ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಕುರುಗೋಡು ತಹಶೀಲ್ದಾರ್:ಆರೋಪ

ಬಳ್ಳಾರಿ, ಆ.10: ಜಿಲ್ಲೆಯ ಕುರುಗೋಡಿನ ತಹಶೀಲ್ದಾರ್ ಅವರು ಎಸ್ಪಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಇತರೇ ವರ್ಗದವರಿಗೆ ನೀಡಿದ್ದು ಅವರ ಮೇಲೆ ಕ್ರಮ ಜರುಗಿಸಬೇಕೆಂದು ದಲಿತ ಹಕ್ಕುಗಳ ಸಮಿತಿ ಕುರುಗೋಡಿನ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅವರಿಗೆ ಮನವಿ ಮಾಡಿದೆ.

ಕುರುಗೋಡು ತಾಲೂಕಿನ ಎಮ್ಮಿಗನೂರು ಗ್ರಾಮದ ದೊಡ್ಡಯ್ಯ ಎಂಬುವವರು ಜಂಗಮ ಜಾತಿಗೆ ಸೇರಿದವರಾಗಿದ್ದು ಅವರಿಗೆ 2017ರ ನವೆಂಬರ್ 11ರಂದು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜಂಗಮ ಜಾತಿಗೆ ಸೇರಿದವರಿಗೆ ಈ ರೀತಿ ಸುಳ್ಳು ಪ್ರಮಾಣ ಪತ್ರ ನೀಡಿ ದಲಿತ ಸಮುದಾಯಕ್ಕೆ ಅವಮಾನಿಸಿದ್ದಲ್ಲದೆ ಅನ್ಯಾಯ ಮಾಡಿದ್ದು, ದಲಿತ ಸಮುದಾಯಕ್ಕೆ ಸೇರಿದವರಿಗೆ ದೊರೆಯುವ ಸೌಲಭ್ಯ ವಂಚನೆ ಮಾಡುವ ಹುನ್ನಾರವಾಗಿದೆ.

ಅದಕ್ಕಾಗಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಮಿತಿಯ ಮುಖಂಡರುಗಳಾದ ಎನ್.ಸೋಮಪ್ಪ, ಹೆಚ್.ಕೆಂಚಪ್ಪ, ಹೆಚ್.ಯಂಕಪ್ಪ, ಹೆಚ್.ಹನುಮಂತ, ಹೆಚ್.ಲಕ್ಷ್ಮಣ, ವಿ.ಎಸ್.ಶಿವಶಂಕರ ಆಗ್ರಹಿಸಿದ್ದಾರೆ.

Leave a Comment