ಸುಶಾಂತ್ ರಾಜಪೂತ್ ಸಾವಿಗೆ ರಾಜಕಾರಣಿಗಳು, ಕ್ರಿಕೆಟಿಗರು, ನಟರು ಸಂತಾಪ

ಬಾಲಿವಡ್ ನ ಸ್ಟಾರ್ ನಟ ಸುಶಾಂತ್ ಸಿಂಗ್ ರಾಜಪೂತ್ ಭಾನುವಾರ ಮುಂಬೈನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

34 ವರ್ಷದ ಸುಶಾಂತ್ ದೇಹ ನೇಣು ಬಿಗಿದ ರೀತಿಯಲ್ಲಿ ಬ್ಯಾಂಡ್ರಾದ ಮನೆಯಲ್ಲಿ ಪತ್ತೆಯಾಗಿತ್ತು. ನಾಲ್ಕು ದಿನಗಳ ಹಿಂದಷ್ಟೇ ಅವರ ಹಿಂದಿನ ಮ್ಯಾನೇಜ್ ದಿಶಾ ಸಾಲಿಯನ್ ಎಂಬುವರ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಎರಡೂ ಪ್ರಕರಣಗಳಿಗೆ ಸಂಬಂಧವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಸುಶಾಂತ್ ಸಾವಿಗೆ ಟಿವಿ ಹಾಗೂ ಬಾಲಿವುಡ್ ಸಿನಿಮಾ ನಟರು ತೀವ್ರ ಅಚ್ಚರಿ, ದುಃಖ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಕುಮಾರ್, “ಪ್ರಾಮಾಣಿಕವಾಗಿ ಈ ಸುದ್ದಿಯಿಂದ ನನಗೆ ಆಘಾತವಾಗಿದೆ. ಮಾತುಗಳೇ ಬರುತ್ತಿಲ್ಲ. ಪ್ರತಿಭಾವಂತ ನಟ..ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ” ಎಂದಿದ್ದಾರೆ.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, “ಯುವ ಪ್ರತಿಭೆಯ ಆತ್ಮಹತ್ಯೆಯಿಂದ ತುಂಬಾ ನೋವಾಗಿದೆ” ಎಂದಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ, “ಇದು ಬಾಲಿವುಡ್ ಗೆ ಎದುರಾಗಬಲ್ಲ ಆಘಾತಕಾರಿ ಸುದ್ದಿಯಾಗಿದೆ. ಇಷ್ಟು ಬದುಕು ಮುಂದಿರುವಾಗ ಇಂತಹ ನಿರ್ಧಾರ ಏಕೆ?” ಎಂದಿದ್ದಾರೆ.
ನಿರ್ದೇಶಕಿ ಎಕ್ತಾ ಕಪೂರ್, “ಇದು ಸರಿಯಲ್ಲ ಸುಶಿ! ಒಂದು ವಾರದಲ್ಲಿ ಎಲ್ಲವೂ ಬದಲಾಯಿತು! ಇದು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅನುಪಮ್ ಖೇರ್, “ನನ್ನ ಪ್ರೀತಿಯ ಸುಶಾಂತ್ ಸಿಂಗ್ ರಾಜಪೂತ್. ಏಕೆ?” ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಸ ಸುಶಾಂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಸುಶಾಂತ್ ರಾಜ್ ಪೂತ್ ..ಪ್ರತಿಭಾವಂತ ಯುವ ನಟ ಇಷ್ಟು ಬೇಗ ಇಹಲೋಕ ತ್ಯಜಿಸಿದ್ದಾರೆ. ತನ್ನ ನಟನೆಯಿಂದ ಇತರರಿಗೆ ಸ್ಫೂರ್ತಿಯಾಗಿದ್ದರು. ಅವರ ಕುಟುಂಬಕ್ಕೆ ಧೈರ್ಯ ದೊರೆಯಲಿ. ಓಂ ಶಾಂತಿ ” ಎಂದಿದ್ದಾರೆ.
ಜೊತೆಗೆ, ಸಚಿವೆ ಸ್ಮೃತಿ ಇರಾನಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತಿತರರು ಕೂಡ ಸಂತಾಪ ಸೂಚಿಸಿದ್ದಾರೆ.

