ಸುಳ್ಳು ಆರೋಪಗಳಿಗೆ ಯುಪಿಎ ಬಲಿಪಶು

ನವದೆಹಲಿ, ಸೆ.೪-ಯಪಿಎ ತನ್ನ ಅಧಿಕಾರದ ಅವಧಿಯಲ್ಲಿ ತನ್ನ ನಿಲುವುಗಳನ್ನು ಬಲವಾಗಿ ಸಮರ್ಥಿಸಿಕೊಳ್ಳಲು ವಿಫಲವಾಗಿ ಸುಳ್ಳಿನ ಕಂತೆಗಳಿಗೆ ಬಲಿಪಶುವಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ಹಿರಿಯ ಕಾಂಗ್ರೆಸ್ ಮುಖಂq ಹಾಗೂ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ಯುಪಿಎ ಸರ್ಕಾರದಲ್ಲಿ ನಡೆದ  ೧.೭೬ ಲಕ್ಷ ಕೋಟಿ ೨ ಜಿ ತರಾಂಗತರ ಹಗರಣದಲ್ಲಿ ಅಂದು ಮಹಾಲೇಖಪಾಲರಾಗಿದ್ದ ವಿನೋದ್ ರಾಯ್ ೨ಜಿ ತರಾಂಗತರ ಹಂಚೆಕೆಂiಲ್ಲಿನಡೆದಿರುವ ಹಗರರಣದ ಬಗ್ಗೆ ವ್ಯತಿರಿಕ್ತ ಆರೋಪ ಹೊರಿಸಿದ್ದರಿಂದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರ ಸೋಲು ಅನುಭವಿಸಲು ಪ್ರಮುಖ ಕಾರಣವೆಂದು ಕಪಿಲ್ ಸಿಬಿಲ್ ವಿಶ್ಲೇಷಿಸಿದ್ದಾರೆ.

ಯುಪಿಎ ಸರ್ಕಾರದ ಆವಧಿಯಲ್ಲಿ ಕೇಳಿಬಂದ ಆರೋಪಗಳನ್ನು ಅರಗಿಸಿಕೊಳ್ಳಲು ಮತ್ತು ಸಮರ್ಥಿಸಿಕೊಳ್ಳಲೂ ಆಗಲಿಲ್ಲ. ಯುಪಿಎ ಸರ್ಕಾರದಲ್ಲಿ ಕೆಲವರು ಮಾತ್ರ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದರೆ  ಹೊರತು ಸಾಮೂಹಿಕ ಪ್ರಯತ್ನದ ಮೂಲಕ ಸಮರ್ಥಿಸಿಕೊಳ್ಳಲು ಆಗಲಿಲ್ಲ ಎಂದು  ’ ಸತ್ಯದ ಛಾಯೆಗಳು’ ಕುರಿತ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಬರೆದಿರುವುದಾಗಿ ಕಪಿಲ್ ಸಿಲ್  ಸಂದರ್ಶನದಲ್ಲಿ ತಿಳಿಸಿದ್ದಾರೆ.

ಯುಪಿಎ ಸರ್ಕಾರದ ನಿಲುವಗಳನ್ನು ಸಮರ್ಥಿಸಿಕೊಳ್ಳಲು ಕೆಲವರಿಗೆ ಇಷ್ಟವಿರಲಿಲ್ಲ. ಆದರೆ ಅವರ ಹೆಸರುಗಳನ್ನು ಬಹಿರಂಗಡಿಸಲು ಅವರು ನಿರಾಕರಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ  ೨ಜಿ ಹಗರಣ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಸುದೀರ್ಘ ವಿಚಾರಣೆಯ ಬಳಿಕ ಅವ್ಯಹಾರ ನಡೆದಿರುವ ಬಗ್ಗೆ ಯಾವುದೇ ಪುರಾವಗೆಳು ದೊರೆಯದ ಕಾರಣ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು ಎಂದು ಅವರು ಹೇಳಿದರು.

ಆವಧಿಯಲ್ಲಿ ೨ಜಿ, ಕಲ್ಲಿದ್ದಲು ಸೇರಿದಂತೆ ಹಲವು ಹಗರಣಗಳು ನಡೆದ ಯುಪಿಎ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದಿದ್ದವು. ಈ ಸರ್ಕಾರದಲ್ಲಿ ಸಿಬಲ್ ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದ ತಮಗೆ, ಭ್ರಷ್ಟಾಚಾರ ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣ ಹಜಾರೆ, ಯೋಗ ಗುರು ಬಾಬಾ ರಾಮ್‌ದೇವ್ ಜೂತೆ ನಡೆಸಿದ ಸಂಧಾನ ಮಾತುಕತೆ ವೇಳೆ ತಪ್ಪೆಸಗಿದ್ದು ಪಕ್ಕಕ್ಕೆ ಮುಳುವಾಯಿತು ಎಂದು ಅವರು ವಿಶ್ಲೇಷಿಸಿದರು.

ಈಗ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮತ್ತು ಆರ್ಥಿಕ ರಂಗಗಳಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜನರನ್ನು ನಡುರಸ್ತೆಯಲ್ಲೆ ಬಡಿದು ಕೊಂದು ಹಾಕಲಾಗುತ್ತಿದೆ, ಬೇರೊಬ್ಬರನ್ನು ಟೀಕೆ ಮಾಡಿದರೆ ಅವರನ್ನು ಬಂಧಿಸಲಾಗುತ್ತಿದೆ. ಈ  ಅಂಶಗಳನ್ನು ಗಮನಿಸಿದರೆ ಬಿಜೆಪಿ ಅಡ್ಡಿಪಡಿಸುವ ರಾಜಕೀಯ ಮಾಡುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಕಾಂಗ್ರೆಸ್ ಸಂತೃಪ್ಪರಾಗದೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೂತೆ ಹೊಂದಾಣಿಕೆ ಮಾಡಿಕೊಂಡು ರಣನೀತಿ ರೂಪಿಸುತ್ತೇವೆ ಎಂದು ಸಿಬಲ್ ತಿಳಿಸಿದರು.

Leave a Comment