗಲಾದ ಅಭಿಮಾನಿಗಳು ಕಳೆದೊಂದು ವಾರದಿಂದ ವಿಧಿಯಾ ಆಟಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಜಾಲತಾಣದ ತುಂಬೆಲ್ಲಾ ಚಿರು ಕೊನೆಯಾ ಟಿಕ್‌ಟಾಕ್‌, ಕೊನೆಯಾ ಮಾತು ಎಂದೆಲ್ಲಾ ಹಂಚಿಕೊಂಡು ದುಃಖ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೂ ಚಿರು ಕುಟುಂಬಕ್ಕೆ ಹಾಗೂ ಅಭಿಮಾನಿಗಳಲ್ಲಿ ನೋವು ಮಾತ್ರ ಮರೆಯಾಗಿಲ್ಲ ಎನ್ನಬಹುದು. ಒಂದೇ ವಾರದ ಅಂತರದಲ್ಲಿ ಈ ಇಬ್ಬರ ನಟರು ಸಣ್ಣ ವಯಸ್ಸಿನಲ್ಲಿ ಬಿಟ್ಟು ಹೋಗಿದ್ದಕ್ಕೆ ೨೦೨೦ರ ಆಟದ ವಿರುದ್ಧ ಜನರು ಗುಡುಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

Leave a Comment