ಸುಶಾಂತ್‌ ಸಿಂಗ್‌ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಕ್ರಿಕೆಟಿಗರು

ಗಾಡ್‌ಫಾದರ್‌ ಇಲ್ಲದೆ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದ ಯುವ ಹಾಗೂ ಪ್ರತಿಭಾನ್ವಿತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಹಾಲಿ ಮಾಜಿ ಕ್ರಿಕೆಟಿಗರ ಸಹಿತ ಗಣ್ಯಾತಿ ಗಣ್ಯರೆಲ್ಲಾ ಕಂಬನಿ ಮಿಡಿದಿದ್ದಾರೆ.

ಭಾರತ ತಂಡದ ಮಾಜಿ ನಾಯಕನ ಜೀವನಾಧಾರಿತ ಸಿನಿಮಾ ‘ಎಂಎಸ್‌ ಧೋನಿ – ದಿ ಅನ್‌ ಟೋಲ್ಡ್‌ ಸ್ಟೋರಿ’ಯಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಸುಶಾಂತ್‌, ತಮ್ಮ ಕಟ್ಟಕಡೆಯ ಸಿನಿಮಾ ‘ಛಿಚೋರೆ’ರೆಯಲ್ಲಿ ಆತ್ಮಹತ್ಯೆಯ ಮನಸ್ಥಿತಿ ಬಗ್ಗೆ ಮತ್ತು ಅದರ ವಿರುದ್ಧ ಹೋರಾಡುವ ಕುರಿತಾಗಿ ಜಾಗೃತಿ ಮೂಡಿಸಿದ್ದರು. ದೃರದೃಷ್ಟವಶಾತ್‌ ಸುಶಾಂತ್‌ ಇಂದು ತಮ್ಮ ಜೀವನ ಕೊನೆಗೊಳಿಸಲು ಆತ್ಮಹತ್ಯೆಯ ಮೊರೆ ಹೋಗಿದ್ದಾರೆ.

ಈ ಬಗ್ಗೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಟೀಮ್‌ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್‌ ವಿವಿಎಸ್‌ ಲಕ್ಷ್ಮಣ್‌ ಮಾನಸಿಕ ಆರೋಗ್ಯದ ಮಹತ್ವದ ಕುರಿತಾಗಿ ಒತ್ತಿ ಹೇಳಿದ್ದಾರೆ. ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ರೋಹಿತ್‌ ಶರ್ಮಾ, ಯುವರಾಜ್‌ ಸಿಂಗ್ ಹಾಗೂ ವಿರಾಟ್‌ ಕೊಹ್ಲಿ ಸೇರಿದಂತೆ ದಿಗ್ಗಜ ಕ್ರಿಕೆಟಿಗರೆಲ್ಲಾ ಸಂತಾಪ ಸೂಚಿಸಿದ್ದಾರೆ.

“ಮಾನಸಿಕ ಆರೋಗ್ಯ ಅತ್ಯಂತ ಗಂಭೀರವಾದ ಸಂಗತಿ. ಈ ಬಗ್ಗೆ ನಾವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚಿನ ಗಮನ ನೀಡಬೇಕಿದೆ. ಸೂಕ್ಷ್ಮವಾಗಿ, ಸಹಾನುಭೂತಿಯಿಂದ, ಸೌಮ್ಯವಾಗಿ ಹಾಗೂ ಸದಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ನೆರವಿಗೆ ಮುಂದಾಗುವ ಅಗತ್ಯವಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಕುಟುಂಬದವರಿಗೆ ನನ್ನ ಸಂತಾಪಗಳು,” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಮಧ್ಯೆ ಭಾರತೀಯ ಕ್ರಿಕೆಟ್‌ನ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಕೂಡ ಟ್ವೀಟ್‌ ಮಾಡಿದ್ದು, “ಸುಶಾಂತ್ ಸಿಂಗ್‌ ರಜಪೂರ್‌ ಅವರ ನಿಧನ ಸುದ್ದಿ ಕೇಳಿ ಅಚ್ಚರಿಯಾಗಿದೆ. ಪ್ರತಿಭಾನ್ವಿತ ಯುವ ನಟ. ಅವರ ಕುಟುಂಬ ಮತ್ತು ಬಂಧು ಮಿತ್ರರಿಗೆ ಸಾಂತ್ವಾನ ಹೇಳಬಯಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಕಂಬನಿ ಮಿಡಿದಿದ್ದಾರೆ.

“ಸುಶಾಂತ್‌ ಸಿಂಗ್‌ ಅವರ ಬಗ್ಗೆ ತಿಳಿದು ಅಚ್ಚರಿಯಾಗಿದೆ. ಇದನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ. ಅವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಕೋರಿಕೊಳ್ಳುತ್ತೇನೆ,” ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

“ಹೃದಯ ಒಡೆದುಹೋಗುವಂತಹ ಆಘಾತಕಾರಿ ಸುದ್ದಿಯಿದು. ಸುಶಾಂತ್ ಸಿಂಗ್‌ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅತ್ಯಂತ ಲವಲವಿಕೆಯ ವ್ಯಕ್ತಿ ಅವರು. ಅವರ ಪ್ರೀತಿ ಪಾತ್ರರಿಗೆ ಶಕ್ತಿ ಸಿಗಲಿ. ಅವರ ಸಾವಿನಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ,” ಎಂದು ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ‌ ಟ್ವೀಟ್‌ ಮಾಡಿದ್ದಾರೆ.

s1

ಪ್ರಧಾನಿ ಮೋದಿ ಸಂತಾಪ

ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಉಜ್ವಲಮಯ ನಟ ಇಷ್ಟು ಬೇಗ ಅಗಲಿ ಹೋಗಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಿರುತೆರೆ ಹಾಗೂ ಸಿನೆಮಾದಲ್ಲಿ ಸುಶಾಂತ್ ಜನ ಮನ ಸೆಳೆದಿದ್ದರು. ಮನರಂಜನಾ ಉದ್ಯಮದಲ್ಲಿ ಬಹಳಷ್ಟು ಮಂದಿಗೆ ಅವರು ಮಾದರಿಯಾಗಿದ್ದರು ಎಂದು ಮೋದಿ ಟ್ವೀಟ್ ನಲ್ಲಿ ಗುಣಗಾನ ಮಾಡಿದ್ದಾರೆ. ತೀವ್ರ ದುಃಖದಲ್ಲಿರುವ ಸುಶಾಂತ್ ಕುಟುಂಬಕ್ಕೆ ಪ್ರಧಾನಿ ತಮ್ಮ ಸಂತಾಪ ಸೂಚಿಸಿದ್ದಾರೆ.
“ಸುಶಾಂತ್ ಸಿಂಗ್ ರಜಪೂತ್ .. ಉಜ್ವಲವಾದ ನಟ, ಇಷ್ಟು ಬೇಗ ಅಗಲಿದ್ದಾರೆ. ಕಿರುತೆರೆ ಹಾಗೂ ಸಿನಿಮಾದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಮನರಂಜನಾ ಜಗತ್ತಿನಲ್ಲಿ ಅವರು ಬಹಳಷ್ಟು ಮಂದಿಗೆ ಸ್ಫೂರ್ತಿಯಾಗಿದ್ದರು. ಅನೇಕ ಸ್ಮರಣೀಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅವರು ಮೃತಪಟ್ಟರೆಂಬ ವಿಷಯ ತಿಳಿದು ನನಗೆ ಆಘಾತವಾಗಿದೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ”ಎಂದು ಮೋದಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ (೩೪) ಮುಂಬೈನಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧೋನಿ ಜೀವನ ಕತೆ ಆಧಾರಿತ ಚಿತ್ರದಲ್ಲಿ ನಾಯಕನಾಗಿ ನಟಿಸಿ ಹೆಸರು ವಾಸಿಯಾಗಿದ್ದರು. ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಜನವರಿ ೨೧, ೧೯೮೬ ರಂದು ಪಾಟ್ನಾದಲ್ಲಿ ಜನಿಸಿದ್ದರು. ಅವರು ೨೦೧೩ ರಲ್ಲಿ ಬಿಡುಗಡೆಯಾದ ’ಕೈ ಪೊ ಚೆ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಸೇವಾ ಕಾರ್ಯಕ್ರಮಗಳ ಮೂಲಕ ಅವರು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಸುಶಾಂತ್ ಪಾರ್ ಎಜುಕೇಶನ್ ಹೆಸರಿನಲ್ಲಿ ಸೇವಾ ಸಂಸ್ಥೆಯನ್ನೂ ನಡೆಸುತ್ತಿದ್ದರು

Share

Leave a Comment